ಜೂನ್ 9ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಪಂದ್ಯ
ನ್ಯೂಯಾರ್ಕ್ ನೆಲದಲ್ಲಿ ಹೈವೋಲ್ಟೇಜ್ ಮ್ಯಾಚ್, ಬದ್ಧವೈರಿಗಳು ಮುಖಾಮುಖಿ
ಟೀಂ ಇಂಡಿಯಾ ಮತ್ತು ಪಾಕ್ ಪಂದ್ಯ ನೋಡಲು ಸ್ಟೇಡಿಯಂಗೆ ಯಾಕ್ ಬರ್ತಿಲ್ಲ!
ಇಂಡಿಯಾ vs ಪಾಕ್ ಮ್ಯಾಚ್. ಈ ಹೈವೋಲ್ಟೇಜ್ ಮ್ಯಾಚ್ ಅಂದ್ರೆ, ಎಲ್ಲಿಲ್ಲದ ಕ್ರೇಜ್. ಈ ಬದ್ಧವೈರಿಗಳು ಮುಖಾಮುಖಿಯಾಗ್ತಿವೆ ಅಂದ್ರೆ ಸಾಕು. ಮ್ಯಾಚ್ ಟಿಕೆಟ್ಸ್ ನಿಮಿಷಗಳಲ್ಲೇ ಖಾಲಿಯಾಗ್ತಾವೆ. ನಿಜ. ಪ್ರಸಕ್ತ ಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಇಂಡೋ- ಪಾಕ್ ಪಂದ್ಯದ ಒಂದೊಂದು ಟಿಕೆಟ್ ಬೆಲೆ ಕೇಳಿದ್ರೆ, ನೀವು ಶಾಕ್ ಆಗ್ತೀರಾ!. ಲಕ್ಷ ಲೆಕ್ಕದಲ್ಲಿದೆ ಟಿಕೆಟ್ಸ್ ಸೇಲಾಗ್ತಿವೆ.
ಟಿ20 ವಿಶ್ವಕಪ್ ಮಹಾ ಸಮರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಅಮೆರಿಕಾ, ಕೆನಡಾ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡ್ತಿದೆ. ಆದ್ರೆ, ವಿಶ್ವ ಕ್ರಿಕೆಟ್ ಅಭಿಮಾನಿಗಳ ಕಣ್ಣು ಮಾತ್ರ, ಜೂನ್ 9ರ ಭಾರತ ಹಾಗೂ ಪಾಕ್ ಪಂದ್ಯದ ಮೇಲೆ ನೆಟ್ಟಿದೆ. ಈ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಟಿಕೆಟ್ ಬೆಲೆ ಗಗನಕ್ಕೇರಿದ್ದು, ಲಕ್ಷ ಲಕ್ಷ ಕೊಟ್ಟು ಟಿಕೆಟ್ ಖರೀಸಲು ಮುಂದಾಗಿದ್ದಾರೆ.
ಹೌದು! ನ್ಯೂಯಾರ್ಕ್ನ ನಸ್ಸೌ ಕೌಂಟಿ ಬದ್ಧ ವೈರಿಗಳ ಕಾದಾಟಕ್ಕೆ ವೇದಿಕೆಯಾಗಿದೆ. ಹೊಸದಾಗಿ ನಿರ್ಮಿಸಿರುವ ಈ ಕ್ರೀಡಾಂಗಣದಲ್ಲಿ ಡೈಮೆಂಡ್ ಕ್ಲಬ್, ಕಬಾನಾಸ್, ಪ್ರೀಮಿಯಮ್ ಕ್ಲಬ್ ಲಾಂಜಸ್, ಕಾರ್ನರ್ ಕ್ಲಬ್, ಪೆವಿಲಿಯನ್ ಕ್ಲಬ್ ಮತ್ತು ಬೌಂಡರಿ ಕ್ಲಬ್ ಸೇರಿದಂತೆ ಒಟ್ಟು 6 ಹಾಸ್ಪಿಟಾಲಿಟಿ ಪ್ಯಾಕೇಜಸ್ ಲಭ್ಯ ಇರುತ್ತದೆ. ಆದ್ರೆ ಇಂಡೋ, ಪಾಕ್ ಮ್ಯಾಚ್ಗೆ ಮಾತ್ರ, ಡೈಮೆಂಡ್ ಕ್ಲಬ್, ಪ್ರೀಮಿಯಮ್ ಕ್ಲಬ್ ಲಾಂಜಸ್ ಮತ್ತು ಕಾರ್ನರ್ ಕ್ಲಬ್ ಎಂಬ ಮೂರೇ ಮೂರು ಹಾಸ್ಪಿಟಾಲಿಟಿ ಪ್ಯಾಕೇಜಸ್ ಇರಲಿದೆ.
ಡೈಮೆಂಡ್ ಕ್ಲಬ್ ಬೆಲೆ ಎಷ್ಟು..? ಯಾಕೆ ಇದು ಇಷ್ಟು ದುಬಾರಿ..?
ಡೈಮೆಂಡ್ ಕ್ಲಬ್. ಈ ಹೆಸರು ಹೇಳುವಂತೆ ಇದು ಫುಲ್ ಕಾಸ್ಟ್ಲಿ ದುನಿಯಾ. ಯಾಕಂದ್ರೆ, ಇದು ರಾಜಾತಿಥ್ಯದ ಸ್ವೀಕಾರ ಸಿಗುತ್ತೆ. ಆದ್ರೆ ಈ ಡೈಮೆಂಡ್ ಕ್ಲಬ್ ಟಿಕೆಟ್ ರೇಟ್, ಬರೋಬ್ಬರಿ 8 ಲಕ್ಷ 34 ಸಾವಿರದ 323 ರೂಪಾಯಿ.
ಇದು ಯಾಕಿಷ್ಟು ದುಬಾರಿ, ಇದ್ರ ವಿಶೇಷತೆ ಏನು ಅಂದ್ರೆ, ಮ್ಯಾಚ್ ನೋಡಲು ಉತ್ತಮ ವ್ಯೂವ್, ಅನ್ಲಿಮಿಟೆಡ್ ಊಟ ಮತ್ತು ಪಾನಿಯಗಳು, ಏರ್ ಕಂಡೀಷನ್ಡ್ ಜಾಗ, ಪಂದ್ಯಕ್ಕೂ ಮುನ್ನ ಹಾಗೂ ನಂತರ ಕ್ರೀಡಾಂಗಣಕ್ಕೆ ಎಂಟ್ರಿ ಕೊಡಬಹುದು, ಬರುವ ಲೆಜೆಂಡರಿ ಕ್ರಿಕೆಟರ್ಗಳನ್ನ ಭೇಟಿ ಮಾಡಬಹುದು. ಪ್ರೈವೇಟ್ ಎಂಟ್ರೆನ್ಸ್, ಪ್ರೈವೇಟ್ ವಿಐಪಿ ಪಾರ್ಕಿಂಗ್ ವ್ಯವಸ್ಥೆ ಸಿಗುತ್ತೆ.!
ಪ್ರೀಮಿಯಮ್ ಕ್ಲಬ್ ಲಾಂಜಸ್ ಬೆಲೆ ಎಷ್ಟು..? ಇಲ್ಲಿ ಏನೆಲ್ಲಾ ಇರಲಿದೆ..?
ಪ್ರೀಮಿಯಮ್ ಕ್ಲಬ್ ಲಾಂಜಸ್ ಟಿಕೆಟ್ ಬೆಲೆ ಬರೋಬ್ಬರಿ 2 ಲಕ್ಷ 8 ಸಾವಿರದ 585 ರೂಪಾಯಿಯಾಗಿದೆ. ಪ್ರತಿ ಬ್ಲಾಕ್ಗೂ ಬೇರೆ ಬೇರೆ ಟಿಕೆಟ್ ದರ ನಿಗಧಿಸಲಾಗಿದೆ. ಆದ್ರೆ ಡೈಮೆಂಡ್ ಕ್ಲಬ್ಗಿಂತ ಕಡಿಮೆ ಬೆಲೆಯ ಈ ಪ್ರೀಮಿಯಮ್ ಕ್ಲಬ್ ಲಾಂಜಸ್, ಐಷಾರಾಮಿ ಹೋಟೆಲ್ಗಿಂತಲೂ ಕಡಿಮೆ ಇಲ್ಲ. ಪೆವಿಲಿಯನ್ ಬಳಿ ಕೂತು ಪಂದ್ಯ ವೀಕ್ಷಣೆ ಮಾಡಬಹುದು. ಎರಡೂ ಬದಿ ಬ್ಯಾಟಿಂಗ್ ನೋಡಬಹುದು, ಅನ್ಲಿಮಿಟೆಡ್ ಊಟ ಮತ್ತು ಪಾನಿಯಗಳ ಜೊತೆಗೆ ಮಧ್ಯಪಾನ ಖರೀದಿಸಿ ಸೇವಿಸಬಹುದು.
ಕಾರ್ನರ್ ಕ್ಲಬ್ ಬೆಲೆ ಎಷ್ಟು..? ಇದಕ್ಕೆ ಯಾಕಿಷ್ಟು ಡಿಮ್ಯಾಂಡ್..?
ಡೈಮೆಂಡ್, ಪ್ರೀಮಿಯರ್ ಕ್ಲಬ್ ಟಿಕೆಟ್ ಮಾತ್ರವೇ ಅಲ್ಲ..! ಕಾರ್ನರ್ ಕ್ಲಬ್ ಟಿಕೆಟ್ ಬೆಲೆ ಕೂಡ ಕಡಿಮೆ ಏನಿಲ್ಲ. 2 ಲಕ್ಷ 29 ಸಾವಿರದ 413 ರೂಪಾಯಿಂದ ಆರಂಭವಾಗುವ ಈ ಕಾರ್ನರ್ ಕ್ಲಬ್ ಟಿಕೆಟ್ನ ಗರಿಷ್ಠ ಬೆಲೆ, 15 ಲಕ್ಷದ 2 ಸಾವಿರ ರೂಪಾಯಿ ಆಗಿದೆ. ಇನ್ನು ಎಕ್ಸ್ಕ್ಲೂಸಿವ್ ಕಾರ್ನರ್ ಪ್ಲೇಸ್ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ಪ್ರತಿ ಕಾರ್ನರ್ನಲ್ಲಿ 92 ಮಂದಿ ಕೂರಬಹುದು. ಇಲ್ಲಿ ಔಟ್ ಡೋರ್ ಬಫೇ ಮತ್ತು ಬಾರ್ ಕೂಡ ಇರಲಿದೆ.
ಇದನ್ನೂ ಓದಿ: 20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!
34 ಸಾವಿರ ಮಂದಿ ಪಂದ್ಯ ವೀಕ್ಷಿಸಬಹುದಾದ ಸಾಮರ್ಥ್ಯ…!
ಸಾಕಷ್ಟು ವಿಶೇಷತೆಯಿಂದ ಕೂಡಿರುವ ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂ, 34 ಸಾವಿರ ಆಸನದ ಸಾಮರ್ಥ್ಯ ಹೊಂದಿದೆ. ಹೊಸದಾಗಿ ನಿರ್ಮಿಸಿರುವ ಈ ಸ್ಟೇಡಿಯಂ ಪಿಚ್ನ ಮಣ್ಣು, ಆಸ್ಟ್ರೇಲಿಯಾದ ಅಡಿಲೇಡ್ನಿಂದ ಇಂಪೋರ್ಟ್ ಮಾಡಿಕೊಂಡಿದ್ದಾಗಿದ್ದು, ಈ ಪಿಚ್ ಅಡಿಲೇಡ್ ಕಂಡೀಷನ್ಸ್ಗೆ ತಕ್ಕಂತೆ ಇರುತ್ತೆ ಎನ್ನಲಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಫ್ಯಾನ್ಸ್ಗೆ ಸಿಹಿ ಸುದ್ದಿ.. ವಿಶ್ವಕಪ್ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟಿಗ
ಒಟ್ಟಿನಲ್ಲಿ! ಇಂಡೋ-ಪಾಕ್ ಮ್ಯಾಚ್ ವೀಕ್ಷಿಸಲು ಎಷ್ಟೇ ಖರ್ಚಾದ್ರೂ ಪರವಾಗಿಲ್ಲ, ಟಿಕೆಟ್ ಖರೀದಿಸೇ ಖರೀದಿಸ್ತಾರೆ..! ಆದ್ರೆ ನ್ಯೂಯಾರ್ಕ್ನಲ್ಲಿ ಮಾತ್ರ, ದುಬಾರಿ ಬೆಲೆಯ ಟಿಕೆಟ್ಗೆ ಬೆಚ್ಚಿಬಿದ್ದಿರುವ ಕ್ರಿಕೆಟ್ ಫ್ಯಾನ್ಸ್, ಮನೆಯಲ್ಲೇ ಕೂತು ಟಿವಿ ವೀಕ್ಷಿಸಲು ನಿರ್ಧಾರಿಸಿದಂತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್