newsfirstkannada.com

INDvsPAK ಪಂದ್ಯಕ್ಕೆ ಡಿಮ್ಯಾಂಡೇ ಇಲ್ಲ! ಟಿಕೆಟ್​ ಖರೀದಿಸಲು ಮುಂದೆ ಬರುತ್ತಿಲ್ಲ ಫ್ಯಾನ್ಸ್​! ಯಾಕೆ?

Share :

Published June 2, 2024 at 3:02pm

  ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪಂದ್ಯ

  ನ್ಯೂಯಾರ್ಕ್​ ನೆಲದಲ್ಲಿ ಹೈವೋಲ್ಟೇಜ್ ಮ್ಯಾಚ್, ಬದ್ಧವೈರಿಗಳು ಮುಖಾಮುಖಿ

  ಟೀಂ ಇಂಡಿಯಾ ಮತ್ತು ಪಾಕ್​​ ಪಂದ್ಯ ನೋಡಲು ಸ್ಟೇಡಿಯಂಗೆ ಯಾಕ್​ ಬರ್ತಿಲ್ಲ!

ಇಂಡಿಯಾ vs ಪಾಕ್ ಮ್ಯಾಚ್. ಈ ಹೈವೋಲ್ಟೇಜ್ ಮ್ಯಾಚ್ ಅಂದ್ರೆ, ಎಲ್ಲಿಲ್ಲದ ಕ್ರೇಜ್. ಈ ಬದ್ಧವೈರಿಗಳು ಮುಖಾಮುಖಿಯಾಗ್ತಿವೆ ಅಂದ್ರೆ ಸಾಕು. ಮ್ಯಾಚ್ ಟಿಕೆಟ್ಸ್​ ನಿಮಿಷಗಳಲ್ಲೇ ಖಾಲಿಯಾಗ್ತಾವೆ. ನಿಜ. ಪ್ರಸಕ್ತ ಟಿ-ಟ್ವೆಂಟಿ ವಿಶ್ವಕಪ್​ನಲ್ಲಿ ಇಂಡೋ- ಪಾಕ್ ಪಂದ್ಯದ ಒಂದೊಂದು ಟಿಕೆಟ್​ ಬೆಲೆ ಕೇಳಿದ್ರೆ, ನೀವು ಶಾಕ್ ಆಗ್ತೀರಾ​​​!. ಲಕ್ಷ ಲೆಕ್ಕದಲ್ಲಿದೆ ಟಿಕೆಟ್ಸ್ ಸೇಲಾಗ್ತಿವೆ.

ಟಿ20 ವಿಶ್ವಕಪ್ ಮಹಾ ಸಮರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಅಮೆರಿಕಾ, ಕೆನಡಾ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡ್ತಿದೆ. ಆದ್ರೆ, ವಿಶ್ವ ಕ್ರಿಕೆಟ್​ ಅಭಿಮಾನಿಗಳ ಕಣ್ಣು ಮಾತ್ರ, ಜೂನ್ 9ರ ಭಾರತ ಹಾಗೂ ಪಾಕ್ ಪಂದ್ಯದ ಮೇಲೆ ನೆಟ್ಟಿದೆ. ಈ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ತುದಿಗಾಲಲ್ಲಿ ನಿಂತಿದ್ದಾರೆ. ಟಿಕೆಟ್ ಬೆಲೆ ಗಗನಕ್ಕೇರಿದ್ದು, ಲಕ್ಷ ಲಕ್ಷ ಕೊಟ್ಟು ಟಿಕೆಟ್ ಖರೀಸಲು ಮುಂದಾಗಿದ್ದಾರೆ.

ಹೌದು! ನ್ಯೂಯಾರ್ಕ್​ನ ನಸ್ಸೌ ಕೌಂಟಿ ಬದ್ಧ ವೈರಿಗಳ ಕಾದಾಟಕ್ಕೆ ವೇದಿಕೆಯಾಗಿದೆ. ಹೊಸದಾಗಿ ನಿರ್ಮಿಸಿರುವ ಈ ಕ್ರೀಡಾಂಗಣದಲ್ಲಿ ಡೈಮೆಂಡ್ ಕ್ಲಬ್, ಕಬಾನಾಸ್, ಪ್ರೀಮಿಯಮ್ ಕ್ಲಬ್ ಲಾಂಜಸ್, ಕಾರ್ನರ್ ಕ್ಲಬ್, ಪೆವಿಲಿಯನ್ ಕ್ಲಬ್ ಮತ್ತು ಬೌಂಡರಿ ಕ್ಲಬ್ ಸೇರಿದಂತೆ ಒಟ್ಟು 6 ಹಾಸ್ಪಿಟಾಲಿಟಿ ಪ್ಯಾಕೇಜಸ್ ಲಭ್ಯ ಇರುತ್ತದೆ. ಆದ್ರೆ ಇಂಡೋ, ಪಾಕ್ ಮ್ಯಾಚ್​ಗೆ ಮಾತ್ರ, ಡೈಮೆಂಡ್ ಕ್ಲಬ್, ಪ್ರೀಮಿಯಮ್ ಕ್ಲಬ್ ಲಾಂಜಸ್ ಮತ್ತು ಕಾರ್ನರ್ ಕ್ಲಬ್ ಎಂಬ ಮೂರೇ ಮೂರು ಹಾಸ್ಪಿಟಾಲಿಟಿ ಪ್ಯಾಕೇಜಸ್ ಇರಲಿದೆ.

ಡೈಮೆಂಡ್ ಕ್ಲಬ್ ಬೆಲೆ ಎಷ್ಟು..? ಯಾಕೆ ಇದು ಇಷ್ಟು ದುಬಾರಿ..?

ಡೈಮೆಂಡ್ ಕ್ಲಬ್​. ಈ ಹೆಸರು ಹೇಳುವಂತೆ ಇದು ಫುಲ್ ಕಾಸ್ಟ್ಲಿ ದುನಿಯಾ. ಯಾಕಂದ್ರೆ, ಇದು ರಾಜಾತಿಥ್ಯದ ಸ್ವೀಕಾರ ಸಿಗುತ್ತೆ. ಆದ್ರೆ ಈ ಡೈಮೆಂಡ್ ಕ್ಲಬ್ ಟಿಕೆಟ್ ರೇಟ್, ಬರೋಬ್ಬರಿ 8 ಲಕ್ಷ 34 ಸಾವಿರದ 323 ರೂಪಾಯಿ.

ಇದು ಯಾಕಿಷ್ಟು ದುಬಾರಿ, ಇದ್ರ ವಿಶೇಷತೆ ಏನು ಅಂದ್ರೆ, ಮ್ಯಾಚ್ ನೋಡಲು ಉತ್ತಮ ವ್ಯೂವ್, ಅನ್​​ಲಿಮಿಟೆಡ್​ ಊಟ ಮತ್ತು ಪಾನಿಯಗಳು, ಏರ್ ಕಂಡೀಷನ್ಡ್ ಜಾಗ​, ಪಂದ್ಯಕ್ಕೂ ಮುನ್ನ ಹಾಗೂ ನಂತರ ಕ್ರೀಡಾಂಗಣಕ್ಕೆ ಎಂಟ್ರಿ ಕೊಡಬಹುದು, ಬರುವ ಲೆಜೆಂಡರಿ ಕ್ರಿಕೆಟರ್​ಗಳನ್ನ ಭೇಟಿ ಮಾಡಬಹುದು. ಪ್ರೈವೇಟ್ ಎಂಟ್ರೆನ್ಸ್, ಪ್ರೈವೇಟ್ ವಿಐಪಿ ಪಾರ್ಕಿಂಗ್ ವ್ಯವಸ್ಥೆ ಸಿಗುತ್ತೆ.!

ಪ್ರೀಮಿಯಮ್ ಕ್ಲಬ್ ಲಾಂಜಸ್ ಬೆಲೆ ಎಷ್ಟು..? ಇಲ್ಲಿ ಏನೆಲ್ಲಾ ಇರಲಿದೆ..?

ಪ್ರೀಮಿಯಮ್​ ಕ್ಲಬ್ ಲಾಂಜಸ್ ಟಿಕೆಟ್ ಬೆಲೆ ಬರೋಬ್ಬರಿ 2 ಲಕ್ಷ 8 ಸಾವಿರದ 585 ರೂಪಾಯಿಯಾಗಿದೆ. ಪ್ರತಿ ಬ್ಲಾಕ್​ಗೂ ಬೇರೆ ಬೇರೆ ಟಿಕೆಟ್ ದರ ನಿಗಧಿಸಲಾಗಿದೆ. ಆದ್ರೆ ಡೈಮೆಂಡ್​ ಕ್ಲಬ್​ಗಿಂತ ಕಡಿಮೆ ಬೆಲೆಯ ಈ ಪ್ರೀಮಿಯಮ್ ಕ್ಲಬ್ ಲಾಂಜಸ್,​ ಐಷಾರಾಮಿ ಹೋಟೆಲ್​​ಗಿಂತಲೂ ಕಡಿಮೆ ಇಲ್ಲ. ಪೆವಿಲಿಯನ್ ಬಳಿ ಕೂತು ಪಂದ್ಯ ವೀಕ್ಷಣೆ ಮಾಡಬಹುದು. ಎರಡೂ ಬದಿ ಬ್ಯಾಟಿಂಗ್ ನೋಡಬಹುದು, ಅನ್​​ಲಿಮಿಟೆಡ್​​ ಊಟ ಮತ್ತು ಪಾನಿಯಗಳ ಜೊತೆಗೆ ಮಧ್ಯಪಾನ ಖರೀದಿಸಿ ಸೇವಿಸಬಹುದು.

ಕಾರ್ನರ್ ಕ್ಲಬ್ ಬೆಲೆ ಎಷ್ಟು..? ಇದಕ್ಕೆ ಯಾಕಿಷ್ಟು ಡಿಮ್ಯಾಂಡ್..?

ಡೈಮೆಂಡ್​, ಪ್ರೀಮಿಯರ್​ ಕ್ಲಬ್ ಟಿಕೆಟ್ ಮಾತ್ರವೇ ಅಲ್ಲ..! ಕಾರ್ನರ್ ಕ್ಲಬ್ ಟಿಕೆಟ್ ಬೆಲೆ ಕೂಡ ಕಡಿಮೆ ಏನಿಲ್ಲ. 2 ಲಕ್ಷ 29 ಸಾವಿರದ 413 ರೂಪಾಯಿಂದ ಆರಂಭವಾಗುವ ಈ ಕಾರ್ನರ್​ ಕ್ಲಬ್ ಟಿಕೆಟ್​​ನ ಗರಿಷ್ಠ ಬೆಲೆ, 15 ಲಕ್ಷದ 2 ಸಾವಿರ ರೂಪಾಯಿ ಆಗಿದೆ. ಇನ್ನು ಎಕ್ಸ್​ಕ್ಲೂಸಿವ್ ಕಾರ್ನರ್ ಪ್ಲೇಸ್​​​ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ಪ್ರತಿ ಕಾರ್ನರ್​ನಲ್ಲಿ 92 ಮಂದಿ ಕೂರಬಹುದು. ಇಲ್ಲಿ ಔಟ್ ಡೋರ್ ಬಫೇ ಮತ್ತು ಬಾರ್ ಕೂಡ ಇರಲಿದೆ. ​

ಇದನ್ನೂ ಓದಿ: 20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!

34 ಸಾವಿರ ಮಂದಿ ಪಂದ್ಯ ವೀಕ್ಷಿಸಬಹುದಾದ ಸಾಮರ್ಥ್ಯ…!

ಸಾಕಷ್ಟು ವಿಶೇಷತೆಯಿಂದ ಕೂಡಿರುವ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂ, 34 ಸಾವಿರ ಆಸನದ ಸಾಮರ್ಥ್ಯ ಹೊಂದಿದೆ. ಹೊಸದಾಗಿ ನಿರ್ಮಿಸಿರುವ ಈ ಸ್ಟೇಡಿಯಂ ಪಿಚ್​ನ ಮಣ್ಣು, ಆಸ್ಟ್ರೇಲಿಯಾದ ಅಡಿಲೇಡ್​ನಿಂದ ಇಂಪೋರ್ಟ್​ ಮಾಡಿಕೊಂಡಿದ್ದಾಗಿದ್ದು, ಈ ಪಿಚ್ ಅಡಿಲೇಡ್ ಕಂಡೀಷನ್ಸ್​ಗೆ ತಕ್ಕಂತೆ ಇರುತ್ತೆ ಎನ್ನಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಫ್ಯಾನ್ಸ್​ಗೆ ಸಿಹಿ ಸುದ್ದಿ.. ವಿಶ್ವಕಪ್​ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​​ ಕ್ರಿಕೆಟಿಗ

ಒಟ್ಟಿನಲ್ಲಿ! ಇಂಡೋ-ಪಾಕ್ ಮ್ಯಾಚ್ ವೀಕ್ಷಿಸಲು ಎಷ್ಟೇ ಖರ್ಚಾದ್ರೂ ಪರವಾಗಿಲ್ಲ, ಟಿಕೆಟ್ ಖರೀದಿಸೇ ಖರೀದಿಸ್ತಾರೆ..! ಆದ್ರೆ ನ್ಯೂಯಾರ್ಕ್​ನಲ್ಲಿ ಮಾತ್ರ, ದುಬಾರಿ ಬೆಲೆಯ ಟಿಕೆಟ್​ಗೆ ಬೆಚ್ಚಿಬಿದ್ದಿರುವ ಕ್ರಿಕೆಟ್ ಫ್ಯಾನ್ಸ್, ಮನೆಯಲ್ಲೇ ಕೂತು ಟಿವಿ ವೀಕ್ಷಿಸಲು ನಿರ್ಧಾರಿಸಿದಂತಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

INDvsPAK ಪಂದ್ಯಕ್ಕೆ ಡಿಮ್ಯಾಂಡೇ ಇಲ್ಲ! ಟಿಕೆಟ್​ ಖರೀದಿಸಲು ಮುಂದೆ ಬರುತ್ತಿಲ್ಲ ಫ್ಯಾನ್ಸ್​! ಯಾಕೆ?

https://newsfirstlive.com/wp-content/uploads/2024/06/INDIA.jpg

Load More