/newsfirstlive-kannada/media/media_files/2025/11/17/medina-accident-1-2025-11-17-11-34-49.jpg)
ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 42 ಭಾರತೀಯರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೆಕ್ಕಾದಿಂದ ಮದೀನಾಗೆ (Makkah to Madina) ಹೋಗುತ್ತಿದ್ದಾಗ ಬಸ್ ದುರಂತ ಸಂಭವಿಸಿದೆ. ಮೃತರೆಲ್ಲ Umrah pilgrims ಎಂದು ವರದಿಯಾಗಿದೆ.
ಮುಫರಿಹತ್ ಬಳಿ ಪ್ರಯಾಣಿಕರಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಭಾರೀ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾರತೀಯ ಕಾಲಮಾನ ಬೆಳಗಿನ ಜಾವ 1:30 ರ ಸುಮಾರಿಗೆ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ಮತ್ತೆ ಅಶ್ವಿನಿ ಕೆಣಕಿದ ಗಿಲ್ಲಿ.. ಮುಂದೆ ಏನಾಯ್ತು..? VIDEO
/filters:format(webp)/newsfirstlive-kannada/media/media_files/2025/11/17/medina-accident-2025-11-17-10-48-31.jpg)
ಮೂಲಗಳ ಪ್ರಕಾರ.. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಎಲ್ಲಾ ಪ್ರಯಾಣಿಕರು ಹೈದರಾಬಾದ್ ಮತ್ತು ತೆಲಂಗಾಣ ನಿವಾಸಿಗಳು ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ಸುಮಾರು 20 ಮಹಿಳೆಯರು ಮತ್ತು 11 ಮಕ್ಕಳು ಬಸ್ಸಿನಲ್ಲಿದ್ದರು. ಅಪಘಾತದ ಸಮಯದಲ್ಲಿ ಹಲವರು ನಿದ್ರಿಸುತ್ತಿದ್ದರು, ಆದ್ದರಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಇವರೆಲ್ಲರೂ ಮೆಕ್ಕಾದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ ಮದೀನಾಕ್ಕೆ ತೆರಳುತ್ತಿದ್ದರು. ತುರ್ತು ರಕ್ಷಣಾ ತಂಡಗಳು ಅಪಘಾತದ ಸ್ಥಳಕ್ಕೆ ಆಗಮಿಸಿದ್ದಾರೆ. ಈ ದುರಂತದಲ್ಲಿ 42 ಯಾತ್ರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮನಿ ಡಬ್ಲಿಂಗ್ ಮೋಸ, ಕೋಟಿ ಕೋಟಿ ವಂಚನೆ.. ಅಮಾಯಕರಿಗೆ ನಂಬಿಸಿ ಕಿಲಾಡಿ ದಂಪತಿ ವಂಚನೆ ಆರೋಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us