ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮತ್ತೆ ಮುಂದುವರಿದಿದೆ. ದೀಪು ಚಂದ್ರ ದಾಸ್ ನಂತರ, ಗುಂಪೊಂದು ಈಗ ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ ನನ್ನು ಹೊಡೆದು ಸಾಯಿಸಿದೆ ಎಂದು ವರದಿಯಾಗಿದೆ.

author-image
Ganesh Kerekuli
Bangladesh
Advertisment

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮತ್ತೆ ಮುಂದುವರಿದಿದೆ. ದೀಪು ಚಂದ್ರ ದಾಸ್ ನಂತರ, ಗುಂಪೊಂದು ಈಗ ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ ನನ್ನು ಹೊಡೆದು ಸಾಯಿಸಿದೆ ಎಂದು ವರದಿಯಾಗಿದೆ.

29 ವರ್ಷದ ಅಮೃತ್‌ನನ್ನ ಜೀವ ತೆಗೆದು ವಿಕೃತಿ ಮೆರೆದಿದ್ದಾರೆ. ಈ ಘಟನೆಯು ರಾಜ್ಬರಿ ಜಿಲ್ಲೆಯಲ್ಲಿ ನಡೆದಿದೆ.‌ ಹತ್ಯೆಗೂ ಮೊದಲು ಸ್ಥಳೀಯ ನಿವಾಸಿಗಳು ಅಮೃತ್ ಮಂಡಲ್‌ನ ಲೂಟಿ ಮಾಡಿದ್ದಾರೆ. ನಂತರ ಹಿಂಸೆ ನೀಡಿ ಜೀವ ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಪ್ರಕಾರ ಸಂಬಳ- ಎಷ್ಟು ಹೈಕ್ ಆಗಬಹುದು?

ಪೊಲೀಸ್ ದಾಖಲೆಗಳ ಪ್ರಕಾರ, ಅಮೃತ್ ಮಂಡಲ್ "ಸಾಮ್ರಾಟ್ ವಾಹಿನಿ" ಎಂಬ ಸ್ಥಳೀಯ ಗ್ಯಾಂಗ್‌ನ ನಾಯಕನಾಗಿದ್ದ. ಮಂಗಳವಾರ, ಚಿತ್ತಗಾಂಗ್ ಬಳಿಯ ರಯೋಜನ್ ಪ್ರದೇಶದಲ್ಲಿ ಒಂದು ಹಿಂದೂ ಕುಟುಂಬದ ಮನೆಗೆ ಬೆಂಕಿ ಹಚ್ಚಲಾಯಿತು. ಐದು ದಿನಗಳಲ್ಲಿ, ರಯೋಜನ್ ಪ್ರದೇಶದಲ್ಲಿ ಏಳು ಹಿಂದೂ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರು ಇಲ್ಲಿಯವರೆಗೆ ಐವರು ಶಂಕಿತರನ್ನು ಬಂಧಿಸಿದ್ದಾರೆ.

ಕಳೆದ ವಾರ ಮೈಮೆನ್ಸಿಂಗ್ ನಗರದಲ್ಲಿ ಒಂದು ಗುಂಪು 28 ವರ್ಷದ ಹಿಂದೂ ಕಾರ್ಖಾನೆ ಕೆಲಸಗಾರ ದೀಪು ಚಂದ್ರ ದಾಸ್ ಅವರನ್ನು ದೇವದೂಷಣೆಯ ಆರೋಪದ ಮೇಲೆ ಥಳಿಸಿತ್ತು. ಈ ಘಟನೆಯು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾಯಿತು. ಉಸ್ತುವಾರಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್, ಮೃತರ ಪತ್ನಿ, ಚಿಕ್ಕ ಮಕ್ಕಳು ಮತ್ತು ಪೋಷಕರಿಗೆ ಸರ್ಕಾರವು ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 12 ಜನರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಚರ್ಚ್‌ಗೆ ಹೋಗಿ ವಾಪಸ್‌ ಆಗ್ತಿದ್ದಾಗ ದುರಂತ; ಇಬ್ಬರು ಸಹೋದರರು ಸೇರಿ ನಾಲ್ವರು ಯುವಕರು ಬಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Amrit Mandal Bangladesh
Advertisment