/newsfirstlive-kannada/media/media_files/2025/11/25/arunachal-pradesh-prema-1-2025-11-25-09-56-42.jpg)
ನಾಯಿ ಬಾಲಯಾವತ್ತಿದ್ದರೂ ಡೊಂಕು ಅನ್ನೋ ಗಾಧೆ ಮಾತು ಕೇಳಿರ್ತೀರಿ. ಆ ಮಾತು ಗುಳ್ಳೆ ನರಿ ಡ್ರ್ಯಾಗನ್​ ರಾಷ್ಟ್ರ ಚೀನಾಗೆ ಹೇಳಿ ಮಾಡಿಸಿದಂತೆ ಇದೆ. ಭಾರತದ ಭೂಭಾಗವಾಗಿರುವ ಅರುಣಾಚಲ ಪ್ರದೇಶವನ್ನು ಗುಳ್ಳೆ ನರಿ ಚೀನಾ ತನ್ನದೆಂದು ಹೇಳಿಕೊಳ್ಳುತ್ತಾ ಉದ್ಧಟತನ ಮೆರೆಯುತ್ತಿರೋದು ಹೊಸದೇನಲ್ಲ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಚೀನಾದ ಅಧಿಕಾರಿಗಳು.. ಭಾರತದ ಪಾಸ್​​ಪೋರ್ಟ್​​ ಹೊಂದಿದ್ದ ಅರುಣಾಚಲ ಪ್ರದೇಶದ ಮಹಿಳೆಗೆ ಕಿರುಕುಳ ನೀಡಿ.. ನೀಚ ಕೃತ್ಯವೆಸಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ದೌಡಾಯಿಸಿದ ವೇಣುಗೋಪಾಲ್.. ಕುರ್ಚಿ ಕದನಕ್ಕೆ ಮತ್ತೊಂದು ಆಯಾಮ..!
/filters:format(webp)/newsfirstlive-kannada/media/media_files/2025/11/25/arunachal-pradesh-prema-2025-11-25-09-59-13.jpg)
ಅರುಣಾಚಲ ಪ್ರದೇಶದಲ್ಲಿ ಜನಿಸಿರುವ ಭಾರತೀಯ ಮೂಲದ ಯು.ಕೆ ನಿವಾಸಿಯಾದ ಮಹಿಳೆಯೊಬ್ಬರು ಚೀನಾದ ಶಾಂಘೈನ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಅರುಣಾಚಲದಲ್ಲಿ ಜನಿಸಿರುವ ಪ್ರೇಮಾ ವಾಂಗ್‌ಜೋಮ್ ಥೋಂಗ್‌ಡಾಕ್
- ನವೆಂಬರ್​ 21ರಂದು ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದರು
- ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಲ್ಲಿ 3 ಗಂಟೆಗಳ ನಿಗದಿತ ಲೇಓವರ್
- ಈ ವೇಳೆ ಅಧಿಕಾರಿಗಳಿಂದ ಮಹಿಳೆಯ ಪಾಸ್​ಪೋರ್ಟ್​ ಪರಿಶೀಲನೆ
- ಮಹಿಳೆಯ ಭಾರತದ ಪಾಸ್​​ಪೋರ್ಟ್​ನಲ್ಲಿ ಅರುಣಾಚಲ ಪ್ರದೇಶ ಉಲ್ಲೇಖ
- ಪಾಸ್​ಪೋರ್ಟ್​​ ಅನ್ನು ಅಮಾನ್ಯ ಎಂದು ಘೋಷಿಸಿದ ಅಧಿಕಾರಿಗಳು
- ಅರುಣಾಚಲ ಪ್ರದೇಶ ಚೀನಾದ ಭಾಗ ಎಂದ್ರಂತೆ ಚೀನಾದ ಅಧಿಕಾರಿಗಳು
- ಚೀನಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಮಹಿಳೆಗೆ ಸೂಚನೆ
- ಸ್ಪಷ್ಟ ಮಾಹಿತಿ, ಆಹಾರ ಮತ್ತು ಮೂಲಭೂತ ಸೌಲಭ್ಯ ನೀಡಲು ನಕಾರ
- 18 ಗಂಟೆಗಳವರೆಗೆ ಕಿರುಕುಳ ನೀಡಿದರು ಎಂದು ಪ್ರೇಮಾ ಆರೋಪ
ಕೊನೆಗೆ ಯುಕೆಯಲ್ಲಿರುವ ಸ್ನೇಹಿತರ ಮೂಲಕ ಶಾಂಘೈನಲ್ಲಿರುವ ಭಾರತೀಯ ಧೂತಾವಾಸವನ್ನು ಸಂಪರ್ಕಿಸುವಲ್ಲಿ ಪ್ರೇಮಾ ಯಶಸ್ವಿಯಾಗಿದ್ದಾರೆ. ಆ ನಂತರ ಭಾರತೀಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ತಡರಾತ್ರಿ ಪ್ರಯಾಣ ಮುಂದುವರೆಸಲು ನೆರವಾದರು ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಭಾರತದ ಸಾರ್ವಭೌಮತ್ವಕ್ಕೆ ಅವಮಾನ ಎಂದು ಕರೆದಿರುವ ಥಾಂಗ್‌ಡಾಕ್, ಬೀಜಿಂಗ್ ಜೊತೆ ಚರ್ಚಿಸಿ, ಸೂಕ್ತ ಪರಿಹಾರವನ್ನು ಪಡೆಯುವಂತೆಯೂ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಧರ್ಮಧ್ವಜ ಸ್ಥಾಪನೆಗೆ ಅಯೋಧ್ಯೆ ಸಜ್ಜು.. ಇವತ್ತು ಮೋದಿಯಿಂದ ಕೇಸರಿಧ್ವಜ ಪ್ರತಿಷ್ಠಾಪನೆ..! PHOTOS
ಚೀನಾದಲ್ಲಿ ಅರುಣಾಚಲ ಪ್ರದೇಶದ ಮಹಿಳೆಗೆ ಕಿರುಕುಳ ಪ್ರಕರಣ ಬಯಲಿಗೆ ಬರ್ತಿದ್ದಂತೆ.. ಈ ಬಗ್ಗೆ ಭಾರತ ಚೀನಾಗೆ ಖಡಕ್​ ಸಂದೇಶವನ್ನು ರವಾನಿಸಿದೆ. ಅರುಣಾಚಲ ಪ್ರದೇಶವು ಭಾರತದ ಭೂಪ್ರದೇಶದ ನಿರ್ವಿವಾದದ ಭಾಗವಾಗಿದೆ. ಅದರ ನಿವಾಸಿಗಳು ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಲು ಮತ್ತು ಪ್ರಯಾಣಿಸಲು ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ಭಾರತ ಸ್ಪಷ್ಟವಾಗಿ ಚೀನಾಗೆ ಹೇಳಿದೆ.
ಒಟ್ಟಾರೆ.. ಭಾರತದ ಜೊತೆ ಸ್ನೇಹಹಸ್ತ ಚಾಚುತ್ತಲೇ ಡ್ರ್ಯಾಗನ್​ ರಾಷ್ಟ್ರ.. ತನ್ನ ಗುಳ್ಳೆ ನರಿ ಬುದ್ಧಿಯನ್ನೂ ಪ್ರದರ್ಶಿಸುತ್ತಲೇ ಇದೆ. ಭಾರತ ಕೂಡ ಚೀನಾಗೆ ತಕ್ಕ ಉತ್ತರ ನೀಡುತ್ತಲೇ ಇದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us