/newsfirstlive-kannada/media/media_files/2025/10/27/cm-siddu-and-dks-watching-chair-2025-10-27-17-29-23.jpg)
ರಾಜ್ಯದಲ್ಲಿ ಕುರ್ಚಿ ಕದನ ರೋಚಕ ಘಟ್ಟ ತಲುಪಿದೆ. ಖರ್ಗೆ ಬೆಂಗಳೂರಿಗೆ ಬಂದ್ರೂ ಪ್ರಹಸನ ಅಂತ್ಯ ಕಾಣಲಿಲ್ಲ. ಕುರ್ಚಿ ಬಿಕ್ಕಟ್ಟು ಸದ್ಯ ರಾಹುಲ್ ಗಾಂಧಿ ಅಂಗಳ ತಲುಪಿದ್ದು, ಮಾತುಕತೆಗೆ ಮುಹೂರ್ತ ಇಡಲಾಗಿದೆ. ಈ ಬೆಳವಣಿಗೆಗಳ ಮಧ್ಯೆ ಖರ್ಗೆ ದೆಹಲಿ ಫ್ಲೈಟ್ ಹತ್ತಲಿದ್ರೆ, ದೆಹಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವತ್ತು ಮಹತ್ವದ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ..
ಸಿಎಂ ಸಿಂಹಾಸನಕ್ಕಾಗಿ ಬಣ ಬಡಿದಾಟ.. ರಾಜ್ಯ ಕಾಂಗ್ರೆಸ್​​ ಪಾಳಯದ ನಾಯಕತ್ವ ಸಂಗ್ರಾಮ ಘಳಿಗೆಗೊಂದು ತಿರುವು ಪಡೆದುಕೊಳ್ತಿದೆ.. ಸಿದ್ದರಾಮಯ್ಯ ಪಟ್ಟು ಪೆಟ್ಟಿನ ಅಖಾಡದಲ್ಲಿ ಡಿಕೆಶಿ ಕೂಡ ದಾಳ ಉರುಳಿಸ್ತಿದ್ದಾರೆ.. ಅಸ್ತ್ರ-ಶಸ್ತ್ರಗಳ ಪ್ರಯೋಗಕ್ಕೆ ವಿರಾಮ ಬಿದ್ದಿಲ್ಲ.. ಕುರ್ಚಿ ಬಿಕ್ಕಟ್ಟು ಹೈಕಮಾಂಡ್​ಗೆ ಇಕ್ಕಟ್ಟು ತಂದಿದ್ದು, ರಾಜ್ಯಕ್ಕೆ ಒಬ್ಬರ ಹಿಂದೆ ಇಬ್ಬರು ಹೈ ನಾಯಕರು ಭೇಟಿ ನೀಡ್ತಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಧರ್ಮಧ್ವಜ ಸ್ಥಾಪನೆಗೆ ಅಯೋಧ್ಯೆ ಸಜ್ಜು.. ಇವತ್ತು ಮೋದಿಯಿಂದ ಕೇಸರಿಧ್ವಜ ಪ್ರತಿಷ್ಠಾಪನೆ..! PHOTOS
/filters:format(webp)/newsfirstlive-kannada/media/media_files/2025/11/25/kc-venugopal-2025-11-25-09-35-38.jpg)
ರಾಜ್ಯ ಕಾಂಗ್ರೆಸ್​ನಲ್ಲಿ ಏನಾಗ್ತಿದೆ ಅಂತನೇ ಊಹಿಸೋಕಾಗ್ತಿಲ್ಲ. ಒಂದ್ಕಡೆ ಅಧಿಕಾರದ ಚಮತ್ಕಾರ ಭೇದಿಸಲು ಡಿಸಿಎಂ ಡಿಕೆಶಿ ದೆಹಲಿಯ ಹೈಕಮಾಂಡ್​ ಅಂಗಳದಲ್ಲಿ ಒತ್ತಡ ರಾಜಕೀಯ ನಡೆಸ್ತಿದ್ದಾರೆ.. ದಿಲ್ಲಿಯಲ್ಲೇ ಬಿಡಾರ ಹೂಡಿರೋ ಡಿಕೆ ಬಣ ಪವರ್ ಪಾಲಿಟಿಕ್ಸ್​​​ಗೆ ಕಡ್ಡಿ ಗೀರಿದೆ. ಇತ್ತ ಸಿದ್ದರಾಮಯ್ಯ ಅಧಿಕಾರದ ಶಿಖರದಿಂದ ಇಳಿಯಲೇಬಾರದೆಂದು ಛಲ ಪ್ರದರ್ಶನ ಮಾಡ್ತಿದ್ದಾರೆ.. ಇಡೀ ದೇಶದಲ್ಲೇ ನಿತ್ರಾಣವಾಗಿರೋ ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ ಒಂದೇ ಆಕ್ಸಿಜನ್ ಸೆಂಟರ್ ಆಗಿದ್ದು ಅಳೆದು, ತೂಗಿ ಲೆಕ್ಕಾಚಾರ ಹಾಕುವ ಇರಾದೆ ಹೈಕಮಾಂಡ್​ ಮರ್ಜಿಗಿದೆ.
ಈ ಮಧ್ಯೆ ಅಂತಿಮ ತೀರ್ಪು ಹೈಕಮಾಂಡ್ ಕೊಡುತ್ತೆ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ದೆಹಲಿಗೆ ವಾಪಸ್​ ಫ್ಲೈಟ್​ ಹತ್ತಲಿದ್ದರು. ಕಳೆದ 3 ದಿನಗಳಿಂದ ಬೆಂಗಳೂರಲ್ಲಿ ವಾಸ್ತವ್ಯ ಹೂಡಿದ್ದ ಖರ್ಗೆ, ಸಿಎಂ ಸಿದ್ದರಾಮಯ್ಯ-ಡಿಕೆಶಿ ಬಣದ ನಾನಾ-ನೀನಾ ಫೈಟ್​​ನ ವರದಿಯನ್ನ ಹೈಕಮಾಂಡ್​ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ
‘ಅಭಿಪ್ರಾಯ’ ರಾಜಕೀಯ!
- ಡೆಲ್ಲಿಯಲ್ಲಿ ಡಿಕೆಶಿ ಜೊತೆ.. ಬೆಂಗಳೂರಲ್ಲಿ ಸಿಎಂ ಜೊತೆ ಚರ್ಚೆ
- ರಾಹುಲ್, ಸೋನಿಯಾಗೆ ಖರ್ಗೆ ವರದಿ ಕೊಡುವ ಸಾಧ್ಯತೆ
- ಸಿಎಂ, ಡಿಸಿಎಂ ಅಭಿಪ್ರಾಯ ಸಂಗ್ರಹಿಸಲು ಬಂದಿದ್ದ ಸಾಧ್ಯತೆ
- ರಾಹುಲ್ ಗಾಂಧಿ ಬಳಿ ಅಭಿಪ್ರಾಯ ಸಂಗ್ರಹದ ವಿಷಯ ಮಂಡನೆ
- ಇಬ್ಬರ ಅಭಿಪ್ರಾಯ ಹೈಕಮಾಂಡ್​ಗೆ ಮುಟ್ಟಿಸಲಿರುವ ಖರ್ಗೆ
/filters:format(webp)/newsfirstlive-kannada/media/media_files/2025/11/24/congress-mla-lobbying-for-dks-2025-11-24-13-01-47.jpg)
ಬೆಂಗಳೂರಿಗೆ ಬಂದಿಳಿದ ಕೆ.ಸಿ.ವೇಣುಗೋಪಾಲ್
ಖರ್ಗೆ ದೆಹಲಿಗೆ ಹೊರಡುವ ಮುನ್ನ ತಡರಾತ್ರಿ ಮತ್ತೊಬ್ಬ ಹೈಕಮಾಂಡ್​​ ನಾಯಕ ರಾಜ್ಯಕ್ಕೆ ದಿಢೀರ್​ ಎಂಟ್ರಿಕೊಟ್ಟಿದ್ದಾರೆ. ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೊಚ್ಚಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಏರ್​​ಫೋರ್ಟ್​ ಬಳಿ ಇರೋ ತಾಜ್ ಹೋಟೆಲ್​​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ ಇಲ್ಲಿಂದ ವಯನಾಡಿಗೆ ತೆರಳಲಿದ್ದಾರೆ. ಆದ್ರೆ ಕುರ್ಚಿ ಕದನದ ನಡುವೆ ವೇಣುಗೋಪಾಲ್​​ ಆಗಮನ ಕುತೂಹಲವನ್ನು ಹೆಚ್ಚಿಸಿದೆ. ಮತ್ತೊಂದು ಮೂಲಗಳ ಪ್ರಕಾರ ಕಳೆದ ರಾತ್ರಿ ಮನೆಯಿಂದ ಹೊರ ಹೋಗಿರುವ ಡಿಸಿಎಂ ಡಿಕೆಶಿ ಕೂಡ.. ಏರ್​ಪೋರ್ಟ್​ ಬಳಿಯ ತಾಜ್​​ ಹೋಟೆಲ್​ಗೆ ತೆರಳಿರುವ ಗುಮಾನಿಯೂ ಇದೆ. ಜೊತೆಗೆ ಡಿಕೆಶಿ ಕೂಡ ವಯನಾಡಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಬಿ.ಕೆ.ಹರಿಪ್ರಸಾದ್ ರಿಂದ ರಾಹುಲ್ ಗಾಂಧಿಗೆ ರಿಪೋರ್ಟ್ ಸಲ್ಲಿಕೆ : ಬಿಜೆಪಿಯಿಂದ ಕುದುರೆ ವ್ಯಾಪಾರದ ಆರೋಪ
ಅತ್ತ ಡಿಸಿಎಂ ಡಿಕೆಶಿ ಕ್ಯಾಂಪ್​​​ ದೆಹಲಿಯಲ್ಲಿ ದಾಳ ಉರುಳಿಸ್ತಿದ್ರೆ ಇತ್ತ ಕೆಲ ಸಚಿವರು ಹಾಗೂ ಶಾಸಕರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.. ಸಚಿವ ಚೆಲುವರಾಯಸ್ವಾಮಿ, ಹೆಚ್.ಸಿ ಮಹದೇವಪ್ಪ, ಕೆ.ಎಚ್ ಮುನಿಯಪ್ಪ ಸೇರಿ ಹಲವರು ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ..
ಒಟ್ಟಾರೆ.. 3 ದಿನಗಳಿಂದ ರಾಜ್ಯದಲ್ಲಿ ಬೀಡುಬಿಟ್ಟಿದ್ದ ಖರ್ಗೆ ಸಾಹೇಬ್ರು ಇಂದು ದೆಹಲಿಗೆ ತೆರಳಲಿದ್ದಾರೆ.. ನಾಡಿದ್ದು, ರಾಹುಲ್ ಗಾಂಧಿ ದೆಹಲಿದೆ ವಾಪಸ್​​ ಬರ್ತಿದ್ದು, ರಾಹುಲ್​ ಸಮ್ಮುಖದಲ್ಲಿ ಕುರ್ಚಿ ಕದನದ ನಾಟಕ ಮಂಡಳಿ ಕ್ಲೈಮ್ಯಾಕ್ಸ್ ಕಾಣುತ್ತಾ, ಅನ್ನೋದನ್ನ ಕಾದು ನೋಡಬೇಕಿದೆ..
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us