Advertisment

ಟೀಮ್ ಇಂಡಿಯಾ 201 ರನ್​​ಗೆ ಆಲೌಟ್! ಬೃಹತ್ ಲೀಡ್​ ಸಾಧಿಸಿದ ದಕ್ಷಿಣ ಆಫ್ರಿಕಾ

9 ರನ್​ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, ಆರಂಭದಲ್ಲಿ ಆಫ್ರಿಕನ್ ಬೌಲರ್​ಗಳ ದಾಳಿಗೆ ಸಮರ್ಥ ಉತ್ತರ ನೀಡಿತ್ತು. ಮೊದಲ ವಿಕೆಟ್​​ಗೆ 65 ರನ್​ಗಳ ಕಾಣಿಕೆ ನೀಡಿದ್ದ ಈ ಜೋಡಿ ಆಫ್ರಿಕನ್ ಬೌಲರ್​ಗಳಿಗೆ ಕೆಲ ಕಾಲ ಕಾಟ ಕೊಡ್ತು.

author-image
Ganesh Kerekuli
Yashaswi jaiswal
Advertisment
  • ಆರಂಭಿಕ ಯಶಸ್ವಿ ಜೈಸ್ವಾಲ್ 58 ರನ್​ಗಳಿಸಿ ಔಟ್
  • ಕೈಕೊಟ್ಟ ರಾಹುಲ್, ಸುದರ್ಶನ್, ಜುರೆಲ್, ಪಂತ್, ಜಡೇಜಾ
  • ವ್ಯರ್ಥವಾಯ್ತು ಸುಂದರ್, ಕುಲ್ದೀಪ್ ಏಕಾಂಗಿ ಹೋರಾಟ

ಗುವಾಹಟಿ ಟೆಸ್ಟ್ ಪಂದ್ಯದ ಮೂರನೇ ದಿನ ಟೀಮ್ ಇಂಡಿಯಾ ಬ್ಯಾಟರ್ಸ್​ ಪೆವಿಲಿಯನ್ ಪರೇಡ್ ನಡೆಸಿದ್ರು. ವೇಗಿ ಮಾರ್ಕೊ ಯಾನ್ಸನ್, ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ದಾಳಿಗೆ ತತ್ತರಿಸಿದ ಪಂತ್ ಪಡೆ, ಮೊದಲ ಇನ್ನಿಂಗ್ಸ್​ನಲ್ಲಿ ಭಾರೀ ಹಿನ್ನಡೆ ಅನುಭವಿಸಿತು. ಆ ಮೂಲಕ ಟೀಮ್ ಇಂಡಿಯಾ 2ನೇ ಟೆಸ್ಟ್ ಪಂದ್ಯದಲ್ಲಿ ಸೋಲಿನಿಂದ ಪಾರಾಗಲು ಹೋರಾಟ ನಡೆಸಬೇಕಿದೆ.

Advertisment

92 ನಿಮಿಷಗಳ ಕಾಲ ಕ್ರೀಸ್​​ನಲ್ಲಿ ಗಟ್ಟಿಯಾಗಿ ನಿಂತಿದ್ದ ರಾಹುಲ್, 22 ರನ್​ಗಳಿಸಿ ಸ್ಲಿಪ್​​ನಲ್ಲಿ ಮಾರ್ಕ್ರಮ್​ಗೆ ಕ್ಯಾಚ್ ನೀಡಿದ್ರು. ರಾಹುಲ್​ಗೆ ಉತ್ತಮ ಸಾಥ್ ನೀಡಿದ್ದ ಜೈಸ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿದ್ರು. ಆದ್ರೆ ಜೈಸ್ವಾಲ್ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. 

ಇದನ್ನೂ ಓದಿ: ಅನುಭವಿ KL ರಾಹುಲ್​​ಗೆ ಮಹತ್ವದ ಜವಾಬ್ದಾರಿ.. ODI ಸಿರೀಸ್​ಗೆ ಬಲಿಷ್ಠ ತಂಡ ಪ್ರಕಟ..!

Jadeja and sundhar

ಎಡಗೈ ಬ್ಯಾಟರ್ ಸಾಯಿ ಸುದರ್ಶನ ವಿಕೆಟ್ ಕೈಚೆಲ್ಲಿದ್ರು. ಮಿಡ್​ವಿಕೆಟ್​ನಲ್ಲಿ ರಿಕಲ್ಟನ್​ಗೆ ಕ್ಯಾಚ್ ನೀಡಿ ಹಾರ್ಮರ್​​​ಗೆ 2ನೇ ಬಲಿಯಾದ್ರು. ಧೃವ್ ಜುರೆಲ್ ಖಾತೆ ತೆರೆಯುವ ಮುನ್ನವೇ ವೇಗಿ ಮಾರ್ಕೊ ಯಾನ್ಸನ್ ವಿಕೆಟ್ ಕೀಪರ್ ಬ್ಯಾಟರ್​​ಗೆ ಪೆವಿಲಿಯನ್ ಹಾದಿ ತೋರಿಸಿದ್ರು.
ಕ್ಯಾಪ್ಟನ್ ರಿಷನ್ ಪಂತ್, ಸ್ಕೋರರ್ಸ್​​ಗೆ ಹೆಚ್ಚು ಕೆಲಸ ಕೊಟ್ಟಿಲ್ಲ. ಕೇವಲ 6 ರನ್​ಗಳಿಸಿದ್ದ ಪಂತ್, ಯಾನ್ಸನ್​​ಗೆ ಕೌಂಟರ್​​ ಅಟ್ಯಾಕ್ ನೀಡಲು ಹೋಗಿ ವಿಕೆಟ್ ನೀಡಿದ್ರು. ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ 10 ರನ್​ಗಳಿಸಿ, ಕಾನ್ಫಿಡೆಂಟ್​ ಆಗಿದ್ರು. ಆದ್ರೆ ಮಾರ್ಕ್ರಮ್​ರ ಎಕ್ಸ್ಟ್ರಾರ್ಡಿನರಿ ಕ್ಯಾಚ್​​ಗೆ ನಿತೀಶ್ ಔಟಾದ್ರು.

Advertisment

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರವೀಂದ್ರ ಜಡೇಜಾಗೆ ಮಾರ್ಕೊ ಯಾನ್ಸನ್ ಶಾಟ್ ಬಾಲ್​​ಗೆ ಉತ್ತರವಿಲಿಲ್ಲ. ಡಿಆರ್​ಎಸ್ ಮೊರೆ ಹೋದ್ರು ಜಡೇಜಾ ಕ್ರೀಸ್​ನಲ್ಲಿ ಉಳಿಯಲಿಲ್ಲ. ವಾಷಿಗ್ಟನ್ ಸುಂದರ್, ಏಕಾಂಗಿ ಹೋರಾಟ ನಡೆಸಿದ್ರು. ಸುಂದರ್ 92 ಎಸೆತಗಳಲ್ಲಿ 48 ರನ್​ಗಳಿಸಿ ಸೈಲೆಂಟ್ ಆಗ್ಬಿಟ್ರು.
ಕುಲ್ದೀಪ್ ಯಾದವ್ 134 ನಿಮಿಷಗಳ ಕಾಲ ಕ್ರೀಸ್​ನಲ್ಲಿದ್ದು, 134 ಎಸೆತಗಳನ್ನ ಎದುರಿಸಿದ್ರು. ಕುಲ್ದೀಪ್ ಕೇವಲ 19 ರನ್​ಗಳಿಸಿ, ಮರ್ಕ್ರಮ್​ಗೆ 5ನೇ ಕ್ಯಾಚ್​​ ನೀಡಿದ್ರು. ಕೊನೆಗೆ ಜಸ್ಪ್ರೀತ್ ಬೂಮ್ರಾ, ವಿಕೆಟ್ ಕೀಪರ್​​ಗೆ ಕ್ಯಾಚ್ ನೀಡೋ ಮೂಲಕ, ಟೀಮ್ ಇಂಡಿಯಾ ಇನ್ನಿಂಗ್ಸ್​ಗೆ ಅಂತ್ಯ ಹಾಡಿದ್ರು.

ಇದನ್ನೂ ಓದಿ:ಸಂಕಷ್ಟದಲ್ಲಿ ಪಂತ್​ ಪಡೆ.. ವಿಕೆಟ್ ತೆಗೆಯಲು ಆಗದೇ ಒದ್ದಾಡಿದ ಬೌಲರ್ಸ್​..!

ಅಂತಿಮವಾಗಿ ಟೀಮ್ ಇಂಡಿಯಾ 201 ರನ್​ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ, ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 26 ರನ್​ಗಳಿಸಿತು. ಆ ಮೂಲಕ ಆಫ್ರಿಕಾ 314 ರನ್​ಗಳ ಬೃಹತ್ ಮುನ್ನಡೆ ಸಾಧಿಸಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

India vs South Africa Test Match
Advertisment
Advertisment
Advertisment