ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ.. 60ಕ್ಕೂ ಹೆಚ್ಚು ಮಂದಿ ದುರಂತ ಅಂತ್ಯ..!

ಇರಾನ್‌ನಲ್ಲಿ ‘ಸರ್ಕಾರಿ ವಿರೋಧಿ’ ಪ್ರತಿಭಟನೆಗಳು ತೀವ್ರಗೊಂಡಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಈ ಮಧ್ಯೆ ಇಂಟರ್ನೆಟ್ ಮತ್ತು ದೂರವಾಣಿ ಕರೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

author-image
Ganesh Kerekuli
iran protest
Advertisment
  • 31 ಪ್ರಾಂತ್ಯ, 180 ನಗರ, 512 ಸ್ಥಳಗಳಲ್ಲಿ ಬೃಹತ್ ಪ್ರತಿಭಟನೆ
  • ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾರೀ ಸಾವು, ನೋವು
  • ಡಿಸೆಂಬರ್ 28 ರಿಂದ ನಡೆಯುತ್ತಿರುವ ಹಿಂಸಾಚಾರ

ಇರಾನ್‌ನಲ್ಲಿ ‘ಸರ್ಕಾರಿ ವಿರೋಧಿ’ ಪ್ರತಿಭಟನೆಗಳು ತೀವ್ರಗೊಂಡಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಈ ಮಧ್ಯೆ ಇಂಟರ್ನೆಟ್ ಮತ್ತು ದೂರವಾಣಿ ಕರೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. 

ಡಿಸೆಂಬರ್ 28 ರಿಂದ ಇಲ್ಲಿಯವರೆಗೆ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 62 ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ನಿನ್ನೆಯೂ ಕೂಡ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದು ಭಾರೀ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರಕ್ಕೆ ಅಮೆರಿಕ ಮತ್ತು ಇಸ್ರೇಲಿ ಭಯೋತ್ಪಾದಕ ಏಜೆಂಟ್‌ಗಳೇ ಕಾರಣ ಎಂದು ಇರಾನ್ ಸರ್ಕಾರ ಆರೋಪಿಸಿದೆ. 

ಟ್ರಂಪ್ ವಿರುದ್ಧ ಖಮೇನಿ ವಾಗ್ದಾಳಿ

ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಟೀಕಿಸಿದ್ದಾರೆ. ಟ್ರಂಪ್ ಒಬ್ಬ ದುರಹಂಕಾರಿ. ಅವರ ಕೈಗಳು ಇರಾನಿಯನ್ನರ ರಕ್ತದ ಕಲೆಗಳಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ. ಹಣದುಬ್ಬರ ಮತ್ತು ರಿಯಾಲ್‌ನ ಕುಸಿತದ ವಿರುದ್ಧ ಇರಾನ್​ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದು ದೊಡ್ಡ ಚಳವಳಿಯಾಗಿ ಬೆಳೆದಿದೆ. ಖಮೇನಿ ನೇತೃತ್ವದ ಧಾರ್ಮಿಕ ಸರ್ಕಾರದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. 

ಇದನ್ನೂ ಓದಿ: ಚಳಿಯ ಹೊಡೆತಕ್ಕೆ ನಲುಗಿದ ಆಲೂಗಡ್ಡೆ.. ರೈತರ ಕಂಗಾಲು ಮಾಡಿದ ‘ಕಪ್ಪು ಚುಕ್ಕೆ’..!

ಇನ್ನು, ಇರಾನ್‌ನ ಸರ್ಕಾರ ಸಾವು, ನೋವಿನ ಬಗ್ಗೆ ಮೌನ ವಹಿಸಿತ್ತು. ನಿನ್ನೆಯ ಹಿಂಸಾಚಾರ ಬಳಿಕ ಸಾವು, ನೋವುಗಳು ಸಂಭವಿಸಿವೆ ಎಂದು ಹೇಳುತ್ತಿದೆ. ಕೆಲವು ವರದಿಗಳ ಪ್ರಕಾರ, ಹಿಂಸಾಚಾರ ನಿರಂತರವಾಗಿ ನಡೆಯುತ್ತಿದ್ದು, ಮೃತಪಡುತ್ತಿರೋರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. 

HRANA) ವರದಿ ಪ್ರಕಾರ.. ಇರಾನ್​ 31 ಪ್ರಾಂತ್ಯಗಳಾದ್ಯಂತ 180 ನಗರಗಳಲ್ಲಿ ಒಟ್ಟು 512 ಸ್ಥಳಗಳಿಗೆ ಪ್ರತಿಭಟನೆ ಹಬ್ಬಿದೆ. ದೇಶದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವಾಲಯವು ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸಮರ್ಥ ಭದ್ರತಾ ಅಧಿಕಾರಿಗಳು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದೆ. 

ದುಬೈ ವಿಮಾನ ನಿಲ್ದಾಣದ ವೆಬ್‌ಸೈಟ್ ಪ್ರಕಾರ, ದುಬೈ ಮತ್ತು ಇರಾನ್ ನಡುವಿನ ಕನಿಷ್ಠ 17 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಅಶಾಂತಿಯಿಂದಾಗಿ ಟರ್ಕಿಶ್ ಏರ್‌ಲೈನ್ಸ್ ಇರಾನ್‌ನ ಮೇಲಿನ ಹಲವಾರು ವಿಮಾನಗಳನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ಫಿನಾಲೆ ಟಿಕೆಟ್ ಪಡೆದ ಧನುಷ್.. ಸಂಭ್ರಮಿಸಿದ ರಾಶಿಕಾ ಶೆಟ್ಟಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Iran protests
Advertisment