/newsfirstlive-kannada/media/media_files/2026/01/10/potato-1-2026-01-10-10-53-07.jpg)
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಅತೀ ಹೆಚ್ಚು ಚಳಿ ಮತ್ತು ಮಂಜು ಕವಿದ ವಾತಾವರಣವು ಆಲೂಗಡ್ಡೆ ಬೆಳೆಗಾರರ ನಿದ್ದೆಗೆಡಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಆಲೂಗಡ್ಡೆ ಬೆಳೆಗೆ ಮಾರಕವಾದ ‘ಕಪ್ಪು ಚುಕ್ಕೆ’ ರೋಗ ಆವರಿಸಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟದ ಭೀತಿಯಲ್ಲಿದ್ದಾರೆ.
ಇದನ್ನೂ ಓದಿ: ಮಗನಿಗೆ 'ಶೇಖರ್' ಎಂದು ಹೆಸರಿಟ್ಟ ಮಸ್ಕ್.. ಭಾರತದ ಮಹಾನ್ ವ್ಯಕ್ತಿಯ ಸಾಧನೆಯೇ ಈ ಹೆಸರಿಡಲು ಸ್ಫೂರ್ತಿ..!
/filters:format(webp)/newsfirstlive-kannada/media/media_files/2026/01/10/potato-2-2026-01-10-10-53-34.jpg)
ಅಷ್ಟೇ ಅಲ್ಲದೇ ಈ ಬಾರಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಆಲೂಗೆಡ್ಡೆ ಬೆಳೆ ಬೆಳೆದಿರೋದ್ರಿಂದ ರೈತರು ಕೊಟ್ಯಾಂತರ ರೂಪಾಯಿ ನಷ್ಟವುಂಟಾಗುವ ಸಾಧ್ಯತೆ ಇದ್ದು, ಜೊತೆಗೆ ​ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಂಜು ಮತ್ತು ಅತಿಯಾದ ಚಳಿ ಈಗ ಅನ್ನದಾತನ ಹೊಟ್ಟೆ ಮೇಲೆ ಹೊಡೆದಿದೆ. ಆಲೂಗಡ್ಡೆ ಬೆಳೆಗಾರರು ಈಗ ಸಂಕಷ್ಟದ ಸುಳಿಯಲ್ಲಿದ್ದಾರೆ. ಹವಾಮಾನ ವೈಪರೀತ್ಯದ ಲಾಭ ಪಡೆದಿರುವ ಮಾರಕ ‘ಕಪ್ಪು ಚುಕ್ಕೆ’ 'ಅಂಗಮಾರಿ' ರೋಗ ಆಲೂಗಡ್ಡೆ ಬೆಳೆಯನ್ನು ಸರ್ವನಾಶ ಮಾಡುತ್ತಿದೆ. ಆಲೂಗಡ್ಡೆ ಗಿಡಗಳ ಎಲೆಗಳ ಮೇಲೆ ಸಣ್ಣ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದು, ಎರಡೇ ದಿನದಲ್ಲಿ ಇಡೀ ಎಲೆ ಸುಟ್ಟಂತೆ ಕಪ್ಪಾಗುತ್ತಿದೆ. ಕಾಂಡಗಳು ಕೊಳೆಯುತ್ತಿದ್ದು, ಗಿಡಗಳು ನೆಲಕ್ಕೆ ಬಾಗುತ್ತಿವೆ.
ಇದನ್ನೂ ಓದಿ: ಫಿನಾಲೆ ಟಿಕೆಟ್ ಪಡೆದ ಧನುಷ್.. ಸಂಭ್ರಮಿಸಿದ ರಾಶಿಕಾ ಶೆಟ್ಟಿ..!
/filters:format(webp)/newsfirstlive-kannada/media/media_files/2026/01/10/potato-3-2026-01-10-10-53-43.jpg)
​ಮುಂಜಾನೆ ಬೀಳುವ ಅತಿಯಾದ ಇಬ್ಬನಿ ಮತ್ತು ತೇವಾಂಶದಿಂದಾಗಿ ಶಿಲೀಂಧ್ರ ಹರಡುತ್ತಿದೆ. ಬಿಸಿಲು ಇಲ್ಲದ ಕಾರಣ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಶಿಡ್ಲಘಟ್ಟ ತಾಲ್ಲೂಕಿನ ಕುಡುಮಲಕುಂಟೆ ಗ್ರಾಮದ ರೈತ ಕೆಟಿ ವೆಂಕಟೇಶ್ ಒಂದು ಎಕರೆಗೆ ಸುಮಾರು 1 ರಿಂದ 1.5 ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದು, ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು. ವಾರಕ್ಕೆ ಎರಡು ಬಾರಿ ದುಬಾರಿ ಕೀಟನಾಶಕ ಸಿಂಪಡಿಸುತ್ತಿದ್ದರೂ ರೋಗದ ತೀವ್ರತೆ ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುತ್ತಿದ್ದಾರೆ ರೈತರು.
ಇದನ್ನೂ ಓದಿ: ನಂಜನಗೂಡು ಯುವತಿ ದುರಂತ ಅಂತ್ಯಕ್ಕೆ ಟ್ವಿಸ್ಟ್ ಕೊಟ್ಟ ಪ್ರಿಯಕರ..!
/filters:format(webp)/newsfirstlive-kannada/media/media_files/2026/01/10/potato-2026-01-10-10-53-55.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us