/newsfirstlive-kannada/media/media_files/2025/08/04/evyatar-david-2025-08-04-10-36-42.jpg)
ಎವ್ಯಾಟರ್ ಡೇವಿಡ್
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷಕ್ಕೆ ಇನ್ನೂ ತೆರೆ ಬಿದ್ದಿಲ್ಲ. 2023ರಲ್ಲಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ಹಠಾತ್ ಯುದ್ಧ ಸಾರಿದ್ದರು. ಈ ವೇಳೆ ಒತ್ತೆಯಾಳುಗಳಾಗಿ ಅನೇಕರನ್ನು ಉಗ್ರರು ಸೆರೆ ಹಿಡಿದು ತಂದಿದ್ದು, ಕೆಲವರಿಗೆ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.
ಅವರೆಲ್ಲ ಅಜ್ಞಾತ ಸ್ಥಳದಲ್ಲಿ ನರಕಸದೃಶ ಜೀವನ ಅನುಭವಿಸುತ್ತಿದ್ದಾರೆ. ಇದೀಗ ವಿಕೃತ ಮನಸ್ಸು ಹೊಂದಿರುವ ಹಮಾಸ್ ಉಗ್ರರು ವಿಡಿಯೋ ಒಂದನ್ನ ಬಿಡುಗಡೆ ಮಾಡಿ, ಖುಷಿ ಪಟ್ಟಿದ್ದಾರೆ. ಎವ್ಯಾಟರ್ ಡೇವಿಡ್ (24) ಎಂಬ ಇಸ್ರೇಲಿಗನ ವಿಡಿಯೋ ಅದಾಗಿದೆ. ವಿಡಿಯೋದಲ್ಲಿ ಆತ, ತನ್ನ ಗೋರಿಯನ್ನ ತಾನೇ ತೋಡಿಕೊಳ್ತಿದ್ದಾನೆ.
ಇದನ್ನೂ ಓದಿ:ಅನ್ನದಾತರಿಗೆ ಶಾಕಿಂಗ್ ನ್ಯೂಸ್.. ಹವಾಮಾನ ಇಲಾಖೆಯಿಂದ ಆತಂಕಕಾರಿ ಮಾಹಿತಿ
How psychopathic is Hamas?
— Eylon Levy (@EylonALevy) August 2, 2025
It forced starving hostage Evyatar David to DIG HIS OWN GRAVE for the cameras. pic.twitter.com/iMa404St4s
ಅಸ್ಥಿಪಂಜರಕ್ಕೆ ಚರ್ಮ ಹೊದಿಸಿದಂತೆ ಕಾಣುತ್ತಿರುವ ಆತ, ‘ನನ್ನ ಗೋರಿಯನ್ನೇ ನಾನೇ ತೋಡಿಕೊಳ್ಳುತ್ತಿದ್ದೇನೆ. ದಿನದಿನವೂ ನನ್ನ ದೇಹ ಹಾಳಾಗುತ್ತಿದೆ. ಇಲ್ಲೇ ಸಮಾಧಿ ತೋಡಿಕೊಂಡು ಇಲ್ಲೇ ಹೂಳಲ್ಪಡುತ್ತೇನೆ. ಇಲ್ಲಿಂದ ಬಿಡುಗಡೆಯಾಗಿ ಕುಟುಂಬ ಸೇರುವ ಕನಸು ದೂರಾಗಿದೆ ಅಂತಾ ಆತ ಕಣ್ಣೀರು ಇಟ್ಟಿದ್ದಾನೆ.
ಆತನ ದೇಹವನ್ನು ಸರಿಯಾಗಿ ಗಮನಿಸಿದ್ರೆ ಉಗ್ರರು ಎಷ್ಟು ಚಿತ್ರಹಿಂಸೆ ನೀಡಿದ್ದಾರೆ ಎಂಬುವುದು ಗೊತ್ತಾಗುತ್ತಿದೆ. ಅನ್ನ ನೀರು ನೀಡದೇ ಸತಾಯಿಸುತ್ತಿದ್ದಾರೆ. ಸುರಂಗದೊಳಗೆ ಆತನನ್ನ ಕೂಡಿ ಹಾಕಲಾಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆಯೇ ಇಸ್ರೇಲ್ ಪ್ರಧಾನಿ ನೆತನ್ಯಾಹು, ಬಿಡಿಸಿಕೊಂಡು ಬರುವ ಭರವಸೆ ನೀಡಿದ್ದಾರೆ. 2023ರ ಅಕ್ಟೋಬರ್ 7ರಂದು 1,200ಕ್ಕೂ ಅಧಿಕ ಇಸ್ರೇಲಿ ಜನರ ಕೊಂದಿದ್ದ ಹಮಾಸ್, 200ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಸಿಕೊಂಡಿತ್ತು. ಅದರಲ್ಲೀಗ 49 ಜನ ಇನ್ನೂ ಹಮಾಸ್ ವಶದಲ್ಲಿದ್ದು, ಹಲವರು ಅದೇ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: KL ರಾಹುಲ್ಗಾಗಿ ಶಾರೂಖ್ ಖಾನ್ ಪಟ್ಟು.. ಡೀಲ್ ಖುದುರಿಸಲು ಹಾಕಿದ ಗಾಳ ಎಂಥದ್ದು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ