/newsfirstlive-kannada/media/media_files/2025/08/04/kl-rahul-delhi-capitals-2025-08-04-09-53-03.jpg)
ಕೆ.ಎಲ್.ರಾಹುಲ್
ಸೀಸನ್-18ರ ಐಪಿಎಲ್ ಮುಗೀದು ಎರಡು ತಿಂಗಳಾಗ್ತಿದೆ. ಸೀಸನ್-18ರಲ್ಲಿ ನಿರೀಕ್ಷೆ ತಕ್ಕ ಪ್ರದರ್ಶನ ನೀಡದ ಕೊಲ್ಕತ್ತಾ ನೈಟ್ ರೈಡರ್ಸ್, ಮುಂದಿನ ಸೀಸನ್ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಈಗಾಗಲೇ ಕೋಚಿಂಗ್ ಸ್ಟಾಫ್ ಸರ್ಜರಿ ಮಾಡಿರುವ ಕೊಲ್ಕತ್ತಾ ನೈಟ್ ರೈಡರ್ಸ್, ಈಗ ತಂಡದ ಸರ್ಜರಿಗಿಳಿದಿದೆ. ಈ ನಿಟ್ಟಿನಲ್ಲೇ ಕನ್ನಡಿಗ ಕೆ.ಎಲ್.ರಾಹುಲ್ಗೆ ತಂಡಕ್ಕೆ ಕರೆತರುವ ಯತ್ನದಲ್ಲಿದೆ.
ಕೆ.ಎಲ್.ರಾಹುಲ್ಗಾಗಿ ಕಿಂಗ್ ಖಾನ್ ಶಾರೂಖ್ ಪಟ್ಟು!
ಕಳೆದ ಸೀಸನ್ನಲ್ಲಿ ಕೆಕೆಆರ್ ನೀಡಿರುವ ಪ್ರದರ್ಶನಕ್ಕೆ ಅಸಂತೃಪ್ತಿ ಹೊಂದಿರುವ ಕಿಂಗ್ ಖಾನ್ ಶಾರೂಖ್, ಸೀಸನ್-19ಕ್ಕೆ ಬಲಿಷ್ಠ ತಂಡ ಕಟ್ಟಲು ಸೂಚಿಸಿದ್ದಾರೆ. ಇದರ ಅನ್ವಯವೇ ಕೋಚಿಂಗ್ ಸ್ಟಾಫ್ನಲ್ಲಿ ಬದಲಾವಣೆಗೆ ಮ್ಯಾನೇಜ್ಮೆಂಟ್ ಮುಂದಾಗಿದೆ. ಶತಯಾ ಗತಯಾ ಕನ್ನಡಿಗ ಕೆ.ಎಲ್.ರಾಹುಲ್ನ ತಂಡಕ್ಕೆ ಕರೆತರಲು ಸ್ವತಃ ಶಾರೂಖ್ ಖಾನ್ ಸೂಚಿಸಿದ್ದಾರೆ. ಇದೇ ಕಾರಣಕ್ಕೆ ಟ್ರೇಡ್ ಮೂಲಕ ಸೆಳೆಯುವ ಯತ್ನದಲ್ಲಿದೆ. ಇದಕ್ಕಾಗಿ ಒಂದು ಅಸ್ತ್ರವನ್ನು ಬಿಟ್ಟಿದೆ.
ಅಭಿಷೇಕ್ ನಾಯರ್ ಮೂಲಕ ರಾಹುಲ್ಗೆ ಆಫರ್
ಕೆ.ಎಲ್.ರಾಹುಲ್ನ ಸೆಳೆಯಲು ಬಿಟ್ಟಿರುವ ಅಸ್ತ್ರವೇ ಅಭಿಷೇಕ್ ನಾಯರ್. ಇದಕ್ಕೆ ಕಾರಣ ಅಭಿಷೇಕ್ ನಾಯರ್ ಹಾಗೂ ಕೆ.ಎಲ್.ರಾಹುಲ್ ನಡುವಿನ ಭಾಂಧವ್ಯ. ಕೆ.ಎಲ್.ರಾಹುಲ್ ಜೊತೆ ಉತ್ತಮ ಸಂಬಂಧ ಹೊಂದಿರುವ ಅಭಿಷೇಕ್ ನಾಯರ್ಗೆ ಕೆಲಸ ಮಾಡಿದ ಅನುಭವೂ ಇದೆ. ಹೀಗಾಗಿ ಕೆ.ಎಲ್.ರಾಹುಲ್ನ ಸೆಳೆದ್ರೆ, ಹೆಲ್ತಿ ವಾತಾವರಣ ಸೃಷ್ಟಿಯಾಗುತ್ತೆ ಅನ್ನೋದು ಮ್ಯಾನೇಜ್ಮೆಂಟ್ ಲೆಕ್ಕಾಚಾರ. ಇದಕ್ಕಾಗಿಯೇ ಅಭಿಷೇಕ್ ನಾಯರಿಂದಲೇ ನಾಯಕತ್ವದ ಆಫರ್ ಮಾಡಿದೆ. ಕಂಪ್ಲೀಟ್ ಸ್ವತಂತ್ರ್ಯ ನೀಡುವ ಭರವಸೆ ನೀಡಿರುವ ಕೊಲ್ಕತ್ತಾ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆಸಿದೆ ಎನ್ನಲಾಗ್ತಿದೆ.
ಇದನ್ನೂ ಓದಿ: ಕ್ಯಾಚ್ ಹಿಡಿದು ಬೌಂಡರಿ ಲೈನ್ ತುಳಿದ ಸಿರಾಜ್.. ಫೈನಲ್ ಟೆಸ್ಟ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್..!
/filters:format(webp)/newsfirstlive-kannada/media/media_files/2025/08/04/kl-rahul-delhi-capitals-1-2025-08-04-09-57-41.jpg)
ಕೆ.ಎಲ್.ರಾಹುಲ್ಗಾಗಿ ಯಾರನ್ನಾದರು ಬಿಡಲು ಕೊಲ್ಕತ್ತಾ ರೆಡಿ..!
ಕೆ.ಎಲ್.ರಾಹುಲ್ ಟ್ರೇಡ್ಗೆ ಸನ್ನದ್ಧರಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್, ತನ್ನಲ್ಲಿರುವ ಯಾವುದೇ ಆಟಗಾರನ ಬಿಟ್ಟು ಕೊಡಲು ರೆಡಿಯಾಗಿದ್ಯಂತೆ. ಅಕಸ್ಮತ್ ಆಟಗಾರ ಬೇಡದಿದ್ದಲ್ಲಿ ಬರೋಬ್ಬರಿ 25 ಕೋಟಿ ಹಣ ನೀಡಲು ಕೊಲ್ಕತ್ತಾ ಮುಂದಾಗಿದೆ ಎನ್ನಲಾಗ್ತಿದೆ. ಕೊಲ್ಕತ್ತಾ ಭಾರೀ ಮೊತ್ತವನ್ನು ಕೆ.ಎಲ್.ರಾಹುಲ್ಗೆ ಸುರಿಯಲು ರೆಡಿಯಾಗಿರುವುದರ ಹಿಂದೆ ಭಾರೀ ಲೆಕ್ಕಾಚಾರದ ಜೊತೆಗೆ ಕೆಲ ತಂತ್ರಗಳಿವೆ.
ಕೆ.ಎಲ್.ರಾಹುಲ್ಗಾಗಿ ಪಟ್ಟು ಯಾಕೆ..?
- ಸೀಸನ್-18ರಲ್ಲಿ ಕೊಲ್ಕತ್ತಾ ಅಟ್ಟರ್ ಪ್ಲಾಫ್ ಪರ್ಫಾಮೆನ್ಸ್
- ವಿಕೆಟ್ ಕೀಪರ್ಗಳಾದ ಡಿಕಾಕ್, ಗುರ್ಬಾಜ್ ವೈಫಲ್ಯ
- ನಾಯಕನಾಗಿ ಅಜಿಂಕ್ಯಾ ರಹಾನೆ ಕಂಪ್ಲೀಟ್ ಫೇಲ್ಯೂರ್
- ಕೆ.ಎಲ್.ರಾಹುಲ್ ತಂಡಕ್ಕೆ ಬಂದ್ರೆ ಮದ್ದಾಗುವ ನಿರೀಕ್ಷೆ
- ಉತ್ತಮ ವಿಕೆಟ್ ಕೀಪರ್ & ಓಪನಿಂಗ್ ಬ್ಯಾಟರ್
- ಕನ್ಸಿಸ್ಟೆನ್ಸಿ, ಕಂಡೀಷನ್ಸ್ಗೆ ಹೊಂದಿಕೊಳ್ಳುವ ಗುಣ
- ಯಾವುದೇ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ
- ಕ್ರೌಂಡ್ ಫುಲ್ ಮಾಡುವ ಇಂಡಿಯನ್ ಪ್ಲೇಯರ್
- ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ ರಾಹುಲ್
- ಪ್ರತಿಯೊಬ್ಬರ ಜೊತೆ ರಾಹುಲ್ಗೆ ಉತ್ತಮ ಬಾಂಧವ್ಯ
ಇದನ್ನೂ ಓದಿ: ಬುಮ್ರಾಗೆ ಬಿಸಿಸಿಐ ಯಾರ್ಕರ್.. ಟೆಸ್ಟ್ ಕ್ರಿಕೆಟ್ನಿಂದ ವೇಗಿಗೆ ಗೇಟ್ಪಾಸ್..?
ಕೆಕೆಆರ್ ಸಾರಥಿಯಾಗ್ತಾರೆ ರಾಹುಲ್
ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಾಗಿರುವ ಕೆ.ಎಲ್.ರಾಹುಲ್ಗಾಗಿ ಕೊಲ್ಕತ್ತಾ ಬಿಗ್ ಡೀಲ್ಗೆ ಇಳಿದಿದೆ ಒಕೆ. ಡೆಲ್ಲಿ ಕ್ಯಾಪಿಟಲ್ಸ್ ಕೆ.ಎಲ್.ರಾಹುಲ್ನ ಕೈಬಿಡುತ್ತಾ ಅನ್ನೋದೇ ಪ್ರಶ್ನೆ. ಸೀಸನ್-18ರಲ್ಲಿ ಡೆಲ್ಲಿ ಸಕ್ಸಸ್ಗೆ ಕಾರಣವೇ ಕೆ.ಎಲ್.ರಾಹುಲ್. ಕೋಚಿಂಗ್ ಸ್ಟಾಫ್ ಜೊತೆ ವಿಶೇಷ ಬಾಂಧವ್ಯವೂ ಇದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಟ್ರೇಡ್ನಲ್ಲಿ ಬಿಟ್ಟುಕೊಡುತ್ತಾ ಅನ್ನೋದೇ ಪ್ರಶ್ನೆ. ಅಕಸ್ಮಾತ್ ಕೆ.ಎಲ್.ರಾಹುಲ್, ಹೋಗಲು ಪಟ್ಟು ಹಿಡಿದ್ರೆ, ಕೊಲ್ಕತ್ತಾ ಸೇರೋದ್ರಲ್ಲಿಅನುಮಾನವಿಲ್ಲ. ಆದ್ರೆ ಇದಕ್ಕೆ ರಾಹುಲ್ ಒಪ್ಪಿಗೆ ನೀಡ್ತಾರಾ ಅನ್ನೋದೆ ಡೌಟ್.
ಇದನ್ನೂ ಓದಿ: ಅನ್ನದಾತರಿಗೆ ಶಾಕಿಂಗ್ ನ್ಯೂಸ್.. ಹವಾಮಾನ ಇಲಾಖೆಯಿಂದ ಆತಂಕಕಾರಿ ಮಾಹಿತಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ