/newsfirstlive-kannada/media/media_files/2025/08/03/jasprit-bumrah-test-2025-08-03-14-36-33.jpg)
ಜಸ್ಪ್ರೀತ್ ಬುಮ್ರಾ Photograph: (ಬಿಸಿಸಿಐ)
ಇಂಡೋ- ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ ಕೆನ್ನಿಂಗ್ಟನ್ ಓವಲ್ ನಡೀತಿರೋದ್ರ ಮಧ್ಯೆಯೇ ಬಿಸಿಸಿಐ ಕಚೇರಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೀತಿವೆ. BCCI ಬಾಸ್ಗಳು, ಟೀಮ್ ಮ್ಯಾನೇಜ್ಮೆಂಟ್ ನಡುವೆ ಬಿಸಿಬಿಸಿ ಚರ್ಚೆಗಳು ನಡೀತಿವೆ. ಈ ಮಹತ್ವದ ಬೆಳವಣಿಗೆ ಕಾರಣವಾಗಿರೋದು ಯಾರು ಗೊತ್ತಾ? ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ! ಫುಲ್ ಗರಂ ಆಗಿರೋ ಬಾಸ್ಗಳು ಬೂಮ್ರಾಗೇ ಯಾರ್ಕರ್ ಹಾಕೋಕೆ ಮುಂದಾಗಿದ್ದಾರೆ.
ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರೋ ಮಹತ್ವದ ಅಂತಿಮ ಟೆಸ್ಟ್ ಪಂದ್ಯದಿಂದ ವೇಗಿ ಜಸ್ಪ್ರಿತ್ ಬೂಮ್ರಾ ವಿಶ್ರಾಂತಿ ಪಡೆದಿದ್ದಾರೆ. ಸರಣಿ ಆರಂಭಕ್ಕೂ ಮುನ್ನವೇ 3 ಪಂದ್ಯಗಳಲ್ಲಿ ಮಾತ್ರ ಆಡೋದಾಗಿ ಬೂಮ್ರಾ ತಿಳಿಸಿದ್ರು. ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಾರಣ ನೀಡಿ ಬೂಮ್ರಾ, ರೆಸ್ಟ್ ಪಡೆದಿದ್ದಾರೆ. ಮುಂಬರೋ ಏಷ್ಯಾಕಪ್ನಿಂದಲೂ ಹೊರಗುಳಿಯೋಕೆ ಬೂಮ್ರಾ ನಿರ್ಧಾರ ಮಾಡಿದ್ದಾರೆ. ಬೂಮ್ರಾರ ನಿರ್ಧಾರ ಬಿಸಿಸಿಐ ಬಾಸ್ಗಳ ಕಣ್ಣು ಕೆಂಪಾಗಿಸಿದೆ.
ಇದನ್ನೂ ಓದಿ: ಜಯದ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ.. ಅದಕ್ಕೆ ಕಾರಣ ಇಬ್ಬರು ಸ್ಟಾರ್ಗಳು..
5ನೇ ಟೆಸ್ಟ್ನಿಂದ ರೆಸ್ಟ್..ಏಷ್ಯಾಕಪ್ಗೂ ಡೌಟ್
ಸರಣಿಯಲ್ಲಿ ಸಮಭಲ ಸಾಧಿಸಬೇಕಂದ್ರೆ ಕೆನ್ನಿಂಗ್ಟನ್ ಓವಲ್ನಲ್ಲಿ ಗೆಲುವು ಟೀಮ್ ಇಂಡಿಯಾಗೆ ಅನಿವಾರ್ಯವಾಗಿದೆ. ಗೆದ್ದು ಮರ್ಯಾದೆ ಉಳಿಸಿಕೊಳ್ಳಬೇಕಾದ ಮಹತ್ವದ ಪಂದ್ಯದಿಂದಲೇ ಮ್ಯಾಚ್ವಿನ್ನರ್ ಬೂಮ್ರಾ ವಿಶ್ರಾಂತಿ ಪಡೆದಿದ್ದಾರೆ. ಸರಣಿಯಲ್ಲಿ ಆಡಿದ 3 ಪಂದ್ಯಗಳಲ್ಲೂ ಮೆಡಿಕಲ್ ಟೀಮ್ನ ಸೂಚನೆಯಂತೆ ಬೂಮ್ರಾಗೆ ಹೊರೆಯಾಗದಂತೆ ಬೌಲಿಂಗ್ ಮಾಡಿಸಲಾಗಿದೆ. ಪಂದ್ಯದ ನಡುವೆ 4 ದಿನಗಳ ವಿಶ್ರಾಂತಿ ಕೂಡ ಸಿಕ್ಕಿದೆ. ಹೀಗಿದ್ರೂ 5ನೇ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಇದಲ್ಲದೆ ಮುಂಬರೋ ಏಷ್ಯಾಕಪ್ ಆಡೋದಕ್ಕೂ ಹಿಂದೇಟು ಹಾಕ್ತಿದ್ದಾರೆ. ಇದು ಬಿಸಿಸಿಐ ಬಾಸ್ಗಳಿಗೆ ಬೇಸರ ತರಿಸಿದೆ. ಸಿಟ್ಟಿಗೆದ್ದಿರುವ ಬಿಸಿಸಿಐ ಬಾಸ್ಗಳು ಬೂಮ್ರಾಗೇ ಯಾರ್ಕರ್ ಹಾಕೋಕೆ ರೆಡಿಯಾಗಿದ್ದಾರೆ.
ಇದನ್ನೂ ಓದಿ: ಫೈನಲ್ ಟೆಸ್ಟ್ಗೆ ರೋಚಕ ತಿರುವು ಕೊಟ್ಟ ಟೀಂ ಇಂಡಿಯಾ.. ಮೂರನೇ ದಿನ ಸಖತ್ ಆಟ..!
ಎಲ್ಲಾ ಪಂದ್ಯ ಆಡಲ್ಲ ಅಂದ್ರೂ ಆಯ್ಕೆ ಮಾಡಿದ್ಯಾಕೆ?
ಸೆಲೆಕ್ಷನ್ ಕಮಿಟಿ, ಟೀಮ್ ಮ್ಯಾನೇಜ್ಮೆಂಟ್ ಅನ್ನೂ ಈ ವಿಚಾರದಲ್ಲಿ ಬಿಸಿಸಿಐ ಬಾಸ್ಗಳು ಪ್ರಶ್ನೆ ಮಾಡಿದ್ದಾರೆ. 5 ಪಂದ್ಯ ಆಡಲ್ಲ ಎಂದ ಮೇಲೂ ಬೂಮ್ರಾ ಪ್ರವಾಸಕ್ಕೆ ಸೆಲೆಕ್ಟ್ ಮಾಡಿದ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಮುಂಬರೋ ಟೆಸ್ಟ್ ಸರಣಿಗೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಿಂದ ವೇಗಿ ಬೂಮ್ರಾಗೆ ಗೇಟ್ಪಾಸ್!
ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಾರಣಕ್ಕೆ ಸರಣಿಯ ಎಲ್ಲಾ ಪಂದ್ಯಗಳನ್ನ ಆಡೋಕೆ ಆಗಲ್ಲ ಅಂದಿರೋ ಬೂಮ್ರಾ ವಿಚಾರದಲ್ಲಿ ಮಹತ್ವದ ನಿರ್ಧಾರ ತಳೆಯಲು ಬಿಸಿಸಿಐ ಮುಂದಾಗಿದೆ. ಮುಂಬರುವ ಟೆಸ್ಟ್ ಸರಣಿಗಳಿಂದ ಬೂಮ್ರಾನ ಸೈಡ್ಲೈನ್ ಮಾಡಲು ಬಿಸಿಸಿಐ ಬಾಸ್ಗಳು ಮುಂದಾಗಿದ್ದಾರೆ. ಈ ಬಗ್ಗೆ ಸೆಲೆಕ್ಷನ್ ಕಮಿಟಿಗೂ ಸೂಚನೆ ನೀಡಲಾಗಿದೆ ಅನ್ನೋ ಸುದ್ದಿ ಬಿಸಿಸಿಐ ವಲಯದಿಂದ ಹೊರ ಬಿದ್ದಿದೆ.
ಏಕದಿನ, ಟಿ20ಗೆ ಮಾತ್ರ ಸೀಮಿತ
ಟೆಸ್ಟ್ ಅಂದ್ರೆ ಸುದೀರ್ಘ 5 ದಿನಗಳವರೆಗೆ ಆ ಬೇಕಿರುತ್ತೆ. 2 ಇನ್ನಿಂಗ್ಸ್ಗಳಲ್ಲಿ ದೀರ್ಘ ಕಾಲ ಬೌಲಿಂಗ್ ಮಾಡಬೇಕಿರುತ್ತೆ. ದೀರ್ಘ ಸ್ಪೆಲ್ ಹಾಕಬೇಕಿರುತ್ತೆ. ಈಗಾಗಲೇ ಬ್ಯಾಕ್ ಸರ್ಜರಿಗೆ ತುತ್ತಾಗಿರೋದ್ರಿಂದ ಬೂಮ್ರಾ ರೆಸ್ಟ್ ಅಂಡ್ ಪ್ಲೇ ಪ್ಲಾನ್ ರೂಪಿಸಿದ್ರು. ಆದ್ರೀಗ ಟೆಸ್ಟ್ ಫಾರ್ಮೆಟ್ನಿಂದಲೇ ಬೂಮ್ರಾಗೆ ರೆಸ್ಟ್ ನೀಡೋಕೆ ಬಿಸಿಸಿಐ ಮುಂದಾಗಿದೆ. ರೆಡ್ ಬಾಲ್ ಫಾರ್ಮೆಟ್ನಿಂದ ಬೂಮ್ರಾನ ಸೈಡ್ಲೈನ್ ಮಾಡಿ, ವೈಟ್ಬಾಲ್ ಫಾರ್ಮೆಟ್ನಲ್ಲಿ ಮಾತ್ರ ಆಡಿಸಲು BCCI ಯೋಚಿಸಿದೆ.
ಏಕದಿನ ಫಾರ್ಮೆಟ್ನಲ್ಲಿ ಗರಿಷ್ಠ ಅಂದ್ರೆ 10 ಓವರ್ ಬೌಲಿಂಗ್ ಮಾಡಬೇಕಿರುತ್ತೆ. ಅದೂ ಒಂದೇ ಸ್ಪೆಲ್ನಲ್ಲಿ ಅಲ್ಲ. ಟಿ20 ಫಾರ್ಮೆಟ್ನಲ್ಲಿ ಗರಿಷ್ಟ 4 ಓವರ್ ಬೌಲಿಂಗ್ ಇರುತ್ತೆ. ಅದಲ್ಲದೇ ಪಂದ್ಯದಿಂದ ಪಂದ್ಯಕ್ಕೆ ದಿನಗಳ ಅಂತರವೂ ಇರುತ್ತೆ. ವರ್ಕ್ಲೋಡ್ ಕೂಡ ಕಡಿಮೆಯಾಗಲಿದೆ. ರಿಕವರಿಗೂ ಟೈಮ್ ಸಿಗಲಿದೆ. ವೈಟ್ಬಾಲ್ ಫಾರ್ಮೆಟ್ನಲ್ಲಿ ಮಾತ್ರ ಬೂಮ್ರಾನ ಮುಂದುವರೆಸಲು ಬಿಸಿಸಿಐ ಚಿಂತನೆ ನಡೆಸಿರೋದಕ್ಕೆ ಇದೇ ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಬೂಮ್ರಾನ ಟೆಸ್ಟ್ನಿಂದ ದೂರ ಇಡೋ ಚರ್ಚೆಗಳು ಬಿಸಿಸಿಐನಲ್ಲಿ ಆರಂಭವಾಗಿವೆ. ಇಂಗ್ಲೆಂಡ್ ಪ್ರವಾಸ ಅಂತ್ಯದ ಬಳಿಕ ಅಂತಿಮ ನಿರ್ಧಾರ ಏನು ಅನ್ನೋದು ತಿಳಿಯಲಿದೆ.
ಇದನ್ನೂ ಓದಿ: ಬಿಟ್ಟು ಹೋಗ್ಬೇಡ ಅಂತಾ ಬಿಕ್ಕಿ ಬಿಕ್ಕಿ ಅತ್ತರು.. ಒಂದು ಆನೆಗಾಗಿ ಜಿಯೋಗೇ ಬಾಯ್ಕಾಟ್ ಹೇಳಿದ ಆ ತಾಲೂಕು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ