ಜಯದ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ.. ಅದಕ್ಕೆ ಕಾರಣ ಇಬ್ಬರು ಸ್ಟಾರ್​​ಗಳು..

ಆ 2 ಕ್ಯಾಚ್​ ಹಿಡಿದಿದ್ರೆ ಓವಲ್​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ಬಿಗಿ ಹಿಡಿತ ಸಾಧಿಸಿಬಿಡ್ತಿತ್ತು. ಆದರೆ ಅದೃಷ್ಟ ಟೀಮ್​ ಇಂಡಿಯಾ ಕಡೆಗಿತ್ತು. ಟೀಮ್​ ಇಂಡಿಯಾ ಓಪನರ್​​ ಯಶಸ್ವಿ ಜೈಸ್ವಾಲ್​ರ 2 ಕ್ಯಾಚ್​ ಡ್ರಾಪ್​ ಮಾಡಿ ಇಂಗ್ಲೆಂಡ್​ ಕೆಡ್ತು. ಜೀವದಾನ ಪಡೆದ ಜೈಸ್ವಾಲ್​ ಜಬರ್ದಸ್ತ್​ ಇನ್ನಿಂಗ್ಸ್​ ಕಟ್ಟಿದ್ರು.

author-image
Ganesh
Siraj arshdeep jaiswal

ಸಿರಾಜ್, ಅರ್ಷದೀಪ್, ಜೈಸ್ವಾಲ್

Advertisment

ಇಂಗ್ಲೆಂಡ್​ ವಿರುದ್ಧ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಗೆಲುವಿನ ಕನಸು ಚಿಗುರೊಡೆದಿದೆ. ಮೊದಲ ದಿನದಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಟೀಮ್​ ಇಂಡಿಯಾ ಇಂದು ಜಯದ ಲೆಕ್ಕಾಚಾರ ಹಾಕ್ತಿದೆ ಅಂದ್ರೆ ಅದಕ್ಕೆ ಕಾರಣ ಯಶಸ್ವಿ ಜೈಸ್ವಾಲ್​, ಆಕಾಶ್​​ದೀಪ್​. ಟೀಮ್​ ಇಂಡಿಯಾಗೆ ಮೇಲುಗೈ ತಂದುಕೊಟ್ಟಿದ್ದು, ಈ ಇಬ್ಬರು ಹೀರೋಗಳ ಅದ್ಧೂರಿ ಇನ್ನಿಂಗ್ಸ್​​!

ಕ್ಯಾಚ್​ ಬಿಟ್ಟು ಕೆಟ್ಟ ಇಂಗ್ಲೆಂಡ್​ ಆಟಗಾರರು 

ಆ 2 ಕ್ಯಾಚ್​.. ಆ 2 ಕ್ಯಾಚ್​ ಹಿಡಿದಿದ್ರೆ ಕೆನ್ನಿಂಗ್ಟನ್​ ಓವಲ್​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ತಂಡ ಬಿಗಿ ಹಿಡಿತ ಸಾಧಿಸಿಬಿಡ್ತಿತ್ತು. ಅದೃಷ್ಟ ಟೀಮ್​ ಇಂಡಿಯಾ ಕಡೆಗಿತ್ತು. ಟೀಮ್​ ಇಂಡಿಯಾ ಓಪನರ್​​ ಯಶಸ್ವಿ ಜೈಸ್ವಾಲ್​ರ 2 ಕ್ಯಾಚ್​ ಡ್ರಾಪ್​ ಮಾಡಿ ಇಂಗ್ಲೆಂಡ್​ ಕೆಡ್ತು. ಜೀವದಾನ ಪಡೆದ ಜೈಸ್ವಾಲ್​ ಜಬರ್ದಸ್ತ್​ ಇನ್ನಿಂಗ್ಸ್​ ಕಟ್ಟಿದ್ರು.

44 ಎಸೆತಕ್ಕೆ ಹಾಫ್​ ಸೆಂಚುರಿ

2ನೇ ದಿನದಾಟದ ಕೊನೆಯ ಸೆಷನ್​​ನಲ್ಲಿ 2ನೇ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾಗೆ ಜೈಸ್ವಾಲ್​ ಸ್ಫೋಟಕ ಆರಂಭ ನೀಡಿದ್ರು. ಇಂಗ್ಲೆಂಡ್​ ಬೌಲರ್​ಗಳ ಅಗ್ರೆಸ್ಸಿವ್​​​ ದಾಳಿಗೆ ಅವರದೇ ಸ್ಟೈಲ್​ನಲ್ಲಿ ಕೌಂಟರ್​​ಅಟ್ಯಾಕ್​ ನಡೆಸಿದ್ರು. ಅಗ್ರೆಸ್ಸಿವ್​ ಇಂಟೆಂಟ್​ನಲ್ಲಿ ಬ್ಯಾಟ್​ ಬೀಸಿದ ಲೆಫ್ಟಿ ಬ್ಯಾಟರ್​​ ಯಶಸ್ವಿ ಜೈಸ್ವಾಲ್​ ಜಸ್ಟ್​ 44 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿದ್ರು. ಅರ್ಧಶತಕದ ವೇಳೆಗಾಗಲೇ 2 ಸಿಕ್ಸರ್​​, 7 ಬೌಂಡರಿ ಚಚ್ಚಿದ್ರು. 

ಇದನ್ನೂ ಓದಿ: ಭಾರತದ ಗೆಲುವಿಗೆ ಬೂಮ್ರಾರನ್ನೇ ನಂಬಿದ್ರಾ..? ಮುಂಬೈಕರ್​​ ಆಡಿದ ಪಂದ್ಯಗಳಲ್ಲಿ ಸೋಲು!

3ನೇ ದಿನ ತಾಳ್ಮೆಯ ಆಟ.. ಶತಕ ಸಿಡಿಸಿ ಸಂಭ್ರಮ

2ನೇ ದಿನದಾಟದಲ್ಲಿ ಟೆಸ್ಟ್​ನಲ್ಲಿ ಟಿ20 ಸ್ಟೈಲ್​ನಲ್ಲಿ ಬ್ಯಾಟ್​ ಬೀಸಿದ್ದ ಜೈಸ್ವಾಲ್, 3ನೇ ದಿನದಲ್ಲಿ ರಕ್ಷಣಾತ್ಮಕ ಆಟವಾಡಿದ್ರು. ಕೂಲ್​ ಅಂಡ್ ಕಾಮ್​ ಇನ್ನಿಂಗ್ಸ್​ ಕಟ್ಟಿದ ಜೈಸ್ವಾಲ್​, ಇಂಗ್ಲೆಂಡ್​​ ಬೌಲರ್​ಗಳಿಗೆ ಸಖತ್​ ಕಾಟ ಕೊಟ್ರು. 127 ಎಸೆತಗಳಲ್ಲಿ ಇಂಗ್ಲೆಂಡ್​ ನೆಲದಲ್ಲಿ ಮೊದಲ ಶತಕ ಸಿಡಿಸಿದ್ರು.

ಜೈಸ್ವಾಲ್​ ಫೇವರಿಟ್​ ಎದುರಾಳಿ ಇಂಗ್ಲೆಂಡ್​

ಅದೇನೋ ಗೊತ್ತಿಲ್ಲ.. ಈ ಜೈಸ್ವಾಲ್​ಗೆ ಇಂಗ್ಲೆಂಡ್​ ಎದುರು ಆಡೋದಂದ್ರೆ ಒಂಥರಾ ಇಷ್ಟ. 2ನೇ ಇನ್ನಿಂಗ್ಸ್​ನಲ್ಲಿ  ಒಟ್ಟು 164 ಎಸೆತಗಳನ್ನ ಎದುರಿಸಿದ ಜೈಸ್ವಾಲ್​ 14 ಬೌಂಡರಿ, 2 ಸಿಕ್ಸರ್​ ಸಹಿತ 118 ರನ್​ಗಳಿಸಿದ್ರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 2200 ರನ್​ ಪೂರೈಸಿದ್ರು. ಇಂಟರೆಸ್ಟಿಂಗ್​ ಅಂದ್ರೆ ಇದ್ರಲ್ಲಿ 1123 ರನ್​ ಬಂದಿರೋದು ಇಂಗ್ಲೆಂಡ್​ ಎದುರೇ. ಇಷ್ಟೇ ಅಲ್ಲ.. ಈವರೆಗೆ ಜೈಸ್ವಾಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ 6 ಶತಕ ಸಿಡಿಸಿದ್ದಾರೆ. ಇದ್ರಲ್ಲಿ 4 ಶತಕ ಬಂದಿರೋದು ಆಂಗ್ಲರ ಎದುರೇ.

ಇದನ್ನೂ ಓದಿ: ಪ್ರಸಿದ್ಧ್​ ಕೃಷ್ಣ ಬೌಲಿಂಗ್​ ಪರಾಕ್ರಮ.. ಕನ್ನಡಿಗನ ಘರ್ಜನೆಗೆ ಇಂಗ್ಲೆಂಡ್​ ಬ್ಯಾಟರ್ಸ್​ ಕಂಗಾಲು..!

ಆಕಾಶ್​ದೀಪ್ ಆಟಕ್ಕೆ ಇಂಗ್ಲೆಂಡ್​ ಬೌಲರ್ಸ್​ ಕಂಗಾಲ್​ 

ಜೈಸ್ವಾಲ್​ ಶತಕಕ್ಕೆ ಎಷ್ಟು ಕ್ರೆಡಿಟ್​ ಸಿಗಬೇಕೋ.. ಅಷ್ಟೇ ಕ್ರೆಡಿಟ್​​ ಆಕಾಶ್​​ದೀಪ್​ ಹಾಫ್​ ಸೆಂಚುರಿಗೂ ಸಿಗಲೇಬೇಕು. 2ನೇ ದಿನದಾಟದ ಅಂತ್ಯದಲ್ಲಿ ನೈಟ್​ ವಾಚ್​​ಮನ್​ ಆಗಿ ಕಣಕ್ಕಿಳಿದ ಆಕಾಶ್​ದೀಪ್​, ವಿಕೆಟ್​ ಕಾಯ್ದುಕೊಳ್ಳುವಲ್ಲಿ ಸಕ್ಸಸ್​ ಕಂಡ್ರು. 3ನೇ ದಿನದಾಟದಲ್ಲಿ ಫ್ರಂಟ್​​ಲೈನ್​​ ಬ್ಯಾಟರ್​​ನಂತೆ ಹೋರಾಡಿದ್ರು. ಆಕಾಶ್​ದೀಪ್​ನ ಸುಲಭಕ್ಕೆ ಔಟ್​ ಮಾಡಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದ ಇಂಗ್ಲೆಂಡ್​ ಬೌಲರ್ಸ್​ ಕಂಗಾಲಾದ್ರು. 

ಚೊಚ್ಚಲ ಹಾಫ್​ ಸೆಂಚುರಿ ಸಿಡಿಸಿದ ಆಕಾಶ್​ದೀಪ್

12 ಬೌಂಡರಿ... ಕೆನ್ನಿಂಗ್ಟನ್​ ಓವಲ್​ನಲ್ಲಿ  ಆಕಾಶ್​​ದೀಪ್​ ಬ್ಯಾಟಿಂಗ್​ ಆರ್ಭಟ ಹೇಗಿತ್ತು ಅನ್ನೋದಕ್ಕೆ ಈ ಬೌಂಡರಿಗಳೇ ಬೆಸ್ಟ್​ ಎಕ್ಸಾಂಪಲ್. ಇಂಗ್ಲೆಂಡ್​ ಬೌಲಿಂಗ್​​ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಆಕಾಶ್​ದೀಪ್​ ಚೊಚ್ಚಲ ಟೆಸ್ಟ್​ ಹಾಫ್​ ಸೆಂಚುರಿ ಸಿಡಿಸಿದ್ರು. 94 ಎಸೆತ ಎದುರಿಸಿ 12 ಬೌಂಡರಿ ಸಹಿತ 66 ರನ್​ಗಳ ಕಾಣಿಕೆ ನೀಡಿದ್ರು. 3ನೇ ವಿಕೆಟ್​ ಆಕಾಶ್​​ದೀಪ್​​ - ಯಶಸ್ವು ಜೈಸ್ವಾಲ್​ 107 ರನ್​ಗಳ ಜೊತೆಯಾಟವಾಡಿದ್ರು. ಬಿಗ್​ ಟಾರ್ಗೆಟ್ ಈ ಸೆಂಚುರಿ ಪಾರ್ಟ್​​ನರ್​ಶಿಪ್​​ ಮಹತ್ವದ ಪಾತ್ರವಹಿಸಿದ್ದು ಸುಳ್ಳಲ್ಲ.

ಇದನ್ನೂ ಓದಿ: ಫೈನಲ್​​ ಟೆಸ್ಟ್​ಗೆ ರೋಚಕ ತಿರುವು ಕೊಟ್ಟ ಟೀಂ ಇಂಡಿಯಾ.. ಮೂರನೇ ದಿನ ಸಖತ್ ಆಟ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

England vs India
Advertisment