/newsfirstlive-kannada/media/media_files/2025/08/03/team-india-england-test-2025-08-03-07-23-15.jpg)
Photograph: (ಬಿಸಿಸಿಐ ಟ್ವಿಟರ್)
ಇಂಡೋ-ಇಂಗ್ಲೆಂಡ್​​ ಕೊನೆಯ ಟೆಸ್ಟ್​ ಪಂದ್ಯ ಅಂತಿಮ ಘಟ್ಟ ತಲುಪಿದೆ. ಬಿಗ್​ ಟಾರ್ಗೆಟ್​ ಸೆಟ್​ ಮಾಡಿ ಟೀಮ್​ ಇಂಡಿಯಾ ಬೌಲಿಂಗ್​ಗಿಳಿದಿದ್ರೆ, ಇಂಗ್ಲೆಂಡ್​​ ಚೇಸಿಂಗ್​ ಚಾಲೆಂಜ್​ ಶುರುಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಹಿನ್ನಡೆ ಅನುಭವಿಸಿದ್ದ ಟೀಮ್​ ಇಂಡಿಯಾ, 2ನೇ ಇನ್ನಿಂಗ್ಸ್​ ಅಂತ್ಯದ ಬಳಿಕ ಗೆಲ್ಲೋ ಫೇವರಿಟ್​ ಅನಿಸಿಕೊಂಡಿದೆ. ಈ ಬದಲಾವಣೆಗೆ ಕಾರಣ 3ನೇ ದಿನದಾಟ.
ಚೊಚ್ಚಲ ಹಾಫ್​ ಸೆಂಚುರಿ ಸಿಡಿಸಿದ ಆಕಾಶ್​ದೀಪ್​..!
2 ವಿಕೆಟ್​ ನಷ್ಟಕ್ಕೆ 75 ರನ್​ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ 3ನೇ ದಿನ ಅದ್ಭುತ ಸ್ಟಾರ್ಟ್​ ಸಿಗ್ತು. ನೈಟ್​ ​ವಾಚ್​​ಮನ್​ ಆಗಿ ಕಣಕ್ಕಿಳಿದಿದ್ದ ಆಕಾಶ್​​ ದೀಪ್​ 3ನೇ ದಿನ ಸೂಪರ್ಬ್​ ಬ್ಯಾಟಿಂಗ್​ ನಡೆಸಿದ್ರು. ಅಗ್ರೆಸ್ಸಿವ್​ ಆರಂಭ ಪಡೆದಿದ್ದ ಯಶಸ್ವಿ ಜೈಸ್ವಾಲ್​ ತಾಳ್ಮೆಯ ಆಟವಾಡಿದ್ರು70 ಎಸೆತಗಳಲ್ಲಿ ಆಕಾಶ್​ದೀಪ್​ ಚೊಚ್ಚಲ ಟೆಸ್ಟ್​ ಹಾಫ್​ ಸೆಂಚುರಿ ಸಿಡಿಸಿದ್ರು. 3ನೇ ವಿಕೆಟ್​ಗೆ ಈ ಜೋಡಿ ಶತಕದ ಜೊತೆಯಾಟವಾಡಿತು.
/filters:format(webp)/newsfirstlive-kannada/media/media_files/2025/08/01/washington-sundar-2025-08-01-13-21-42.jpg)
ಈ ಅದ್ಭುತ ಜೊತೆಯಾಟವನ್ನ ಲಂಚ್​ ಬ್ರೇಕ್​ಗೂ ಮುನ್ನ ಜೆಮ್ಮಿ ಓವರ್​ಟನ್​ ಬ್ರೇಕ್​ ಮಾಡಿದ್ರು. 66 ರನ್​ಗಳಿಗೆ ಆಕಾಶ್​​ದೀಪ್​ ಅದ್ಭುತ ಇನ್ನಿಂಗ್ಸ್​ ಅಂತ್ಯವಾಯ್ತು. ಮೊದಲ ಸೆಷನ್​ ಅಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 189 ರನ್​ಗಳಿಸಿತು.
ಕೆನ್ನಿಂಗ್ಟನ್​ ಓವಲ್​ನಲ್ಲಿ ಜೈಸ್ವಾಲ್​ ಸೆಂಚುರಿ ಧಮಾಕಾ
2ನೇ ಸೆಷನ್​ನ ಆರಂಭದಲ್ಲೇ ಟೀಮ್​ ಇಂಡಿಯಾ ಆಘಾತ ಎದುರಿಸಿತು. ಕ್ಯಾಪ್ಟನ್​ ಗಿಲ್​ 11 ರನ್​ಗಳಿಗೆ ಆಟ ಮುಗಿಸಿದ್ರು. ಕನ್ನಡಿಗ ಕರುಣ್​ ನಾಯರ್​ ಆಟವೂ 17 ರನ್​ಗಳಿಗೆ ಅಂತ್ಯವಾಯ್ತು. ಇದ್ರ ಮದ್ಯೆ ಯಶಸ್ವಿ ಜೈಸ್ವಾಲ್​ 127 ಎಸೆತಗಳಲ್ಲಿ ಸೆಂಚುರಿ ಪೂರೈಸಿದ್ರು. ಆಂಗ್ಲರ ನಾಡಲ್ಲಿ ಚೊಚ್ಚಲ ಶತಕ ಸಿಡಿಸಿ ವಿಶೇಷವಾಗಿ ಸಂಭ್ರಮಿಸಿದ್ರು. ಶತಕದ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್​ ಔಟಾದ್ರು. ಆ ಬಳಿಕ ಕ್ರಿಸ್​​ನಲ್ಲಿ ಜೊತೆಯಾದ ರವಿಂದ್ರ ಜಡೇಜಾ- ದೃವ್​ ಜುರೇಲ್​ ತಂಡಕ್ಕೆ ಚೇತರಿಕೆ ನೀಡಿದ್ರು. ಟೀ ಬ್ರೇಕ್​ ವೇಳೆ 6 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 304 ರನ್​ಗಳಿಸಿತು.
/filters:format(webp)/newsfirstlive-kannada/media/post_attachments/wp-content/uploads/2025/07/RAVINDRA-JADEJA.jpg)
ಅರ್ಧಶತಕ ಸಿಡಿಸಿ ಮಿಂಚಿದ ಜಡೇಜಾ, ಸುಂದರ್
ಗುಡ್​​ ಸ್ಟಾರ್ಟ್​ ಪಡೆದಿದ್ದ ದೃವ್​ ಜುರೇಲ್​ ಬಿಗ್​ ಸ್ಕೋರ್​ ಕಲೆ ಹಾಕುವಲ್ಲಿ ಫೇಲ್​ ಆದ್ರು. 34 ರನ್​ಗಳಿಸಿ ಜುರೇಲ್​ ನಿರ್ಗಮಿಸಿದ್ರು. ಮತ್ತೊಂದು ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ ರವೀಂದ್ರ ಜಡೇಜಾ ಮತ್ತೊಂದು ಹಾಫ್​ ಸೆಂಚುರಿ ಸಿಡಿಸಿದ್ರು. 71 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಜಡೇಜಾ, 53 ರನ್​ಗಳಿಸಿ ಔಟಾದ್ರು.
396ಕ್ಕೆ ಇಂಗ್ಲೆಂಡ್​ ಆಲೌಟ್​, 374 ರನ್​ಗಳ ಟಾರ್ಗೆಟ್
ಇನ್ನೊಂದು ತುದಿಯಲ್ಲಿದ್ದ ವಾಷಿಂಗ್ಟನ್​ ಸುಂದರ್ ಕೂಡ​ ಅಬ್ಬರದ ಆಟವಾಡಿದ್ರು. 4 ಬೌಂಡರಿ, 4 ಸಿಕ್ಸರ್​ ಬಾರಿಸಿದ ಸುಂದರ್​ ವೇಗವಾಗಿ ಹಾಫ್​ ಸೆಂಚುರಿ ಪೂರೈಸಿದ್ರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸಿರಾಜ್​ ಡಕೌಟ್​ ಆದ್ರೆ, ಸುಂದರ್​ 53 ರನ್​ಗಳಿಸಿ ಔಟಾದ್ರು. 396 ರನ್​ಗಳಿಗೆ ಆಲೌಟ್​ ಆದ ಟೀಮ್​ ಇಂಡಿಯಾ, ಇಂಗ್ಲೆಂಡ್​ಗೆ 374 ರನ್​ಗಳ ಟಾರ್ಗೆಟ್​ ನೀಡಿತು.
ಈ ಗುರಿ ಬೆನ್ನತ್ತಿದ ಇಂಗ್ಲೆಂಡ್​ ತಂಡ ಉತ್ತಮ ಆರಂಭ ಪಡೆದುಕೊಳ್ತು. ಮೊದಲ ವಿಕೆಟ್​ಗೆ ಜಾಕ್​ಕ್ರಾವ್ಲಿ, ಬೆನ್​ ಡಕೆಡ್​ ಅರ್ಧಶತಕದ ಜೊತೆಯಾಟವಾಡಿದ್ರು. ದಿನದ ಅಂತಿಮ ಎಸೆತದಲ್ಲಿ ಮೊಹಮ್ಮದ್ ಸಿರಾಜ್​ ಜಾಕ್​ ಕ್ರಾವ್ಲಿನ ಕ್ಲೀನ್​ಬೋಲ್ಡ್​ ಮಾಡಿದ್ರು, ಇದ್ರೊಂದಿಗೆ ಇಂಗ್ಲೆಂಡ್​ ದಿನದ ಅಂತ್ಯಕ್ಕೆ 1 ವಿಕೆಟ್​ ನಷ್ಟಕ್ಕೆ 50 ರನ್​ಗಳಿಸಿದೆ. 34 ರನ್​ಗಳೊಂದಿಗೆ ಬೆನ್​ ಡಕೆಟ್ ಕ್ರಿಸ್​ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್​ ಗೆಲುವಿಗೆ 324 ರನ್​ ಬೇಕಿದ್ರೆ, ಟೀಮ್​ ಇಂಡಿಯಾಗೆ ಗೆಲುವಿಗೆ 9 ವಿಕೆಟ್​​ ಬೇಕಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us