/newsfirstlive-kannada/media/media_files/2025/08/04/mohammed-siraj-catch-2025-08-04-07-11-18.jpg)
ಕ್ಯಾಚ್ ಹಿಡಿದು ಬೌಂಡರಿ ಲೈನ್ ತುಳಿದ ಸಿರಾಜ್
ಇಂಡೋ-ಇಂಗ್ಲೆಂಡ್​​ ಕೆನ್ನಿಂಗ್ಟನ್​ ಓವಲ್​​​ ಕದನ ರಣರೋಚಕ ಘಟ್ಟ ತಲುಪಿದೆ. 4ನೇ ದಿನದಾಟದಲ್ಲಿ ಪಂದ್ಯಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್​​ ಸಿಗ್ತು. ಆರಂಭದಲ್ಲಿ ಟೀಮ್​ ಇಂಡಿಯಾ ಮೇಲುಗೈ ಸಾಧಿಸಿದ್ರೆ, ಬಳಿಕ ಇಂಗ್ಲೆಂಡ್​ ಪರಾಕ್ರಮ ಮರೆಯಿತು. ಅಂತಿಮ ಹಂತದಲ್ಲಿ ಟೀಮ್​ ಇಂಡಿಯಾ ರಣರೋಚಕ ಕಮ್​ಬ್ಯಾಕ್​ ಮಾಡ್ತು. ಹೇಗಿತ್ತು 4ನೇ ದಿನದಾಟ? ಇಲ್ಲಿದೆ ಹೈಲೆಟ್ಸ್!
1 ವಿಕೆಟ್​ ನಷ್ಟಕ್ಕೆ 50 ರನ್​​ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್​ ತಂಡಕ್ಕೆ ಆರಂಭದಲ್ಲೇ ಟೀಮ್​ ಇಂಡಿಯಾ ಶಾಕ್​ ಕೊಡ್ತು. ಅರ್ಧಶತಕ ಪೂರೈಸಿದ ಬೆನ್ನಲ್ಲೇ ಓಪನರ್​ ಬೆನ್​ ಡಕೆಟ್​ ವಿಕೆಟ್​​​ನ ಕನ್ನಡಿಗ ಪ್ರಸಿದ್ಧ್​​ ಕೃಷ್ಣ ಭೇಟೆಯಾಡಿದ್ರು. ಆ ಬಳಿಕ ಕಣಕ್ಕಿಳಿದ ನಾಯಕ ಒಲಿ ಪೋಪ್​, ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. 27 ರನ್​ಗಳಿಸಿದ್ದ ಪೋಪ್​​ನ ಸಿರಾಜ್​ ಎಲ್​ಬಿ ಬಲೆಗೆ ಬೀಳಿಸಿದ್ರು.
ಕ್ಯಾಚ್​ ಹಿಡಿದು ಬೌಂಡರಿ ಲೈನ್​ ತುಳಿದ ಸಿರಾಜ್​
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಹ್ಯಾರಿ ಬ್ರೂಕ್​ 29 ರನ್​ಗಳಿಸಿದ್ದ ವೇಳೆ ಸಿಕ್ಸರ್​ ಸಿಡಿಸಲು ಹೋಗಿ ಕ್ಯಾಚ್​ ನೀಡಿದ್ರು. ಬೌಂಡರಿ ಲೈನ್​ನಲ್ಲಿ ಕ್ಯಾಚ್​ ಹಿಡಿದ ಮೊಹಮ್ಮದ್​ ಸಿರಾಜ್​​​ ಮಿಸ್​​ ಆಗಿ ಬೌಂಡರಿ ಲೈನ್​ ಟಚ್​ ಮಾಡಿಬಿಟ್ರು. ಜೀವದಾನ ಪಡೆದ ಹ್ಯಾರಿ ಬ್ರೂಕ್​​ ಆ ಬಳಿಕ ಮತ್ತಷ್ಟು ಡೇಂಜರಸ್​​ ಆಟವಾಡಿದ್ರು. ಬ್ರೂಕ್​ ಮತ್ತು ಜೋ ರೂಟ್​​ 4ನೇ ವಿಕೆಟ್​ಗೆ 195 ರನ್​ಗಳ ಜೊತೆಯಾಟವಾಡಿದ್ರು.
/filters:format(webp)/newsfirstlive-kannada/media/media_files/2025/08/03/siraj-arshdeep-jaiswal-2025-08-03-12-28-25.jpg)
ಅದೃಷ್ಟದ ಅವಕಾಶವನ್ನ ಬಾಚಿಕೊಂಡ ಹ್ಯಾರಿ ಬ್ರೂಕ್​ ಇಂಡಿಯನ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಸ್ಫೋಟಕ ಇನ್ನಿಂಗ್ಸ್​​ ಕಟ್ಟಿದ ಬ್ರೂಕ್​ ಜಸ್ಟ್​ 39 ಎಸೆತಕ್ಕೆ ಹಾಫ್​ ಸೆಂಚುರಿ ಪೂರೈಸಿದ್ರು. ಬಳಿಕ 91 ಎಸೆತಕ್ಕೆ ಶತಕ ಸಿಡಿಸಿದ್ರು. 98 ಎಸೆತ ಎದುರಿಸಿ 14 ಬೌಂಡರಿ, 2 ಸಿಕ್ಸರ್​ ಸಹಿತ 111 ರನ್​ಗಳ ಬೊಂಬಾಟ್​ ಇನ್ನಿಂಗ್ಸ್​ ಕಟ್ಟಿದ್ರು.
ರೂಟ್​​ ತಾಳ್ಮೆಯ ಆಟ.. ಶತಕ ಸಿಡಿಸಿ ಮಿಂಚು
ಬ್ರೂಕ್​ ಅಬ್ಬರದ ಆಟವಾಡಿದ್ರೆ ಜೋ ರೂಟ್​ ತಾಳ್ಮೆಯಿಂದ ಇನ್ನಿಂಗ್ಸ್​ ಕಟ್ಟಿದ್ರು. ರಕ್ಷಣಾತ್ಮಕ ಆಟವಾಡಿದ ರೂಟ್​​ ಅರ್ಧಶತಕ ಸಿಡಿಸಲು 81 ಎಸೆತಗಳನ್ನ ತೆಗೆದುಕೊಂಡ್ರು. 111 ರನ್​ಗಳಿಸಿ ಬ್ರೂಕ್​ ಔಟಾದ ನಂತರವೂ ಉತ್ತಮ ಆಟ ಮುಂದುವರೆಸಿದ ರೂಟ್​​, 137 ಎಸೆತಗಳಲ್ಲಿ ಶತಕ ಪೂರೈಸಿದ್ರು.
ಪಂದ್ಯಕ್ಕೆ ಟ್ವಿಸ್ಟ್​ ಕೊಟ್ಟ ಕನ್ನಡಿಗ ಪ್ರಸಿದ್ಧ್​​ ಕೃಷ್ಣ.!
62.4ನೇ ಓವರ್​​ನಲ್ಲಿ ಆಕಾಶ್​​ದೀಪ್​ ಬೌಲಿಂಗ್​ನಲ್ಲಿ ಬ್ರೂಕ್​ ಔಟಾದ ಬಳಿಕ ಗೇಮ್​ಗೆ ಟ್ವಿಸ್ಟ್​ ಸಿಗ್ತು. ಕನ್ನಡಿಗ ಪ್ರಸಿದ್ಧ್​ ಕೃಷ್ಣ ಬೌಲಿಂಗ್​ನಲ್ಲಿ ಯಡವಟ್ಟು ಮಾಡಿಕೊಂಡ ಜೇಕಬ್​ ಬೆತೆಲ್​, ಕ್ಲೀನ್​ಬೋಲ್ಡ್​​​ ಆಗ ನಿರ್ಗಮಿಸಿದ್ರು.
ಇದನ್ನೂ ಓದಿ:ಜಯದ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ.. ಅದಕ್ಕೆ ಕಾರಣ ಇಬ್ಬರು ಸ್ಟಾರ್​​ಗಳು..
/filters:format(webp)/newsfirstlive-kannada/media/media_files/2025/08/03/team-india-england-test-2025-08-03-07-23-15.jpg)
ಶತಕ ಸಿಡಿಸಿ ಮಿಂಚಿದ್ದ ಜೋ ರೂಟ್​ ಕೂಡ ಕನ್ನಡಿಗನ ಮುಂದೆ ತಲೆಬಾಗಿದ್ರು. 72ನೇ ಓವರ್​​ನ ಕೊನೆಯ ಎಸೆತದಲ್ಲೇ ಪ್ರಸಿದ್ಧ್​​ ಜೋ ರೂಟ್​ ವಿಕೆಟ್​ ಉರುಳಿಸಿದ್ರು. ಬೆತೆಲ್​ ವಿಕೆಟ್​ ಪತನದ ಬಳಿಕವಂತೂ ಟೀಮ್​ ಇಂಡಿಯಾ ಬೌಲರ್​ಗಳು ಟೈಟ್​ ಸ್ಪೆಲ್​ ಹಾಕಿದ್ರು. ದಿನದಾಟದ ಕೊನೆಯ 6 ಓವರ್​ಗಳಲ್ಲಿ 2 ವಿಕೆಟ್​ ಬೇಟೆಯಾಡಿದ ಇಂಡಿಯನ್​ ಬೌಲರ್ಸ್​​ ಜಸ್ಟ್​​ 8 ರನ್​ ಬಿಟ್ಟುಕೊಟ್ರು. ಭುಜಬಲದ ಪರಾಕ್ರಮ ಮೆರೆದ ಸಿರಾಜ್​​, ಪ್ರಸಿದ್ಧ್​.. ಜೇಮಿ ಸ್ಮಿತ್​, ಜೇಮ್ಮಿ ಓವರ್​ಟನ್​ನ ಒತ್ತಡಕ್ಕೆ ಸಿಲುಕಿಸಿದ್ರು.
ಪಂದ್ಯಕ್ಕೆ ಟ್ವಿಸ್ಟ್​ ಕೊಟ್ಟ ಬ್ಯಾಟ್​ ಲೈಟ್​, ಮಳೆ
ಪಂದ್ಯ ರೋಚಕತೆ ಪಡೆದುಕೊಂಡ ಬೆನ್ನಲ್ಲೇ ಪಂದ್ಯಕ್ಕೆ ಮತ್ತೊಂದು ಟ್ವಿಸ್ಟ್​ ಸಿಗ್ತು. 75.6 ಓವರ್​​ ಆದ ಬೆನ್ನಲ್ಲೇ ಬ್ಯಾಡ್​ ಲೈಟ್​ನಿಂದಾಗಿ ಪಂದ್ಯವನ್ನ ಸ್ಥಗಿತಗೊಳಿಸಲಾಯ್ತು. ಅದಾದ ಕೆಲ ಹೊತ್ತಿಗೆ ಮಳೆರಾಯ ಬೇರೆ ಎಂಟ್ರಿ ಕೊಟ್ಟ. ಪರಿಣಾಮ ದಿನದಾಟವನ್ನ ಅಂತ್ಯಗೊಳಿಸಲಾಯ್ತು. ಇಂದಿನ ಕೊನೆಯ ದಿನದಾಟ ಕುತೂಹಲ ಕೆರಳಿಸಿದ್ದು, ಇಂಗ್ಲೆಂಡ್​ ಗೆಲುವಿಗೆ 35 ರನ್​ ಬೇಕಿದ್ರೆ, ಭಾರತದ ಗೆಲುವಿಗೆ ಟೆಕ್ನಿಕಲಿ 4 ವಿಕೆಟ್​ ಬೇಕಿವೆ. ಗಾಯಗೊಂಡಿರೋ ಕ್ರಿಸ್​ವೋಕ್ಸ್​ ಬ್ಯಾಟಿಂಗ್​ಗೆ ಬರದಿದ್ರೆ, 3 ವಿಕೆಟ್​ ಕಬಳಿಸಿದ್ರೆ ಸಾಕು ಟೀಮ್​ ಇಂಡಿಯಾ ಗೆಲ್ಲಲಿದೆ.
ಇದನ್ನೂ ಓದಿ: 14 ವರ್ಷದ ಬಳಿಕ ಭಾರತಕ್ಕೆ ಬರುತ್ತಿರೋ ಫುಟ್ಬಾಲ್ ಸ್ಟಾರ್ ಲಿಯೋನಲ್​ ಮೆಸ್ಸಿ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ