ನಂಗೆ ಪುರಷರ ಮೇಲೆ ಆಸಕ್ತಿ ಇಲ್ಲ, ಮಹಿಳೆಯರ ಮೇಲೆ ಆಸಕ್ತಿ -ಟ್ರಂಪ್ ಯಾರನ್ನ ನೋಡಿ ಹೇಳಿದ್ರು..?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಮಾತು ಮತ್ತು ಹಾಸ್ಯದ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ವಾಷಿಂಗ್ಟನ್‌ನಲ್ಲಿ ನಡೆದ ‘ಬೋರ್ಡ್ ಆಫ್ ಪೀಸ್’ (Board of Peace) ಸಭೆಯಲ್ಲಿ ಅವರು ಪರಾಗ್ವೆ (prague) ಅಧ್ಯಕ್ಷರ ಬಗ್ಗೆ ಆಡಿದ ಮಾತುಗಳು ಸಖತ್ ವೈರಲ್ ಆಗಿವೆ.

author-image
Ganesh Kerekuli
donald trump (2)
Advertisment
  • ನನಗೆ ಹ್ಯಾಂಡ್‌ಸಮ್ ಹುಡುಗರು ಇಷ್ಟವಿಲ್ಲ
  • ನನಗೆ ಮಹಿಳೆಯರೇ ಇಷ್ಟ -ಟ್ರಂಪ್ ಜೋಕ್
  • ಬೋರ್ಡ್​ ಆಫ್ ಪೀಸ್ ಸಭೆಯಲ್ಲಿ ಗಾಜಾಕ್ಕೆ ಬಂಪರ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಮಾತು ಮತ್ತು ಹಾಸ್ಯದ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ವಾಷಿಂಗ್ಟನ್‌ನಲ್ಲಿ ನಡೆದ ‘ಬೋರ್ಡ್ ಆಫ್ ಪೀಸ್’ (Board of Peace) ಸಭೆಯಲ್ಲಿ ಅವರು ಪರಾಗ್ವೆ (prague) ಅಧ್ಯಕ್ಷರ ಬಗ್ಗೆ ಆಡಿದ ಮಾತುಗಳು ಸಖತ್ ವೈರಲ್ ಆಗಿವೆ.

ಟ್ರಂಪ್ ಚಟಾಕಿ, ಸಭೆಯಲ್ಲಿ ನಗೆಗಡಲು

ಕಾರ್ಯಕ್ರಮದಲ್ಲಿ ಪರಾಗ್ವೆ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ (Santiago Peña) ಅವರನ್ನು ಸ್ವಾಗತಿಸುವಾಗ ಟ್ರಂಪ್ ತಮಾಷೆಯಾಗಿ ಮಾತನಾಡಿದರು. ‘ಯುವಕನಾಗಿರುವುದು ಮತ್ತು ಹ್ಯಾಂಡ್‌ಸಮ್ ಆಗಿರುವುದು ಯಾವಾಗಲೂ ಒಳ್ಳೆಯದೇ. ಆದರೆ, ಹಾಗಂತ ನಾವೇನೂ ನಿಮ್ಮನ್ನು ಇಷ್ಟಪಡಲೇಬೇಕು ಅಂತೇನಿಲ್ಲ. ನನಗೆ ಯುವ, ಹ್ಯಾಂಡ್‌ಸಮ್ ಹುಡುಗರು ಇಷ್ಟವಿಲ್ಲ. ನನಗೆ ಮಹಿಳೆಯರೇ ಇಷ್ಟ. ಪುರುಷರಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಟ್ರಂಪ್ ಹೇಳಿದರು. ಟ್ರಂಪ್ ಅವರ ಈ ಮಾತು ಕೇಳಿ ಸಭೆಯಲ್ಲಿದ್ದ ಗಣ್ಯರೆಲ್ಲರೂ ಬಿದ್ದು ಬಿದ್ದು ನಗಲಾರಂಭಿಸಿದರು. ಅಂದಹಾಗೆ, 47 ವರ್ಷದ ಸ್ಯಾಂಟಿಯಾಗೊ ಪೆನಾ ಪರಾಗ್ವೆ ದೇಶದ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದು, ಅರ್ಥಶಾಸ್ತ್ರಜ್ಞರೂ ಆಗಿದ್ದಾರೆ.

ಇದನ್ನೂ ಓದಿ:ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ಎಸೆತ.. ಬಾಗಲಕೋಟೆಯಲ್ಲಿ ಫೆ.24ವರೆಗೆ ನಿಷೇಧಾಜ್ಞೆ

ಗಾಜಾಕ್ಕೆ ಹಣದ ಹೊಳೆ ಹರಿಸಿದ ಟ್ರಂಪ್

ತಮಾಷೆಯ ಮಾತುಗಳ ನಂತರ ಗಂಭೀರ ವಿಷಯದತ್ತ ಹೊರಳಿದ ಟ್ರಂಪ್, ಯುದ್ಧ ಪೀಡಿತ ಗಾಜಾದ ಪುನರ್ನಿಮಾಣಕ್ಕೆ ಅಮೆರಿಕದಿಂದ ಬರೋಬ್ಬರಿ 10 ಬಿಲಿಯನ್ ಡಾಲರ್ (ಸುಮಾರು 83 ಸಾವಿರ ಕೋಟಿ ರೂ.) ನೀಡುವುದಾಗಿ ಘೋಷಿಸಿದರು. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವುದು ನಮ್ಮ ಗುರಿ ಎಂದರು. ಅಮೆರಿಕದ ಜೊತೆಗೆ ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಕೂಡ ತಲಾ 1 ಬಿಲಿಯನ್ ಡಾಲರ್ ನೀಡಲು ಒಪ್ಪಿಗೆ ಸೂಚಿಸಿವೆ ಎಂದು ಶ್ವೇತಭವನ ತಿಳಿಸಿದೆ.

ಏನಿದು ‘ಬೋರ್ಡ್ ಆಫ್ ಪೀಸ್’?

ಟ್ರಂಪ್ ಆಡಳಿತವು ಹಳೆಯ ‘ಯುನೈಟೆಡ್ ಸ್ಟೇಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್’ ಅನ್ನು ಹೊಸ ರೂಪದಲ್ಲಿ ‘ಬೋರ್ಡ್ ಆಫ್ ಪೀಸ್’ ಎಂದು ಬದಲಾಯಿಸಿದೆ. ಈ ಮಂಡಳಿಯಲ್ಲಿ ಟ್ರಂಪ್ ಅವರಿಗೆ ‘ವೀಟೋ ಅಧಿಕಾರ’ ಇರುತ್ತದೆ. ವಿಶೇಷವೆಂದರೆ, ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೇಲೂ ಇದರ ಮುಖ್ಯಸ್ಥರಾಗಿ ಮುಂದುವರಿಯಬಹುದು. ಈ ಮಂಡಳಿಯಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ಕಾಯಂ ಸದಸ್ಯರಾಗಲು ಬಯಸುವ ದೇಶಗಳು 1 ಬಿಲಿಯನ್ ಡಾಲರ್ ದೇಣಿಗೆ ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮದ ನಂತರ ಗಾಜಾವನ್ನು ಮತ್ತೆ ಕಟ್ಟಲು ಟ್ರಂಪ್ ನೇತೃತ್ವದಲ್ಲಿ ಈ ಹೊಸ ‘ಬೋರ್ಡ್’ ಹಣ ಸಂಗ್ರಹಕ್ಕೆ ಇಳಿದಿದೆ.

ಇದನ್ನೂ ಓದಿ: ಟ್ರಂಪ್ ಕನಸಿನ ‘ಶಾಂತಿ ಮಂಡಳಿ’ ಸಭೆಯಲ್ಲಿ ಭಾರತ ಭಾಗಿ.. ಆದರೆ ಸದಸ್ಯತ್ವ ಪಡೆಯಲಿಲ್ಲ.. ಮತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DONALD TRUMP
Advertisment