/newsfirstlive-kannada/media/media_files/2025/11/27/imran-khan-2025-11-27-09-49-06.jpg)
ಇಮ್ರಾನ್​ ಖಾನ್​.. ಪಾಕಿಸ್ತಾನದ ಮಾಜಿ ಪ್ರಧಾನಿ.. ಮಾಜಿ ಕ್ರಿಕೆಟರ್​​... ಸದ್ಯ ಇವರು ಭ್ರಷ್ಟಾಚಾರ ಆರೋಪದಡಿ ಜೈಲಿನಲ್ಲಿದ್ದಾರೆ.. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಡಿಯಾಲಾ ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಹ* ಮಾಡಲಾಗಿದೆ ಎಂಬ ವದಂತಿಗಳು ಎಲ್ಲೆಡೆ ಹರಡಿವೆ. ಕೆಲವೊಂದು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಇದರ ಬೆನ್ನಲ್ಲೇ ಜೈಲಿನ ಹೊರಗೆ ಭಾರೀ ಹೈಡ್ರಾಮಾ ನಡೆದಿದೆ.
ಇದನ್ನೂ ಓದಿ: ಘನ ಘೋರ ದುರಂತ.. 44 ಮಂದಿ ಸಜೀವ ದಹನ -ಅಸಲಿಗೆ ಆಗಿದ್ದೇನು..?
ಇಮ್ರಾನ್ ಖಾನ್ ಸುದ್ದಿ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಪಾಕಿಸ್ತಾನ ಸರ್ಕಾರ ಕೂಡ ಈ ಬಗ್ಗೆ ಖಚಿತ ಪಡಿಸಿಲ್ಲ. ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ವಿದೇಶಾಂಗ ಸಚಿವಾಲಯ ಬಲೂಚಿಸ್ತಾನ್ ಎಂದು ಗುರುತಿಸಿಕೊಂಡಿರುವ ಒಂದು ಎಕ್ಸ್ ಖಾತೆಯು 'ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ ಈ ಕೊಲೆಯ ಸಂಚನ್ನು ರೂಪಿಸಿದೆ' ಎಂದು ನೇರವಾಗಿ ಆರೋಪಿಸಿದೆ.
ಜೈಲಿನ ಬಳಿ ಜನರ ಜಮಾವಣೆ
​ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕುರಿತ ವದಂತಿಗಳು ಹರಡಿದ ನಂತರ, ಜೈಲಿನ ಹೊರಗೆ ಜನಸಮೂಹ ಜಮಾಯಿಸಿದೆ. ಜೈಲಿನ ಮುಂಭಾಗದಲ್ಲಿ ಇಮ್ರಾನ್​ ಬೆಂಬಲಿಗರು ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗುವ ಮೂಕಲ ಪಾಕ್​​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಮ್ರಾನ್ ಖಾನ್ ಸಹೋದರಿಯರ ಮೇಲೆ ಪೊಲೀಸರ ಹಲ್ಲೆ
ವದಂತಿಗಳ ನಡುವೆ ಇಮ್ರಾನ್​ ಖಾನ್​​ರನ್ನು ಭೇಟಿಯಾಗಲು ಹೋದ ಮೂವರು ಸಹೋದರಿಯರ ಮೇಲೂ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಅವರ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ಸಹೋದರಿಯರು ಕಳೆದ 21 ದಿನಗಳಿಂದ ಜೈಲಿನ ಹೊರಗೆ ಕಾಯುತ್ತಿದ್ದಾರೆ. ಯಾರಿಗೂ ಅಡಿಯಾಲ ಜೈಲಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಇದೀಗ ಅವರ ಮೇಲೆಯೇ ಹಲ್ಲೆ ನಡೆದಿರುವುದು ನಾನಾ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ: ಖಾದಿಗಳ ಕುರ್ಚಿ ಕದನಕ್ಕೆ ಖಾವಿಗಳ ರಂಗಪ್ರವೇಶ.. ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ಬೇಸರ
ಅದೇನೇ ಇರಲಿ, ಭ್ರಷ್ಟಾಚಾರ ಕೇಸ್​ನಲ್ಲಿ ಜೈಲು ಪಾಲಾಗಿರುವ ಇಮ್ರಾನ್​​ ಖಾನ್​​. ಆರೋಗ್ಯವಾಗಿದ್ದಾರಾ. ಇಲ್ಲ ಅವರಿಗೇನಾದ್ರೂ ತೊಂದರೆ ಆಗಿದ್ಯಾ ಅನ್ನೋದು ಅಧಿಕೃತವಾಗಿ ತಿಳಿಯಬೇಕಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us