/newsfirstlive-kannada/media/media_files/2025/11/27/nirmalanandanataha-and-kaginele-shree-2025-11-27-09-08-42.jpg)
ಚಳಿಗಾಲಕ್ಕೂ ಮುನ್ನವೇ ಶುರುವಾಗಿದ್ದ ಕುರ್ಚಿ ಕದನಕ್ಕೆ ನಾಲ್ಕೈದು ದಿನಗಳಲ್ಲಿ ತೆರೆ ಬೀಳುವ ಕಾಲ ಸನ್ನಿಹಿತವಾದಂತೆ ಭಾಸವಾಗ್ತಿದೆ. ಸಿದ್ದರಾಮಯ್ಯ ಪಟ್ಟ ಬಿಡ್ತಾರಾ, ಡಿಕೆಶಿ ಆಸೆ ಈಡೇರುತ್ತಾ ಅನ್ನೋದು ನಿರ್ಧಾರ ಆಗ್ಲಿದೆ. ಈ ನಡುವೆ ಸ್ವಾಮೀಜಿಗಳ ಪ್ರದರ್ಶನ ಆಗಿದ್ದು ವಕಾಲತು ವಹಿಸಿದ್ದಾರೆ. ಸ್ವಾಮೀಜಿ vs ಸ್ವಾಮೀಜಿಗಳ ನಡುವೆಯೇ ವಾಕ್ಸಮರ ಶುರುವಾಗಿದೆ.
ಖಾದಿಗಳ ಕುರ್ಚಿ ಕದನಕ್ಕೆ ಖಾವಿಗಳ ರಂಗಪ್ರವೇಶ!
ಜಾತಿಯ ಕಾರಣಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೋ ಏನೋ ಸ್ವಾಮೀಜಿಗಳು ರಾಜಕಾರಣಿಗಳ ಪರ ವಕಾಲತು ವಹಿಸ್ತಿದ್ದಾರೆ. ಇತ್ತೀಚೆಗೆ ಸ್ವಲ್ಪ ಸೈಲೆಂಟ್ ಆಗಿದ್ದ ಸ್ವಾಮೀಜಿ ಕಾಂಗ್ರೆಸ್ ಕುರ್ಚಿ ಕದನ ಫೈಟ್​ಗೆ ರಂಗಪ್ರವೇಶ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಆದಿಚುಂಚನಗಿರಿ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.. ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಡ್ಬೇಕು ಜೊತೆಗೆ ಗೊಂದಲಗಳನ್ನು ಬಗೆಹರಿಸಿ ಡಿಕೆಶಿಗೆ ಸಿಎಂ ಸ್ಥಾನ ನೀಡುವಂತೆ ಕಾಂಗ್ರೆಸ್​ ಹೈಕಮಾಂಡ್​​ಗೆ ಮನವಿ ಮಾಡಿದ್ದಾರೆ..
ಇದನ್ನೂ ಓದಿ:ಸಿಲಿಕಾನ್​ ಸಿಟಿ ಮಂದಿಗೆ ಇದು ನಿಜಕ್ಕೂ ಖುಷಿಯ ಸಮಾಚಾರ.. ಓದಲೇಬೇಕಾದ ಸ್ಟೋರಿ..!
ಸದ್ಯ ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ನಮ್ಮವರೊಬ್ಬರು ಸಿಎಂ ಆಗ್ತಾರೆ ಅಂತ ಅಂದುಕೊಂಡಿದ್ದೇವೆ. ಈಗ ಎರಡೂವರೆ ವರ್ಷ ಆದ ಮೇಲೆ ನಮ್ಮ ಸಮುದಾಯವರು, ಸಿಎಂ ಆಗುತ್ತಾರೆ ಎಂದುಕೊಂಡಿದ್ದೇವೆ. ಡಿಕೆಶಿ ಎರಡೂವರೆ ವರ್ಷ ಆದ ಮೇಲೆ ಸಿಎಂ ಆಗಬೇಕು ಅನ್ನುವ ಆಸೆ ನಮಗೂ ಇದೆ. ಇನ್ನುಳಿದ ಎರಡೂವರೆ ವರ್ಷ ಡಿಕೆಶಿ ಸಿಎಂ ಆಗಬೇಕೆನ್ನುವ ಅಭಿಲಾಷೆ ನಮಗೂ ಇದೆ.ಸಿಎಂ ಸ್ಥಾನದ ಆಕಾಂಕ್ಷಿ ಆಗಿರುವ ಡಿಕೆಶಿ, ಪ್ರಸ್ತುತ ಡಿಸಿಎಂ ಆಗಿದ್ದಾರೆ. ಈ ವಿಚಾರ ಡಿಕೆಶಿ ನಮ್ಮ ಜೊತೆ ಮಾತನಾಡಿಲ್ಲ. ಸಾವಿರಾರು ಭಕ್ತರು ಕರೆ ಮಾಡುತ್ತಾರೆ. 3 ಪಕ್ಷಗಳಲ್ಲೂ ಒಳ್ಳೆಯ ನಾಯಕರಿದ್ದಾರೆ. ಡಿಕೆಶಿ ಶಿಸ್ತಿನ ಸಿಪಾಯಿ. ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಡಿಕೆಶಿ ಸಿಎಂ ಆಗಬೇಕು. ಭಕ್ತರು ನಮ್ಮ ಜೊತೆ ಹೇಳಿಕೊಂಡಿದ್ದಾರೆ. ಡಿಕೆಶಿ ಸಿಎಂ ಆಗಬೇಕೆಂದು ಭಕ್ತರು ಆಸೆ ವ್ಯಕ್ತಪಡಿಸಿದ್ದಾರೆ. ಎರಡೂವರೆ ಎರಡೂವರೆ ಅಧಿಕಾರ ಹಂಚಿಕೆ ವಿಚಾರ ಜನರು ಚರ್ಚೆ ಮಾಡುತ್ತಿದ್ದಾರೆ. ಡಿಕೆಶಿಗೆ ರಾಜಕೀಯ ಒಳಸುಳಿ ಗೊತ್ತಿದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಆದ್ರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಅಭಿವೃದ್ಧಿ ಮಾರಕವಾಗುತ್ತದೆ. ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಹೈಕಮಾಂಡ್ ಸಮಸ್ಯೆ ಬಗೆಹರಿಸಲಿ.
ನಿರ್ಮಲಾನಂದನಾಥ ಸ್ವಾಮಿ, ಆದಿಚುಂಚನಗಿರಿ ಮಠ
ಒಕ್ಕಲಿಗ ನಾಯಕ ಡಿಕೆಶಿ ಪರ ನಿಂತ ನಿರ್ಮಲಾನಂದನಾಥ ಸ್ವಾಮೀಜಿಗೆ ಕುರುಬ ಸಮುದಾಯದ ಸ್ವಾಮೀಜಿಗಳು ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಗಳ ಆಯ್ಕೆ ಸಂವಿಧಾನಿಕವಾಗಿ ಶಾಸಕರ ಅಧಿಕಾರ, ಸಿಎಂ ಯಾರಾಗಬೇಕು ಅನ್ನೋದನ್ನ ಶಾಸಕರು ನಿರ್ಧರಿಸುತ್ತಾರೆ ಅಂತ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳ ಟಾಂಗ್ ನೀಡಿದ್ದಾರೆ.
ಸಂವಿಧಾನದಲ್ಲಿ ಮಠಾಧೀಶರು ಹೇಳಿದ ತಕ್ಷಣ ಮುಖ್ಯಮಂತ್ರಿ ಆಗುವ ಅವಕಾಶ ಇದೆಯಾ? ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡುವಂತದ್ದು, ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಂತದ್ದು, ಸಂವಿಧಾನಿಕವಾಗಿ ಆಯ್ಕೆಯಾದ ಶಾಸಕರ ಅಧಿಕಾರ. ಹಾಗಾಗಿ ಶಾಸಕರು ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನು ನಿರ್ಧಾರ ಮಾಡುತ್ತಾರೆ.
ನಿರಂಜನಾನಂದ ಪುರಿ ಸ್ವಾಮೀಜಿ, ಕಾಗಿನೆಲೆ ಪೀಠ
ಸಿದ್ದರಾಮ ಮಹಾಪುರಿ ಸ್ವಾಮೀಜಿಗಳು ಬೇಸರ
ಆದಿಚುಂಚನಗಿರಿ ಮಠದ ಸ್ವಾಮೀಜಿಗೆ ಕಾಗಿನೆಲೆ ಶಾಖಾ ಮಠದ ಶ್ರೀ ಟಾಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿರೋ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ, ಮಠಾಧೀಶರು ಇದ್ರಲ್ಲಿ ಮಧ್ಯಪ್ರವೇಶ ಮಾಡೋದು ಸೂಕ್ತವಲ್ಲ, ಜಾತಿ ಹಿನ್ನೆಲೆಯಲ್ಲಿ ಹೀಗೆ ಮಾತನಾಡಿದ್ರೆ ಇತರೆ ಸಮುದಾಯಗಳನ್ನು ಅವಮಾನಿಸಿದಂತೆ ಆಗುತ್ತೆ ಅಂತ ಬೇಸರ ಹೊರಹಾಕಿದ್ದಾರೆ.
ಈ ವಿಷಯದಲ್ಲಿ ಮಠಾಧೀಶರು ಮಧ್ಯ ಪ್ರವೇಶ ಮಾಡೋದು ಸೂಕ್ತವಲ್ಲ. ಕಾಂಗ್ರೆಸ್ ನಾಯಕರು ಚರ್ಚೆ ಮಾಡಿ ಸೂಕ್ತವಾದ ತೀರ್ಮಾನ ಮಾಡುತ್ತಾರೆ. ಪಕ್ಷದ ವಿಚಾರದಲ್ಲಿ ಮಠಾಧೀಶರು ಎಂಟ್ರಿಯಾಗೋದು ಯಾವುದೇ ಮಠಾಧೀಶರಿಗೂ ಸೂಕ್ತವಲ್ಲ.
ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ
ಸಚಿವ ಜಮೀರ್​ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಸಭೆ
ಪವರ್ ಪಾಲಿಟಿಕ್​ ನಡುವೆ ಸಚಿವ ಜಮೀರ್ ಅಹ್ಮದ್ ಜೊತೆ ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿದ್ದಾರೆ.. ಮೊನ್ನೆ ರಾತ್ರಿ ಡಿಸಿಎಂ ಡಿಕೆಶಿ ನಿವಾಸಕ್ಕೆ ತೆರಳಿ.. ಡಿಸಿಎಂ ಜೊತೆ ಜಮೀರ್​ ಒನ್​ ಟು ಒನ್​ ಮಾತುಕತೆ ನಡೆಸಿದ್ರು. ಇದೀಗ ವಿಧಾನಸೌಧದಲ್ಲಿ ಸಿಎಂ ಜೊತೆ ಜಮೀರ್​ ಅರ್ಧ ಗಂಟೆ ಮಾತನಾಡಿದ್ದಾರೆ. ಈ ವೇಳೆ ಡಿಕೆಶಿ ಜೊತೆಗಿನ ಮಾತುಕತೆಯ ವಿವರವನ್ನ ಸಿಎಂಗೆ ಒಪ್ಪಿಸಿದ್ರಾ ಅನುಮಾನ ಮೂಡಿಸಿದೆ. ಸಚಿವ ಜಮೀರ್​ ಜೊತೆ ಸಭೆ ನಡೆಸುವ ವೇಳೆ ಸಚಿವ ಹೆಚ್.ಸಿ.ಮಹದೇವಪ್ಪಗೂ ಕೂಡ ಒಳಗೆ ಬಿಡದ ಹೊರಗೆ ನಿಲ್ಲಿಸಿದ್ದು ಕಂಡು ಬಂತು.
ಇದನ್ನೂ ಓದಿ:ಇವತ್ತು ಯಾರಿಗೆ ಶುಭ, ಯಾರಿಗೆ ಅಶುಭ? ನಿಮ್ಮ ರಾಶಿ ಭವಿಷ್ಯ..!
ರಾಜ್ಯ ಕಾಂಗ್ರೆಸ್​ನಲ್ಲಿನ ಕುರ್ಚಿ ಕದನ ದಿನದಿಂದ ದಿನ ತಾರಕಕ್ಕೇರುತ್ತಿದ್ದು, ಹೈಕಮಾಂಡ್​​ನ ಚಿಂತೆಗೆ ಜಾರುವಂತೆ ಮಾಡಿದೆ. ಸದ್ಯ. ರಾಜ್ಯಕ್ಕೆ ಆಗಮಿಸಿರುವ ಮಲ್ಲಿಕಾರ್ಜುನ ಖರ್ಗೆ, ಇವತ್ತು ದೆಹಲಿಗೆ ವಾಪಸ್​ ಆಗಲಿದ್ದು, ರಾಹುಲ್​ ಗಾಂಧಿಯನ್ನು ಭೇಟಿ ಆಗುವ ಸಾಧ್ಯತೆ ಇದೆ. ಅದೇನೇ ಇರಲಿ, ತ್ಯಾಗಿಗಳಾದ ಸ್ವಾಮೀಜಿಗಳು ಭೋಗಿಗಳ ಪಾಲಿನ ರಾಜಕಾರಣದಲ್ಲಿ ಕೈಹಾಕಿ ತಮ್ಮ ತಮ್ಮ ಜಾತಿಗಳ ನಾಯಕರ ವಕ್ತಾರರಂತೆ ಮಾತನಾಡ್ತಿರೋದು ಮಾತ್ರ ಯಾರೂ ಒಪ್ಪುವಂಥದ್ದಲ್ಲ.
ಇನ್ನಷ್ಟು ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us