ಸಿಲಿಕಾನ್​ ಸಿಟಿ ಮಂದಿಗೆ ಇದು ನಿಜಕ್ಕೂ ಖುಷಿಯ ಸಮಾಚಾರ.. ಓದಲೇಬೇಕಾದ ಸ್ಟೋರಿ..!

ಸಿಲಿಕಾನ್​ ಸಿಟಿ ಮಂದಿಗೆ ಇದು ನಿಜಕ್ಕೂ ಖುಷಿಯ ಸಮಾಚಾರ. ಅಪಾರ್ಟ್​ಮೆಂಟ್​ಗಳಲ್ಲಿ ಫ್ಲ್ಯಾಟ್​ಗಳಿಗೆ ಹೆಚ್ಚಿನ ನಿರ್ವಹಣಾ ಶುಲ್ಕ ವಿಧಿಸುವ ಮಾದರಿಯನ್ನ ಕೋರ್ಟ್​ ರದ್ದು ಮಾಡಿದೆ. ಹೀಗಾಗಿ ಫ್ಲ್ಯಾಟ್‌ನ ಅಳತೆಯ ಆಧಾರದ ಮೇಲೆ ಹೆಚ್ಚುವರಿ ಶುಲ್ಕ ಇನ್ನು ಮುಂದೆ ವಿಧಿಸುವಂತಿಲ್ಲ.

author-image
Ganesh Kerekuli
apartments bangalore
Advertisment
  • ನಿರ್ವಹಣಾ ಶುಲ್ಕವನ್ನು ಎಲ್ಲ ಫ್ಲ್ಯಾಟ್‌ಗಳಿಗೆ ಸಮಾನವಾಗಿ ವಿಧಿಸಬೇಕು
  • ಬೈಲಾ ತಿದ್ದುಪಡಿಗಳನ್ನು ಅಸೋಸಿಯೇಶನ್‌ ಮಾಡದಂತೆ ಮಾರ್ಗದರ್ಶನ
  • ಹೆಚ್ಚು ಸ್ಕ್ವೇರ್ ಫೀಟ್ ಇರುವ ಪ್ಲಾಟ್​ಗಳಿಗೆ ಹೆಚ್ಚು ಮೆಂಟೆನೆನ್ಸ್ ವಿಧಿಸುವಂತಿಲ್ಲ

ಸಿಲಿಕಾನ್​ ಸಿಟಿ ಮಂದಿಗೆ ಇದು ನಿಜಕ್ಕೂ ಖುಷಿಯ ಸಮಾಚಾರ. ಅಪಾರ್ಟ್​ಮೆಂಟ್​ಗಳಲ್ಲಿ ಫ್ಲ್ಯಾಟ್​ಗಳಿಗೆ ಹೆಚ್ಚಿನ ನಿರ್ವಹಣಾ ಶುಲ್ಕ ವಿಧಿಸುವ ಮಾದರಿಯನ್ನ ಕೋರ್ಟ್​ ರದ್ದು ಮಾಡಿದೆ. ಹೀಗಾಗಿ ಫ್ಲ್ಯಾಟ್‌ನ ಅಳತೆಯ ಆಧಾರದ ಮೇಲೆ ಹೆಚ್ಚುವರಿ ಶುಲ್ಕ ಇನ್ನು ಮುಂದೆ ವಿಧಿಸುವಂತಿಲ್ಲ. ಅಷ್ಟೇ ಅಲ್ಲ, ಬಿಲ್ಟ್‌ಅಪ್ ಮತ್ತು ಸೂಪರ್‌ಬಿಲ್ಟ್‌ಅಪ್ ಪ್ರದೇಶದ ನಡುವಿನ ಗೊಂದಲ ತಿದ್ದಲು ಕೂಡ ಕೋರ್ಟ್​ ಸೂಚನೆ ನೀಡಿದೆ.

ಅಪಾರ್ಟ್​ಮೆಂಟ್​ಗಳಲ್ಲಿ ವಾಸ ಮಾಡೋ ಜನರಿಗೆ ನಿಜಕ್ಕೂ ಇದು ಶುಭ ಸುದ್ದಿ. ಹೆಚ್ಚು ಸ್ಕ್ವೇರ್ ಫೀಟ್ ಇರುವ ಫ್ಲಾಟ್​ಗಳಿಗೆ ಹೆಚ್ಚು ಮೆಂಟೆನೆನ್ಸ್ ವಿಧಿಸುತಿದ್ದ ಆಸೋಶಿಯಷನ್ ಕಿರಿಕಿರಿ ಇನ್ನು ನಿಮಗೆ ಇರೋದಿಲ್ಲ. ನಿಜ, ಬೈಲಾ ತಿದ್ದುಪಡಿಗಳನ್ನು ಅಸೋಸಿಯೇಶನ್‌ ಮಾಡದಂತೆ 40ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್​ ತೀರ್ಪು ನೀಡಿದ್ದು, ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ಆದೇಶ ನೀಡಿದೆ. ಈ ಮೂಲಕ 2020ರಲ್ಲಿ ನಗರದ ಪೂರ್ವ ಸೀಸನ್ಸ್‌ ಓನರ್ಸ್‌ ಅಸೋಸಿಯೇಷನ್‌ ಜಾರಿಗೊಳಿಸಿದ್ದ ನಿರ್ಣಯವನ್ನು ರದ್ದುಗೊಳಿಸಿದೆ. 

‘ಈ ನಿಯಮ ಕಾನೂನುಬಾಹಿರ’

ಈ ಆದೇಶ ನಗರದಲ್ಲಿನ ಅಪಾರ್ಟ್‌ಮೆಂಟ್‌ಗಳ ಮೇಲೆ ಗಮನಾರ್ಹ ಪರಿಣಾಮ ಬೀರಲಿದ್ದು, ಅಪಾರ್ಟ್‌ಮೆಂಟ್‌ಗಳು ಫ್ಲ್ಯಾಟ್‌ನ ವಿಸ್ತೀರ್ಣ ಅಧರಿಸಿ ನಿರ್ವಹಣಾ ಶುಲ್ಕ ವಿಧಿಸಲು ಅವಕಾಶವಿಲ್ಲದಂತಾಗಿದೆ. ಫ್ಲ್ಯಾಟ್‌ ಎಷ್ಟು ಪ್ರದೇಶ ಹೊಂದಿದೆಯೋ ಅದರ ಆಧಾರದ ಮೇಲೆ ನಿರ್ವಹಣಾ ಶುಲ್ಕ ವಿಧಿಸುವ ಅಸೋಸಿಯೇಷನ್‌ ನಿರ್ಧಾರ ಸರಿಯಲ್ಲ. ಎಲ್ಲಾ ಫ್ಲ್ಯಾಟ್‌ ಮಾಲೀಕರು ಸಾಮಾನ್ಯ ಸೌಕರ್ಯಗಳನ್ನು ಸಮಾನವಾಗಿ ಬಳಸುವುದರಿಂದ ನಿರ್ವಹಣಾ ಶುಲ್ಕವೂ ಸಮಾನವಾಗಿಯೇ ಇರಬೇಕಾಗುತ್ತದೆ. ಅಲ್ಲದೆ, ಹೆಚ್ಚಿನ ಬಿಲ್ಟ್‌ ಅಪ್‌ ಪ್ರದೇಶ ಹೊಂದಿದ್ದಾರೆಂಬ ಕಾರಣಕ್ಕಾಗಿ ಅಸೋಸಿಯೇಷನ್‌ ಹೆಚ್ಚಿನ ನಿರ್ವಹಣಾ ಶುಲ್ಕ ಪಾವತಿಸಬೇಕೆಂದು ಫ್ಲ್ಯಾಟ್‌ ಮಾಲೀಕರ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ನ್ಯಾಯಾಧೀಶರಾದ ಎನ್‌. ವೀಣಾ ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ:‘ಓ ದೇವರೇ..’ ಅತಿಥಿಗಳ ವಿರುದ್ಧ ಸಿಡಿದ ಅಶ್ವಿನಿ ಗೌಡ..! VIDEO

ಏನಿದು ಪ್ರಕರಣ?

  • 660 ಫ್ಲ್ಯಾಟ್‌ಗಳನ್ನು ಒಳಗೊಂಡ ಪೂರ್ವ ಸೀಸನ್ಸ್‌ ಅಸೋಸಿಯೇಷನ್‌
  • 2020ರಲ್ಲಿ ಒಟ್ಟು ನಿರ್ವಹಣಾ ಶುಲ್ಕದಲ್ಲಿ ಹೆಚ್ಚಿನ ಸೂಪರ್‌ ಬಿಲ್ಟ್‌ ಅಪ್‌
  • ಫ್ಲ್ಯಾಟ್‌ ಮಾಲೀಕರು ಶೇಕಡಾ 74 ಕ್ಕೂ ಅಧಿಕ ಶುಲ್ಕ ಪಾವತಿಸಬೇಕು
  • ಉಳಿದ ಶೇಕಡಾ 25.9 ರಷ್ಟು ಶುಲ್ಕವನ್ನು ಕಡಿಮೆ ಪ್ರದೇಶ ಹೊಂದಿದವರು
  • ಸಮಾನವಾಗಿ ಹಂಚಿಕೆ ಮಾಡಲಾಗುವುದು ಎಂದು ನಿರ್ಣಯ ಅಂಗೀಕಾರ
  • ಈ ನಿರ್ಣಯ ರದ್ದುಗೊಳಿಸುವಂತೆ ಅರುಣ್‌ ಕುಮಾರ್‌ ಕೋರ್ಟ್​ ಮೊರೆ 
  • ಈ ಅರ್ಜಿ ಸಂಬಂಧ ವಾದ ಪ್ರತಿವಾದ ಆಲಿಸಿದ ಸಿಟಿ ಸಿವಿಲ್ ಕೋರ್ಟ್​
  • ಅಸೋಸಿಯೇಷನ್‌ ನಿರ್ಣಯ ಕಾನೂನಿಗೆ ವಿರುದ್ಧ ಅಂತ ಕೋರ್ಟ್​ ಆದೇಶ 

ಒಟ್ನಲ್ಲಿ ಲಿಫ್ಟ್‌ ಕ್ಲಬ್‌ ಹೌಸ್‌, ಭದ್ರತೆ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳು ಎಲ್ಲಾ ಫ್ಲ್ಯಾಟ್‌ ಮಾಲೀಕರ ನಡುವೆ ಸಮಾನವಾಗಿ ಹಂಚಿಕೆಯಾಗುತ್ತವೆ. ಇಂತಹದ್ರಲ್ಲಿ ದೊಡ್ಡ ಫ್ಲಾಟ್​ಗೆ ಒಂದು ರೂಲ್ಸ್​​ ಚಿಕ್ಕ ಫ್ಲಾಟ್​ಗೆ ಮತ್ತೊಂದು ಶುಲ್ಕ ಮಾಲೀಕರ ನಿದ್ದೆಗೆಡಿಸಿತ್ತು. ಇದೀಗ ಕೋರ್ಟ್​ ಆದೇಶದಿಂದ ಓನರ್ಸ್​ ಖುಷ್​​ ಆಗಿದ್ದಾರೆ.

ಇದನ್ನೂ ಓದಿ: ಪೋಕ್ಸೋ ಕೇಸ್​ನಲ್ಲಿ ಮೂವರೂ ನಿರ್ದೋಷಿ.. ವಕೀಲರು ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

apartments bangalore
Advertisment