/newsfirstlive-kannada/media/media_files/2025/09/12/chandra-nagamallaiah-2-2025-09-12-09-17-58.jpg)
ಅಮೆರಿಕದ ಡಲ್ಲಾಸ್‌ನ ಮೋಟೆಲ್‌ನಲ್ಲಿ (Motel in the US city of Dallas) 50 ವರ್ಷದ ಭಾರತೀಯ ಮೂಲದ ಚಂದ್ರ ನಾಗಮಲ್ಲಯ್ಯ ( Chandra Nagamallaiah) ಎಂಬ ವ್ಯಕ್ತಿಯನ್ನು ಅವರ ಕುಟುಂಬದ ಸಮ್ಮುಖದಲ್ಲೇ ಬರ್ಬರವಾಗಿ ಹ*ತ್ಯೆ ಮಾಡಲಾಗಿದೆ.
ಚಂದ್ರ ನಾಗಮಲ್ಲಯ್ಯ ಕರ್ನಾಟಕ ಮೂಲದವರು. ಡಲ್ಲಾಸ್​ನ ಮೋಟೆಲ್‌ನ ವ್ಯವಸ್ಥಾಪಕನಾಗಿ ನಾಗಮಲ್ಲಯ್ಯ ಕೆಲಸ ಮಾಡುತ್ತಿದ್ದರು. ಡಲ್ಲಾಸ್ ಪೊಲೀಸರು ನೀಡಿದ ಮಾಹಿತಿ ಪ್ರಕಾರ.. ಸೆಪ್ಟೆಂಬರ್ 10 ರಂದು ಕೃತ್ಯ ನಡೆದಿದೆ. 37 ವರ್ಷದ ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ (Yordanis Cobos-Martinez) ಎಂಬಾತ, ಚಂದ್ರ ನಾಗಮಲ್ಲಯ್ಯನ ಶಿರಚ್ಛೇದ ಮಾಡಿದ್ದಾನೆ. ಆರೋಪಿ ಮತ್ತು ಮೃತ ನಾಗಮಲ್ಲಯ್ಯ ಸಹೋದ್ಯೋಗಿಗಳಾಗಿದ್ದರು.
ಏನು ಗಲಾಟೆ..?
ಸಿಬಿಎಸ್ ನ್ಯೂಸ್ ಪ್ರಕಾರ.. ನಾಗಮಲ್ಲಯ್ಯ ಅವರು ಆರೋಪಿಗೆ ಕೆಟ್ಟು ಹೋಗಿದ್ದ ವಾಷಿಂಗ್ ಮಷಿನ್ ಬಳಸದಂತೆ ಸೂಚಿಸಿದ್ದರು. ಈ ವಿಷಯವನ್ನು ನೇರವಾಗಿ ಆರೋಪಿಗೆ ಹೇಳದೇ ಅಲ್ಲಿನ ಮಹಿಳಾ ಸಿಬ್ಬಂದಿ ಮೂಲಕ ತಿಳಿಸಿದ್ದ. ನಾಗಮಲ್ಲಯ್ಯ, ನೇರವಾಗಿ ತನಗೆ ವಿಷಯ ಹೇಳಿಲ್ಲ ಅನ್ನೋದು ಆರೋಪಿ ಕೊಬೋಸ್-ಮಾರ್ಟಿನೆಜ್ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಕ್ಕೇ ಕೋಪಿಸಿಕೊಂಡ ಆರೋಪಿ, ಮಾರಕಾಸ್ತ್ರದಿಂದ ನಾಗಮಲ್ಲಯ್ಯನ ತಲೆ ಕಡಿದಿದ್ದಾನೆ.
ಇದನ್ನೂ ಓದಿ:ಹಸುಗೂಸಿಗೆ ಪುನರ್ಜನ್ಮ.. ಆ್ಯಂಬುಲೆನ್ಸ್​ನಲ್ಲಿ ನಡೀತು ದೊಡ್ಡ ಪವಾಡ
/filters:format(webp)/newsfirstlive-kannada/media/media_files/2025/09/12/chandra-nagamallaiah-1-2025-09-12-09-15-20.jpg)
ಶಿರಚ್ಛೇದ ಮಾಡುವ ಮೊದಲು ಚಾಕುವಿನಿಂದ ಆರೋಪಿ ಅಟ್ಯಾಕ್ ಮಾಡಿದ್ದಾನೆ. ಆಗ ನಾಗಮಲ್ಲಯ್ಯ, ಕಿರುಚುತ್ತ ಹೆಂಡತಿ ಮತ್ತು ಮಗನಿದ್ದ ಕೊಠಡಿಗೆ ತೆರಳಿದ್ದಾರೆ. ಆಗ, ನಾಗಮಲ್ಲಯ್ಯರ ಹೆಂಡತಿ ತಪ್ಪಿಸಲು ಮುಂದಾಗಿದ್ದಾರೆ. ಸುಮ್ಮನಾಗದ ಆರೋಪಿ ಆಕೆಯನ್ನು ತಳ್ಳಿ ತಲೆ ಕಡಿದಿದ್ದಾನೆ ಎಂದು ವರದಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಡಲ್ಲಾಸ್ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬರುತ್ತಿದ್ದಂತೆಯೇ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದ. ಕೊನೆಗೆ ಅಧಿಕಾರಿಗಳು ಆತನ ಬಂಧಿಸಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಡಲ್ಲಾಸ್ ಕೌಂಟಿ ಜೈಲಿನಲ್ಲಿ ಇಡಲಾಗಿದೆ. ವರದಿಗಳ ಪ್ರಕಾರ, ಆರೋಪಿ ಕೊಬೋಸ್-ಮಾರ್ಟಿನೆಜ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಈ ಮೊದಲು ಫ್ಲೋರಿಡಾದಲ್ಲಿ ವಾಹನ ಕಳ್ಳತನ ಮಾಡಿ ಅರೆಸ್ಟ್ ಆಗಿದ್ದ. ಅಲ್ಲದೇ ಹೂಸ್ಟನ್‌ನಲ್ಲಿ ಮಗುವಿನ ಮೇಲೆ ಹಲ್ಲೆ ಮತ್ತು ಅಸಭ್ಯ ವರ್ತನೆ ಮಾಡಿದ್ದ ಆರೋಪ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us