ಚೀನಾಗೆ ಜಾಕ್​ಪಾಟ್! ಏಷ್ಯಾದಲ್ಲೇ ಅತೀ ದೊಡ್ಡ ಚಿನ್ನದ ನಿಕ್ಷೇಪ ಪತ್ತೆ..!

ಮಾಹಿತಿ ಪ್ರಕಾರ, ಚೀನಾ ಚಿನ್ನದ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಅದು 377 ಟನ್ ಚಿನ್ನವನ್ನು ಉತ್ಪಾದಿಸಿತು. ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದರೂ ಚೀನಾ ಇನ್ನೂ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ರಷ್ಯಾದಂತಹ ದೇಶಗಳಿಗಿಂತ ಚಿನ್ನದ ನಿಕ್ಷೇಪಗಳಲ್ಲಿ ಹಿಂದುಳಿದಿದೆ.

author-image
Ganesh Kerekuli
gold prospects chikkamagalore
Advertisment

ಚೀನಾಗೆ ಜಾಕ್​ಪಾಟ್ ಹೊಡೆದಿದೆ. ಸಮುದ್ರದ ಆಳದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದೆ. ಶಾಂಡೊಂಗ್ ಪ್ರಾಂತ್ಯದ ಲೈಝೌ (Laizhou City, Shandong Province) ಕರಾವಳಿಯಲ್ಲಿ ಬೃಹತ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. 

ಲೈಝೌನ ಚಿನ್ನದ ನಿಕ್ಷೇಪವು ಈಗ 3,900 ಟನ್‌ಗಳನ್ನೂ ಮೀರಿದೆ. ಇದು ಆ ದೇಶದಲ್ಲಿರುವ ಒಟ್ಟು ಚಿನ್ನದ ನಿಕ್ಷೇಪದಲ್ಲಿ ಸರಿಸುಮಾರು 26 ಪ್ರತಿಶತದಷ್ಟಿದೆ ಎನ್ನಲಾಗಿದೆ. ಪ್ರಸ್ತುತ  ಚೀನಾ, ಚಿನ್ನದ ನಿಕ್ಷೇಪ ಮತ್ತು ಚಿನ್ನದ ಉತ್ಪಾದನೆ ಎರಡರಲ್ಲೂ ಅಗ್ರಸ್ಥಾನದಲ್ಲಿದೆ!

ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಕೇಕ್ ಕೊಂಡೊಯ್ತಿದ್ದ ಅಪ್ಪ ಹಠಾತ್ ನಿಧನ.. ಕಣ್ಣೀರಿಟ್ಟ ಶಾಸಕ ಟೆಂಗಿನಕಾಯಿ

ಹೊಸ ಚಿನ್ನದ ನಿಕ್ಷೇಪ ಪತ್ತೆ ಸಂಬಂಧ ಮಾಹಿತಿ ನೀಡಿರುವ ಅಲ್ಲಿನ ಅಧಿಕಾರಿಗಳು, ಕಳೆದ ಕೆಲವು ವರ್ಷಗಳಿಂದ ಅಮೂಲ್ಯ ಲೋಹಗಳ ಪತ್ತೆ ಕಾರ್ಯದಲ್ಲಿ ಚೀನಾ ಸಕ್ರಿಯವಾಗಿದೆ. ಇದೀಗ ಈ ಚಿನ್ನದ ನಿಕ್ಷೇಪದ ಆವಿಷ್ಕಾರವು ಮಹತ್ವದ ಸಾಧನೆಯಾಗಿದೆ. ನಿಕ್ಷೇಪದ ನಿಖರ ಗಾತ್ರವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೂ ಹಿಂದೆ ಅಂದಾಜಿಸಿದ್ದಕ್ಕಿಂತ ದೊಡ್ಡದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. 

ಚೀನಾದಲ್ಲಿ ಎಲ್ಲೆಡೆ ಚಿನ್ನ

ಕಳೆದ ನವೆಂಬರ್‌ನಲ್ಲಿ ಚೀನಾ ಈಶಾನ್ಯ ಪ್ರಾಂತ್ಯದ ಲಿಯಾನಿಂಗ್‌ನಲ್ಲಿ 1,444.49 ಟನ್‌ಗಳಿಗಿಂತ ಹೆಚ್ಚು ಚಿನ್ನದ ನಿಕ್ಷೇಪ ಪತ್ತೆ ಹಚ್ಚಿದೆ. 1949 ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸ್ಥಾಪನೆಯಾದ ನಂತರ ಪತ್ತೆಯಾದ ಅತಿದೊಡ್ಡ ಚಿನ್ನದ ನಿಕ್ಷೇಪ ಇದಾಗಿದೆ. ನವೆಂಬರ್‌ನಲ್ಲಿ ಕ್ಸಿನ್‌ಜಿಯಾಂಗ್ ಬಳಿಯ ಉಯ್ಗುರ್ ಪ್ರದೇಶದಲ್ಲಿ 1,000 ಟನ್‌ಗಳಿಗಿಂತ ಹೆಚ್ಚು ಚಿನ್ನದ ನಿಕ್ಷೇಪಗಳನ್ನು ಕಂಡುಕೊಂಡಿದೆ. 

ಇದನ್ನೂ ಓದಿ: ವಿಶ್ವಕಪ್​​ಗೆ ತಂಡ ಪ್ರಕಟ.. ಯಾರಿಗೆ ಏನು ಜವಾಬ್ದಾರಿ..?

ನವೆಂಬರ್ 2023ರಲ್ಲಿ, ಶಾಂಡೊಂಗ್ ಪ್ರಾಂತ್ಯವು ಚೀನಾದ ಒಟ್ಟು ಚಿನ್ನದ ನಿಕ್ಷೇಪಗಳಲ್ಲಿ ಸುಮಾರು ಕಾಲು ಭಾಗವನ್ನು ಕಂಡುಹಿಡಿದಿದೆ ಎಂದು ಘೋಷಿಸಿತ್ತು. ಜಿಯೋಡಾನ್ ಪರ್ಯಾಯ ದ್ವೀಪದಲ್ಲಿ 3,500 ಟನ್‌ಗಳಿಗೂ ಹೆಚ್ಚು ಚಿನ್ನದ ನಿಕ್ಷೇಪಗಳಿವೆ.

ಅತಿ ಹೆಚ್ಚು ಚಿನ್ನ ಉತ್ಪಾದಿಸುವ ದೇಶ

ಚೀನಾ ಮಾಹಿತಿ ಪ್ರಕಾರ, ಚೀನಾ ಚಿನ್ನದ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ, ಅದು 377 ಟನ್ ಚಿನ್ನವನ್ನು ಉತ್ಪಾದಿಸಿತು. ಉತ್ಪಾದನೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದರೂ, ಚೀನಾ ಇನ್ನೂ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ರಷ್ಯಾದಂತಹ ದೇಶಗಳಿಗಿಂತ ಚಿನ್ನದ ನಿಕ್ಷೇಪಗಳಲ್ಲಿ ಹಿಂದುಳಿದಿದೆ. ಈ ಅಂತರವನ್ನು ತುಂಬಲು ಚೀನಾ ನಿರಂತರವಾಗಿ ಪ್ರಯತ್ನ ಮಾಡ್ತಿದೆ. 

ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ರಿಲೀಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gold gold deposit in Asia gold deposit
Advertisment