/newsfirstlive-kannada/media/media_files/2025/10/12/pak-vs-afg-2025-10-12-11-16-29.jpg)
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Pakistan vs Afghanistan) ನಡುವೆ ಸಂಘರ್ಷ ಶುರುವಾಗಿದೆ. ಆಫ್ಘಾನ್ ಸೇನೆಯು ಪಾಕಿಸ್ತಾನಕ್ಕೆ ನುಗ್ಗಿ ಏಳು ವಿಭಿನ್ನ ಪ್ರದೇಶಗಳ ಮೇಲೆ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದೆ. ಈ ಕಾರ್ಯಾಚರಣೆಯಲ್ಲಿ 12 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದು, ಐವರನ್ನ ಸೆರೆ ಹಿಡಿದಿದೆ.
ಆಫ್ಘಾನ್ ಸೇನೆ ನೀಡಿರುವ ಮಾಹಿತಿ ಪ್ರಕಾರ, ನಮ್ಮ ಸೇನೆಯು ಅಪಾರ ಪ್ರಮಾಣದ ಪಾಕಿಸ್ತಾನಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ ಎಂದಿದೆ. ಎರಡೂ ಸೇನೆಗಳ ನಡುವೆ ಸುಮಾರು ಮೂರುವರೆ ಗಂಟೆ ಗುಂಡಿನ ದಾಳಿಯಾಗಿದ್ದು, ಇನ್ನೂ ಕೂಡ ದಾಳಿಯಾಗುತ್ತಲೇ ಇದೆ.
ಇದನ್ನೂ ಓದಿ:ಪೊಲೀಸ್​ ತರಬೇತಿ ಕೇಂದ್ರಕ್ಕೆ ನುಗ್ಗಿದ ಸ್ಫೋಟಕ ತುಂಬಿದ ಟ್ರಕ್​.. ಜೀವ ಬಿಟ್ಟ 7 ಸಿಬ್ಬಂದಿ, 6 ಉಗ್ರರು
ಭಾರತೀಯ ಕಾಲಮಾನ ಕಳೆದ ರಾತ್ರಿ 9:23 ಕ್ಕೆ, ಅಫ್ಘಾನ್ ಸೇನೆಯು ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದೆ. 2,670 ಕಿಲೋಮೀಟರ್ ಉದ್ದದ ಗಡಿಯಲ್ಲಿ ಏಳು ಬಾರ್ಡರ್​ ಪಾಯಿಂಟ್​ನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಏಕಕಾಲದಲ್ಲಿ ದಾಳಿ ನಡೆಸಿದೆ. ಅಫ್ಘಾನ್ ಸೇನೆಯ 210 ಖಾಲಿದ್ ಬಿನ್ ವಾಲಿದ್ ಬ್ರಿಗೇಡ್ ಮತ್ತು 205 ಅಲ್ ಬದ್ರ್ ಕಾರ್ಪ್ಸ್ ಜಂಟಿಯಾಗಿ ಅಟ್ಯಾಕ್ ಮಾಡಿದೆ.
ಆಫ್ಘಾನ್ ದಾಳಿ
- ಪಕ್ತಿಯಾ-ಕುರ್ರಂ ಗಡಿ
- ಕುನಾರ್-ಬಜೌರ್ ಗಡಿ
- ಹೆಮ್ಲ್ಯಾಂಡ್-ಬರಾಮ್ಚಾ, ಬಲೂಚಿಸ್ತಾನ್ ಗಡಿ
- ನಂಗರ್ಹಾರ್-ಖೈಬರ್ ಗಡಿ
- ಸ್ಪಿನ್ ಬೋಲ್ಡಾಕ್-ಚಮನ್ ಗಡಿ
- ಖೋಸ್ತ್ ಗುಲಾಮ್ ಖಾನ್-ಉತ್ತರ ವಜಿರಿಸ್ತಾನ್ ಮಿರಾನ್ಶಾ ಗಡಿ
- ಪಕ್ತಿಕಾ-ದಕ್ಷಿಣ ಗಡಿ
ಚೆಕ್​ಪೋಸ್ಟ್ ವಶಕ್ಕೆ
ಪಾಕಿಸ್ತಾನ ನಿರ್ಮಿಸಿದ್ದ ಹಲವಾರು ಚೆಕ್‌ಪೋಸ್ಟ್‌ಗಳನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಆಫ್ಘಾನ್ ಸೇನೆಯು ಪಾಕ್ ಮೇಲೆ ದಾಳಿ ಮಾಡಲು ಫಿರಂಗಿ ಮತ್ತು ಟ್ಯಾಂಕ್‌ಗಳಂತಹ ಯುದ್ಧಾಯುಧಗಳನ್ನು ಬಳಸಿದೆ.
ಆಫ್ಘಾನ್ ಹೇಳಿದ್ದೇನು..?
ದಾಳಿ ವೇಳೆ ಆಫ್ಘಾನ್ ಸೈನಿಕರು ಡುರಾಂಡ್ ರೇಖೆಯವರೆಗೆ ಪಾಕ್-ಆಫ್ಘಾನ್ ಗಡಿಯನ್ನು ದಾಟಿದ್ದರು ಎಂದು ಆಫ್ಘಾನ್ ಸರ್ಕಾರ ಹೇಳಿದೆ. 4 ಪಾಕಿಸ್ತಾನಿ ಪೋಸ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ. 12 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ. 5 ಪಾಕಿಸ್ತಾನಿ ಸೈನಿಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಪಾಕಿಸ್ತಾನಿ ಸೇನೆ ಪ್ರತಿದಾಳಿ
ಆಫ್ಘಾನ್ ಸೇನೆಯ ದಾಳಿಗೆ ಪಾಕಿಸ್ತಾನ ಸೇನೆಯೂ ಪ್ರತೀಕಾರ ತೀರಿಸಿಕೊಂಡಿದೆ. ಆಫ್ಘಾನ್ ಸೇನೆಯ ಸುಮಾರು 6 ಚೆಕ್​ಪೋಸ್ಟ್​​ಗಳ ಪಾಕ್ ನಾಶ ಮಾಡಿದೆ. ಫಿರಂಗಿ, ಗುಂಡಿನ ದಾಳಿಯ ಚಿತ್ರಗಳನ್ನು ಪಾಕಿಸ್ತಾನದ ಮಾಧ್ಯಮಗಳು ಪ್ರಸಾರ ಮಾಡಿವೆ. ಆಫ್ಘಾನ್ ಸೇನೆಯ ದಾಳಿಯಲ್ಲಿ ಒಟ್ಟು 3 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ. 5 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ