/newsfirstlive-kannada/media/media_files/2025/10/22/tump-2025-10-22-09-52-27.jpg)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಶ್ವೇತಭವನದಲ್ಲಿ ದೀಪಾವಳಿ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಇಂದು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದೆ. ನಾವು ವ್ಯಾಪಾರದ ಬಗ್ಗೆ ಚರ್ಚಿಸಿದ್ದೇವೆ. ಅವರು ವ್ಯಾಪಾರ ಚರ್ಚೆಗಳಲ್ಲಿ ಬಹಳ ತೊಡಗಿಸಿಕೊಂಡಿದ್ದರು ಎಂದಿದ್ದಾರೆ.
ಮಂಗಳವಾರ ಟ್ರಂಪ್, ಮೋದಿ ಜೊತೆಗೆ ವ್ಯಾಪಾರ ವಿಷಯಗಳ ಮೇಲೆ ಕೇಂದ್ರೀಕರಿಸಿ ಮಾತನ್ನಾಡಿದ್ದಾರೆ. ನಾವು ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ಆದರೆ ಹೆಚ್ಚಾಗಿ ವ್ಯಾಪಾರದ ಬಗ್ಗೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದೇ ವೇಳೆ ಭವಿಷ್ಯದಲ್ಲಿ ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಖರೀದಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಮಗಳ ಮುಖ ಮೊದಲ ಬಾರಿಗೆ ಬಹಿರಂಗ; So Cute
ಪಾಕಿಸ್ತಾನ, ಭಾರತದೊಂದಿಗೆ ಯಾವುದೇ ಯುದ್ಧ ಇರುವುದಿಲ್ಲ. ಮಾತುಕತೆಯ ಸಮಯದಲ್ಲಿ ಪ್ರಾದೇಶಿಕ ಶಾಂತಿಯ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ತಪ್ಪಿಸುವಂತೆ ಹಿಂದೆ ಒತ್ತಾಯಿಸಿದ್ದೆ. ಬಳಿಕ ಪಾಕಿಸ್ತಾನದೊಂದಿಗೆ ಯುದ್ಧ ಮಾಡಬಾರದು ಎಂದು ಹೇಳಿದ್ದೇವೆ ಎಂದು ಟ್ರಂಪ್ ಮತ್ತೆ ಹೇಳಿದ್ದಾರೆ.
ಪ್ರಧಾನಿ ಮೋದಿಯವರೊಂದಿಗಿನ ತಮ್ಮ ದೀರ್ಘಕಾಲದ ಸಂಬಂಧವನ್ನು ನೆನಪಿಸಿಕೊಂಡ ಅವರು, ಮೋದಿ ಒಬ್ಬ ಮಹಾನ್ ವ್ಯಕ್ತಿ ಮತ್ತು ಸ್ನೇಹಿತ ಎಂದು ಹೊಗಳಿದ್ದಾರೆ. ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳನ್ನು ಭಾರತ ದೃಢಪಡಿಸಿಲ್ಲ. ಭಾರತದೊಂದಿಗಿನ ತಮ್ಮ ವ್ಯಾಪಾರ ನೀತಿಯನ್ನು ಅಮೆರಿಕ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮನೆಯಿಂದ ಆಚೆ ಹೋಗಲು ಯಾರೆಲ್ಲ ನಾಮಿನೇಟ್​..? ಯಾರಿಗೆ ಗೇಟ್​ಪಾಸ್​..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ