newsfirstkannada.com

IPhone 16ಗಾಗಿ ಕಾತುರ.. ಹೇಗಿದೆ ಗೊತ್ತಾ? ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

Share :

Published June 21, 2024 at 2:41pm

  IPhone 16 ಕುರಿತಾಗಿ ಹರಿದಾಡುತ್ತಿವೆ ವದಂತಿಗಳು

  ಡಿಸ್​ಪ್ಲೇ, ಕ್ಯಾಮೆರಾ, ಬ್ಯಾಟರಿ, ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ

  ಐಫೊನ್​ 16 ಎಲ್ಲಾ ಮಾದರಿಲ್ಲಿ ಆ್ಯಕ್ಷನ್​ ಬಟನ್​ ತರುವ ನಿರೀಕ್ಷೆ

ಆ್ಯಪಲ್​ ಪ್ರಿಯರು ಮುಂಬರುವ IPhone 16 ಸರಣಿಗಾಗಿ ಕಾಯುತ್ತಿದ್ದಾರೆ. ಮುಂದಿನ ವರ್ಷ ಆ್ಯಪಲ್​ ಹೊಸ ಐಫೋನನ್ನು ಪರಿಚಯಿಸುವ ನಿರೀಕ್ಷೆ ಇದೆ. ಆದರೆ ಅದಕ್ಕೂ ಮುನ್ನವೇ ಐಫೊನ್​ 16 ಕುರಿತಾದ ಕೆಲವು ವದಂತಿಗಳು ಹರಿದಾಡುತ್ತಿವೆ. ಅದರಲ್ಲಿ ನೂತನ ಐಫೋನ್​ 16 ಸರಣಿಯ ಡಿಸ್​ಪ್ಲೇ, ಕ್ಯಾಮೆರಾ ಮುಂತಾದ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಐಫೊನ್​ 16 ಪ್ರೊ 6.3 ಇಂಚಿನ ಡಿಸ್​ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಐಫೋನ್​ ಪ್ರೊ ಮ್ಯಾಕ್ಸ್​​ 6.9 ಇಂಚಿನ ಡಿಸ್​ಪ್ಲೇಯನ್ನು ಹೊಂದಿದೆ. ನೂತನ ಸಾಧನ ಹಲವು ಅಪ್​ಗ್ರೇಡ್​ಗಳಲ್ಲಿ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಚಾರ್ಜ್​ ಹಾಕಿದ್ದ ಇ-ಸ್ಕೂಟರ್​ ಸ್ಫೋಟ.. 18 ವರ್ಷದ ಯುವತಿ ಸಾವು, ನಾಲ್ವರು ಗಂಭೀರ

ಇನ್ನು ಐಫೊನ್​ 16 ಮತ್ತು 16 ಪ್ಲಸ್​​ ಕ್ರಮವಾಗಿ 6.1 ಇಂಚಿನ ಮತ್ತು 6.7 ಇಂಚಿನ ಡಿಸ್​ಪ್ಲೇ ಹೊಂದಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಹೊಸ ಸಾಧನಗಳು OLED ಡಿಸ್​ಪ್ಲೇ ಅಳವಡಿಸಿಕೊಂಡಿರುವ ವದಂತಿಗಳಿವೆ.

ಕ್ಯಾಮೆರಾ

ಐಫೋನ್​ ಸರಣಿ ಈ ಬಾರಿ ಗ್ರಾಹಕರನ್ನು ಸೆಳೆಯಲು ಕ್ಯಾಮೆರಾದಲ್ಲಿ ಬದಲಾವಣೆ ತರಲಿದೆ ಎನ್ನಲಾಗುತ್ತಿದೆ. ಪ್ರೊ ಮಾದರಿಗಳಲ್ಲಿ 48 ಮೆಗಾಫಿಕ್ಸೆಲ್​​ ಕ್ಯಾಮೆರಾ ಬರಲಿದೆ. ಕಡಿಮೆ ಬೆಳಕಿನಲ್ಲೂ ಅದ್ಭುತವಾಗಿ ಫೋಟೋ ಕ್ಲಿಕ್ಕಿಸುವಂತೆ ತಯಾರಿಸಲಾಗಿದೆ. ಜೊತೆಗೆ 48 ಮೆಗಾಪಿಕ್ಸೆಲ್​ ಅಲ್ಟ್ರಾವೈಡ್​​ ಕ್ಯಾಮೆರಾವನ್ನು ಸಹ ಒಳಗೊಂಡು ಬರಲಿದೆ ಎಂಬ ಮಾತಿದೆ.

ಇದನ್ನೂ ಓದಿ: ಐಸ್ ಕ್ರೀಂ​ ಕೊಡಿಸುವ ನೆಪದಲ್ಲಿ ಬಾಲಕನ ಕಿಡ್ನಾಪ್​.. 10 ಲಕ್ಷಕ್ಕೆ ಬೇಡಿಕೆ.. ಸಿಲಿಕಾನ್​ ಸಿಟಿ ಪೊಲೀಸರಿಗೆ ಆರೋಪಿ ಸಿಕ್ಕಿದ್ದೇಗೆ?

ಇನ್ನು ಐಫೋನ್​ 15 ಪ್ರೋನಲ್ಲಿ ಪರಿಚಯಿಸಲಾದ ಆ್ಯಕ್ಷನ್​ ಬಟನ್​ ಎಲ್ಲಾ ಐಫೊನ್​ 16 ಮಾದರಿಯಲ್ಲಿ ತರುವ ನಿರೀಕ್ಷೆಯಿದೆ. ಮ್ಯೂಟ್​ ಸ್ವಿಚ್​ ಅನ್ನು ಬದಲಿಸುವ ನಿರೀಕ್ಷೆ ಇದೆ. ಇದಲ್ಲದೆ ಎ18 ಮತ್ತು ಎ17 ಪ್ರೊ ಚಿಪ್​​ನಿಂದ ಚಾಲಿತವಾಗಲಿದೆ ಎನ್ನಲಾಗುತ್ತಿದೆ. 8GB RAM ಮತ್ತು 256GBಯವರೆಗೆ ಸಂಗ್ರಹಣೆಯೊಂದಿಗೆ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಘಾಟ್​ ರಸ್ತೆಯಲ್ಲಿ ಉರುಳಿ ಬಿದ್ದ ಸರ್ಕಾರಿ ಬಸ್​.. ಚಾಲಕ, ಕಂಡಕ್ಟರ್ ಸೇರಿ​ ನಾಲ್ವರು ಸಾವು

ಐಫೋನ್​ 16 ಸರಣಿ ದೊಡ್ಡ ಬ್ಯಾಟರಿಯನ್ನು ಒಳಗೊಂಡು ಬರಲಿದೆಯಂತೆ. ಇದು 30 ಗಂಟೆಗಳವರೆಗೆ ಕಾರ್ಯನಿರ್ವಹಿಸಲಿದೆ ಎಂಬ ವದಂತಿಗಳಿವೆ. ಇನ್ನು ಬೆಲೆಯ ಬಗ್ಗೆ ಐಫೋನ್​ 15 ಸರಣಿ 79,900 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಸಿಗುತ್ತಿದೆ. ಆದರೆ ಐಫೋನ್​ ಪ್ರೊ ಮಾದರಿ $1000 ಮತ್ತು $1100 ಬೆಲೆಯಲ್ಲಿ ಸಿಗಲಿದೆ ಎನ್ನಲಾಗುತ್ತಿದೆ.

ಸದ್ಯ ಬಹುತೇಕ ಜನರು ಐಫೋನ್​ 16 ಸರಣಿಗಾಗಿ ಕಾಯುತ್ತಿದ್ದಾರೆ. ಆದರೆ ನೂತನ ಸಾಧನವು ಹೇಗಿರಲಿದೆ. ಯಾವೆಲ್ಲಾ ವಿಶೇಷತೆ ಹೊಂದಿದೆ ಎಂದು ಬಿಡುಗಡೆಯ ನಂತರವಷ್ಟೇ ತಿಳಿದುಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPhone 16ಗಾಗಿ ಕಾತುರ.. ಹೇಗಿದೆ ಗೊತ್ತಾ? ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/06/Iphone-16.jpg

Load More