/newsfirstlive-kannada/media/post_attachments/wp-content/uploads/2024/10/bharath-kumar.jpg)
ಫ್ಲಿಪ್​ಕಾರ್ಟ್​ ಡೆಲಿವರಿ ಬಾಯನ್ನು ಭೀಕರವಾಗಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆದ ಘಟನೆ ಲಕ್ನೋದಲ್ಲಿ ನಡೆದಿದೆ. ಐಫೋನ್​ ಆರ್ಡರ್​ ಮಾಡಿದ ಗ್ರಾಹಕ ಮತ್ತು ಆತನ ಸ್ನೇಹಿತ ಡೆಲಿವರಿ ಬಾಯನ್ನು ಕೊಂದಿದ್ದು, ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ನೋದ ಚಿನ್​ಹಾಟ್​ ಸ್ಟೇಷನ್​​ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ. ಭರತ್​ ಕುಮಾರ್ (30) ಎಂಬ ದುರ್ದೈವಿ ಕೊಲೆಯಾಗಿದ್ದಾನೆ. ಡೆಲಿವರಿ ಬಾಯ್​ ಮಂಗಳವಾರದಂದು ಐಫೋನ್​ ಡೆಲಿವರಿ ಮಾಡುವಾಗ ಹಂತಕರ ಕೈಯಿಂದ ಹತ್ಯೆಯಾಗಿದ್ದಾನೆ.
ಡೆಲಿವರಿ ಬಾಯ್​ ಮರ್ಡರ್​
ಗ್ರಾಹಕ ಆನ್​ಲೈನ್​ನಲ್ಲಿ ಕ್ಯಾಶ್​ ಆನ್​ ಡೆಲಿವರಿ ಆಯ್ಕೆ ಮೂಲಕ ಐಫೋನ್​ ಆರ್ಡರ್​ ಮಾಡಿದ್ದು, ಡೆಲಿವರಿಗೆ ಬಂದಾಗ ಭರತ್​ ಕುಮಾರ್​​ನನ್ನು ಸ್ನೇಹಿತನ ಜೊತೆಗೂಡಿ ಹತ್ಯೆ ಮಾಡಿದ್ದಾನೆ. ಬಳಿಕ ಗೋಣಿ ಚೀಲದಲ್ಲಿ ತುಂಬಿಸಿ ಇಂದಿರಾ ನಗರದ ಕಾಲುವೆಗೆ ಎಸೆದಿದ್ದಾರೆ.
ಸದ್ಯ ಪೊಲೀಸರು ಓರ್ವ ಶಂಕಿತ ಆರೋಪಿ ಗಜಾನನ್ ಎಂಬಾತನನ್ನು ಬಂಧಿಸಿದ್ದಾರೆ. ಡೆಲಿವರಿ ಬಾಯ್​ ಭರತ್​ ಮೃತದೇಹವನ್ನು ಪೊಲೀಸರು ಕಾಲುವೆಯಲ್ಲಿ ಹುಡುಕಾಡುತ್ತಿದ್ದಾರೆ.
ಇದನ್ನೂ ಓದಿ: ‘Horn OK Please’ ಎಂದು ಲಾರಿ, ಟ್ರಕ್ ಮೇಲೆ ಯಾಕೆ ಬರೆದಿರುತ್ತೆ.. ಇದರ ಇತಿಹಾಸ ಎಲ್ಲಿಂದ ಆರಂಭ?
ಕತ್ತು ಹಿಸುಕಿ ಕೊಲೆ
ಚಿನ್ಹತ್​ ಗಜಾನನ್​ ಕ್ಯಾಶ್​ ಆನ್​ ಡೆಲಿವರಿ ಆಯ್ಕೆ ಮೂಲಕ 1.5 ಲಕ್ಷದ ಐಫೋನ್​ ಆರ್ಡರ್​​ ಮಾಡಿದ್ದಾನೆ. ಸೆಪ್ಟೆಂಬರ್​ 23ರಂದು ಭರತ್​ ಕುಮಾರ್​ ಆತನಿಗೆ ಡೆಲಿವರಿ ಮಾಡಲು ಹೋಗಿದ್ದನು. ಆದರೆ ಈ ವೇಳೆ ಗಜಾನನ್​ ಮತ್ತು ಆತನ ಸ್ನೇಹಿತ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ನಾಪತ್ತೆಯಾದ ತಮ್ಮ
ಭರತ್​ ಮನೆಗೆ ಹಿಂತಿರುಗದೇ ಇದ್ದಾಗ ಆತನ ಸಹೋದರ ಚಿನ್ಹಾತ್​ ಪೊಲೀಸ್​​ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ದೂರಿನ ಬಳಿಕ ಪೊಲೀಸರು ಭರತ್​ನನ್ನು ಹುಡುಕಲು ಮುಂದಾಗಿದ್ದು, ಸಿಸಿಟಿವಿ ದೃಶ್ಯಾವಳಿ ಮೂಲಕ ಪರಿಶೀಲಿಸಿದ್ದಾರೆ. ಈ ವೇಳೆ ಅನುಮಾನದ ಮೇರೆಗೆ ಶಂಕಿತ ಆರೋಪಿಯನ್ನು ಬಂಧಿಸಿದಾಗ ನಿಜಾಂಶ ಗೊತ್ತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ