Advertisment

ಐಫೋನ್​​ ಬಳಕೆದಾರರೇ ಎಚ್ಚರ! ಈ ನಾಲ್ಕು ಚಿಹ್ನೆಗಳನ್ನು ತಪ್ಪಾಗಿ ಟೈಪ್​ ಮಾಡಿದ್ರೆ ಕ್ರ್ಯಾಶ್​ ಆಗುತ್ತೆ, ಹುಷಾರ್​

author-image
AS Harshith
Updated On
iPhone 16 ಬಗ್ಗೆ ಬಿಗ್‌ ಅಪ್ಡೇಟ್​​; ರಿಲೀಸ್​ ಯಾವಾಗ? ರೇಟ್​ ಎಷ್ಟು? ಸ್ಪೆಷಲ್​ ಫೀಚರ್ಸ್​ ಏನು?
Advertisment
  • ಐಫೋನ್​​ ಅಥವಾ ಐಪ್ಯಾಡ್​​ ಬಳಸುತ್ತಿದ್ದೀರಾ?
  • ಐಫೋನ್​ ಬಳಕೆದಾರರಿಗೆ ಎಚ್ಚರಿಕೆ ರವಾನಿಸಿದ ತಜ್ಞರು
  • ಇದು ಪ್ರಮುಖ ದೋಷವೇ.. ಸೈಬರ್ ಸೆಕ್ಯುರಿಟಿ ತಜ್ಞರು ಹೇಳೋದೇನು?

ಐಫೋನ್ ಬಳಸುತ್ತಿದ್ದೀರಾ? ಹಾಗಿದ್ರೆ ಇಲ್ಲೊಂದು ಎಚ್ಚರಿಕೆ ಸುದ್ದಿ ಇದೆ. ಐಫೋನ್​ ಬಳಕೆದಾರರು ಈ 4 ಚಿಹ್ನೆಗಳನ್ನು ತಪ್ಪಾಗಿ ಟೈಪ್ ಮಾಡಬೇಡಿ ಎಂದು ಎಚ್ಚರಿಕೆ ನುಡಿಯೊಂದು ಹರಿದಾಡುತ್ತಿದೆ. ಜನಪ್ರಿಯ ಕುಪರ್ಟಿನೋ ಮೂಲಕದ ಆ್ಯಪಲ್​ ಕಂಪನಿ ಐಫೋನ್​​ನಲ್ಲಿ ಇದೀಗ ಪ್ರಮುಖ ದೋಷವನ್ನು ಎದುರಿಸುತ್ತಿದೆ ಎಂದು ಹೇಳಿದೆ.

Advertisment

ಐಫೋನ್​ ಮತ್ತು ಐಪ್ಯಾಡ್​​ನಲ್ಲಿ`'‘’’::' ಈ ಚಿಹ್ನೆಗಳನ್ನು ಬಳಸದಂತೆ ಅನೇಕರು ಸೂಚಿಸಿದ್ದಾರೆ. ಇದರಿಂದ ಸಮಸ್ಯೆ ಎದುರಿಸಬೇಕಾದಿತು ಎಂದು ತಜ್ಞರು ಹೇಳುತ್ತಿದ್ದಾರೆ. ಒಂದು ವೇಳೆ ಟೈಪ್ ಮಾಡಿದರೆ ಪರದೆಯು ಬ್ಲ್ಯಾಕೌಟ್ ಆಗುತ್ತದೆ. ಇಂಟರ್ಫೇಸ್ ಕ್ರ್ಯಾಶ್ ಆಗುತ್ತದೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಕಂಡುಹಿಡಿದಿದ್ದಾರೆ.

publive-image

ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್​ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!

ಇದು ಕೇವಲ ದೋಷವಾಗಿದೆ ಮತ್ತು ಭದ್ರತಾ ಸಮಸ್ಯೆಯಲ್ಲ ಎಂದು ಸೈಬರ್ ಭದ್ರತಾ ತಜ್ಞರು ಹೇಳಿದ್ದಾರೆ. ಐಒಎಸ್​​ ಭದ್ರತಾ ಸಂಶೋಧಕ ರಯಾನ್​​ ಸ್ಟೋರ್ಟ್ಸ್​​ ಇದು ಭದ್ರತಾ ದೋಷವಲ್ಲ ಎಂದಿದ್ದಾರೆ. ಆದರೆ ಆ್ಯಪಲ್​ ಈ ದೋಷದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Advertisment

publive-image

ಇದನ್ನೂ ಓದಿ: ಲೀಕ್​ ಆಯ್ತು iPhone SE4 ಮಾಹಿತಿ.. ಬೆಲೆ, ವಿಶೇಷತೆ, ಬಿಡುಗಡೆ ದಿನಾಂಕ ಬಹಿರಂಗ

ಆ್ಯಪಲ್​​ ಕಂಪನಿಯು ಹೊಸ ನವೀಕರಣ ದೋಷವನ್ನು ಸರಿಪಡಿಸುತ್ತಾ ಬಂದಿದೆ. ಆದರೆ ಸದ್ಯ ಕಾಣಿಸಿಕೊಂಡ ದೋಷದ ಬಗ್ಗೆ ಏನನ್ನು ಹೇಳಿಕೊಂಡಿಲ್ಲ. ಅಂದಾಜಿನ ಮೇರೆಗೆ ಸದ್ಯದಲ್ಲೇ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment