newsfirstkannada.com

ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್​ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!

Share :

Published August 22, 2024 at 2:10pm

    ಬಾಹ್ಯಕಾಶದಲ್ಲಿ ಸಿಲುಕಿಕೊಂಡು 2 ತಿಂಗಳುಗಳೇ ಕಳೆದಿವೆ

    ಗಾಳಿ ಮತ್ತು ಸ್ಟಾರ್​ಲೈನರ್​ ಘರ್ಷಣೆಯಿಂದ ಸುಟ್ಟು ಹೋಗುವ ಲಕ್ಷಣವಿದೆ

    ನಾಸಾ ಯೋಜನೆಯಂತೆ 2025ರ ಫೆಬ್ರವರಿ ಮತ್ತು ಮಾರ್ಚ್​ ಹಿಂತಿರುಗಲಿದ್ದಾರೆ

ಭಾರತ ಮೂಲದ ಅಮೆರಿಕನ್​​ ಗಗನಯಾತ್ರಿ ಸುನೀತಾ ವಿಲಿಯಮ್ಸ್​​ ಮತ್ತು ಮತ್ತೋರ್ವ ಗಗನಯಾತ್ರಿ ಬುಚ್​ ವಿಲ್ಮೋರ್​​ ಬಾಹ್ಯಕಾಶದಲ್ಲಿ ಸಿಲುಕಿಕೊಂಡು 2 ತಿಂಗಳುಗಳೇ ಕಳೆದಿವೆ. ಆದರೀಗ 60ಕ್ಕೂ ಹೆಚ್ಚು ಹೆಚ್ಚು ದಿನಗಳನ್ನು ಕಳೆಯುತ್ತಿರುವ ಗಗನಯಾತ್ರಿಗಳ ಬಗ್ಗೆ ಅಮೆರಿಕಾದ ಮಾಜಿ ಮಿಲಿಟರಿ ಕಮಾಂಡರ್​​ ರೂಡಿ ರಿಢಾಲ್ಫಿ ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ.

ಬಾಹ್ಯಕಾಶ ನೌಕೆಯಿಂದ ಹಿಂತಿರುಗಿಸಲು ಪ್ರಯತ್ನಿಸುವಾಗ ಘರ್ಷಣೆಯಿಂದ ಉಂಟಾಗುವ ಶಾಖದಿಂದ ಗಗನಯಾತ್ರಿಗಳು ಸಾಯಬಹುದು. ಈ ವೇಳೆ 96 ಗಂಟೆಗಳ ಆಮ್ಲಜನಕ ಪೂರೈಕೆಯನ್ನು ಹೊಂದಿರುತ್ತಾರೆ ಎಂದು ರೂಡಿ ರಿಢಾಲ್ಫಿ ಹೇಳಿದ್ದಾರೆ.

ಬೋಯಿಂಗ್​ ಸ್ಟಾರ್​ಲೈನರನ್ನು ಸುರಕ್ಷಿತವಾಗಿ ಭೂಮಿಗೆ ತರಬೇಕಾಗಿದೆ. ತಾಂತ್ರಿಕವಾಗಿ ಮತ್ತು ಸರಿಯಾದ ಕೋನದಲ್ಲಿ ತರಬೇಕು. ಆದರೆ ತರುವಾಗ ಭಯಾನಕ ಸವಾಲುಗಳು ಎದುರಾಗಬಹುದು ಎಂದಿದ್ದಾರೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಇಲಿಗಳ ಕಾಟ! ದಾಖಲೆಗಳನ್ನು ತಿಂದು ತೇಗಿದ ಮೂಷಿಕ.. ಬೆಕ್ಕುಗಳ ಮೊರೆ ಹೋದ ಸರ್ಕಾರ

ಭಯಾನಕ ಸನ್ನಿವೇಶವೆಂದರೆ ಸ್ವಾರ್​​ ಲೈನರ್​​ ಬಾಹ್ಯಕಾಶ ನೌಕೆಯು ಬೌನ್ಸ್​ ಆಗಬಹುದು. ಕಾರಣ ಆವಿಯಾಗುವ ಸಾಧ್ಯತೆಯೂ ಇದೆ. ಎರಡು ಸಂದರ್ಭದಲ್ಲಿ ಅವರು ಕಡಿದಾದ ವಾತಾವರಣ ಹೊಂದಿರುತ್ತಾರೆ. ಗಾಳಿ ಮತ್ತು ಸ್ಟಾರ್​ಲೈನರ್​ ಘರ್ಷಣೆಯಿಂದ ಗಗನಯಾತ್ರಿಗಳು ಸುಟ್ಟು ಹೋಗುವ ಲಕ್ಷಣವಿದೆ ಎಂದಿದ್ದಾರೆ.

ಇದನ್ನೂ ಓದಿ: ವಿಶ್ವದ ಶ್ರೀಮಂತ ದೇವಾಲಯಕ್ಕೆ ಬಿಗ್ ಶಾಕ್.. ತಿರುಪತಿಗೆ ತೆರಳುವ ಭಕ್ತರಿಗೆ TTDಯಿಂದ ಮಹತ್ವದ ಸೂಚನೆ

ಕೇವಲ 10 ದಿನಗಳ ಬಾಹ್ಯಕಾಶ ಯಾತ್ರೆಗೆ ತೆರಳಿದ್ದ ಇಬ್ಬರು ಗಗನಯಾತ್ರಿಗಳು ಸದ್ಯ ಅಲ್ಲೇ ಉಳಿದುಕೊಂಡಿದ್ದಾರೆ. ತಾಂತ್ರಿಕ ದೋಷದಿಂದ 2 ತಿಂಗಳಿಗೂ ಅಧಿಕ ದಿನ ಕಳೆಯುತ್ತಾ ಬಂದಿದ್ದಾರೆ. ಸದ್ಯ ಅಲ್ಲಿಂದ ಮರಳಳು ಸ್ಪೇಸ್​​ಎಕ್ಸ್​ನ ಡ್ರ್ಯಾಗನ್​​​​​ ಕ್ಯಾಪ್ಸುಲ್​​ನ ಸಹಾಯ ಪಡೆಯಲು ನಾಸಾ ಯೋಚಿಸಿದೆ. ಅಚ್ಚರಿ ಸಂಗತಿ ಎಂದರೆ ಈ ಯೋಜನೆ ಮೂಲಕ ಅವರು ಹಿಂತಿರುಗುವುದಾದರೆ 2025ರ ಫೆಬ್ರವರಿ ಮತ್ತು ಮಾರ್ಚ್​ ತಿಂಗಳಿನಲ್ಲಿ ಭೂಮಿಗೆ ಮರಳಲಿದ್ದಾರೆ.

ಇದನ್ನೂ ಓದಿ: ಇಂದೇ ದೆಹಲಿಗೆ ಹೋಗಲಿರುವ ಸಿಎಂ ಸಿದ್ದರಾಮಯ್ಯ.. ಹೈಕಮಾಂಡ್​​ ಜೊತೆ ಮಹತ್ವದ ಚರ್ಚೆ

ಬಾಹ್ಯಕಾಶದ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಇಷ್ಟು ದಿನ ಇರುವುದು ಉತ್ತಮವಲ್ಲ. ಸದ್ಯ ಇಬ್ಬರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಸ್ಟಾರ್​ಲೈನರ್​ನ ಕೆಲಸ ನಡೆಯುತ್ತಿದೆ. ಎಲ್ಲರೂ ಅವರ ಹಿಂತಿರುವಿಕೆಗಾಗಿ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್​ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!

https://newsfirstlive.com/wp-content/uploads/2024/08/Sunitha-williams.jpg

Load More