newsfirstkannada.com

ಪಂದ್ಯದ ಕೊನೆಯಲ್ಲಿ ಬ್ಯಾಟಿಂಗ್​ಗೆ ಇಳಿಯುತ್ತಿರೋ MS ಧೋನಿ.. ಇದರ ಹಿಂದಿನ ಮಹತ್ವದ ಕಾರಣ?

Share :

Published May 8, 2024 at 1:31pm

    ಕ್ರಿಕೆಟ್​ನಿಂದ ದೂರ ಉಳಿಯಬೇಕೆಂದು ಸೂಚನೆ ನೀಡಿದ್ದು ಯಾರು?

    ಪಂಜಾಬ್ ಕಿಂಗ್ಸ್ ವಿರುದ್ಧ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಮಹಿ

    ಈ ಸೀಸನ್ ಬಳಿಕ ಎಂ.ಎಸ್ ಧೋನಿ ಗುಡ್​ಬಾಯ್ ಹೇಳುತ್ತಾರಾ.?

ಐಪಿಎಲ್‌ ಆರಂಭದಿಂದಲೂ ಮಹಿ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯುತ್ತಿಲ್ಲ. ಕೊನೆ 2 ಓವರ್‌ ಮಾತ್ರ ಕಾಣಿಸಿಕೊಳ್ಳುವ ಮಾಹಿಗೆ ಇದೇ ಕೊನೆ ಐಪಿಎಲ್ ಆಗುತ್ತಾ ಅನ್ನೋ ಪ್ರಶ್ನೆ ಫ್ಯಾನ್ಸ್​ಗೆ ಕಾಡ್ತಿದೆ. ಆದ್ರೀಗ ಇದಕ್ಕೆ ಉತ್ತರ ಸಿಕ್ಕಿದೆ. ಈ ಉತ್ತರ ತಿಳಿದ್ರೆ, ಧೋನಿಗೆ ನೀವೊಂದು ಸೆಲ್ಯೂಟ್ ಹೊಡೆಯೋದು ಪಕ್ಕಾ.

ಎಮ್​.ಎಸ್.ಧೋನಿ.. ಕ್ರೇಜ್​ ಕಾ ಬಾಪ್​.. ದಿ ಗ್ರೇಟ್ ಮ್ಯಾಚ್ ಫಿನಿಷರ್.. ಧೋನಿ ರೌದ್ರವತಾರದ ಬ್ಯಾಟಿಂಗ್ ನೋಡಬೇಕು ಅನ್ನೋದು ಬಹುತೇಕರ ಹೆಬ್ಬಯಕೆ. ಆದ್ರೆ, ಧೋನಿ, ಕೊನೆ 2 ಓವರ್​ಗಳಲ್ಲೇ ಬ್ಯಾಟಿಂಗ್ ನಡೆಸ್ತಿರುವುದು ಹಲವರಿಗೆ ಭಾರೀ ನಿರಾಸೆ ಮೂಡಿಸಿದೆ. ಧೋನಿಯ ಈ ನಡೆ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದ್ರೆ, ಕ್ರಿಕೆಟ್​ ಪಂಡಿತರ ಪಾಲಿಗೆ ಟೀಕಾಸ್ತ್ರವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ‌ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ

ಕೊನೆ ಕ್ಷಣದಲ್ಲಿ ಬ್ಯಾಟಿಂಗ್​ಗೆ ಇಳಿಯುತ್ತಿರುವುದೇಕೆ?

ಧೋನಿ ಕಡೆಕ್ಷಣದಲ್ಲಿ ಬ್ಯಾಟಿಂಗ್​ ಇಳಿಯುತ್ತಿರುವ ಬಗ್ಗೆ ನಾನಾ ಚರ್ಚೆಗಳು ನಡೀತಿವೆ. ಪರ ವಿರೋಧದ ಮಾತುಗಳು ಕ್ರಿಕೆಟ್​ ವಲಯದಲ್ಲಿ ಕೇಳಿ ಬರುತ್ತಿವೆ. ಆದ್ರೆ, ಮಿಸ್ಟರ್​ ಕೂಲ್ ಮಾಹಿ, ಕೊನೆ ಕ್ಷಣದಲ್ಲಿ ಬ್ಯಾಟಿಂಗ್​ಗೆ ಇಳಿಯುತ್ತಿರುವ ಹಿಂದೆ ಮಹತ್ವದ ಕಾರಣ ಇದೆ. ಆ ರೀಸನ್ ಏನು ಅನ್ನೋದು ಈಗ ಹೊರಬಿದ್ದಿದೆ.

ಧೋನಿ ಕಡೆ ಕ್ಷಣದ ಬ್ಯಾಟಿಂಗ್​​ಗೆ ಕಾರಣವೇ ಇಂಜುರಿ..!

ಧೋನಿ, ಮತ್ತೆ ಲೋವರ್ ಆರ್ಡರ್​ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಧೋನಿ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗುತ್ತಿಲ್ಲ. ರನ್‌ ಓಡಲಾಗುತ್ತಿಲ್ಲ. ನೆಟ್ಸ್‌ನಲ್ಲಿ ಅಭ್ಯಾಸದ ವೇಳೆ ಬಿಗ್ ಶಾಟ್ಸ್​ ಫ್ರಾಕ್ಟೀಸ್​ ಮಾಡ್ತಿದ್ದಾರೆ. ಅಷ್ಟೇ ಅಲ್ಲ. 20 ಓವರ್‌ ಮೈದಾನದಲ್ಲಿ ನಿಂತು ಫೀಲ್ಡಿಂಗ್‌ ಮಾಡ್ತಿರುವ ಮಾಹಿ, ಚೆನ್ನೈ ತಂಡದ ಬ್ಯಾಟಿಂಗ್​ ವೇಳೆ ವಿರಾಮ ಪಡೀತ್ತಿದ್ದಾರೆ.

ಡಾಕ್ಟರ್​ ಮಾತನ್ನೇ ಲೆಕ್ಕಿಸದೆ ಕಣಕ್ಕಿಳಿಯುತ್ತಿದ್ದಾರೆ ಮಾಹಿ..!

ಗಂಭೀರ ಇಂಜುರಿಯಿಂದ ಬಳಲುತ್ತಿರುವ ಮಾಹಿ ಕ್ರಿಕೆಟ್ ಆಡುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಕ್ರಿಕೆಟ್​ನಿಂದ ದೂರ ಉಳಿಯಲು ಡಾಕ್ಟರ್​ ಸೂಚನೆ ನೀಡಿದ್ದಾರೆ. ಆದ್ರೆ, ಡಾಕ್ಟರ್​ ಮಾತನ್ನೇ ಲೆಕ್ಕಿಸದ ಮಾಹಿ, ಕಣಕ್ಕಿಳಿಯುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಔಷದಿ ಪಡೆಯುತ್ತಿರುವ ಮಾಹಿ, ನೋವಿನ ನಡುವೆಯೇ 20 ಓವರ್​ ಫೀಲ್ಡಿಂಗ್ ನಡೆಸ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಟೀಮ್ ಹಾಗೂ ಫ್ಯಾನ್ಸ್​.

ಇದನ್ನೂ ಓದಿ: ನೇಮೋತ್ಸವ ಹರಿಕೆ ತೀರಿಸಿದ ಕೆಜಿಎಫ್​ ಖ್ಯಾತಿಯ ಬ್ಯೂಟಿ ಶ್ರೀನಿಧಿ ಶೆಟ್ಟಿ.. ಎಲ್ಲಿ?

ಧೋನಿ ಅಂಗಳಕ್ಕಿಳಿಯುತ್ತಿರುವುದು ತಂಡಕ್ಕಾಗಿಯೇ ಆಗಿದೆ. ಯಾಕಂದ್ರೆ, ಇಂಜುರಿಯಿಂದ ವಿಕೆಟ್ ಕೀಪರ್​ ಡಿವೋನ್​ ಕಾನ್ವೆ ಅಲಭ್ಯರಾಗಿದ್ದಾರೆ. ಯುವ ಆಟಗಾರ ಸಮೀರ್ ರಿಜ್ವಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆಲ್ಲ ಮಿಗಿಲಾಗಿ ಧೋನಿ ಅಲಭ್ಯತೆ ಆಟಗಾರರ ಆತ್ಮವಿಶ್ವಾಸ ಕುಗ್ಗಿಸುತ್ತೆ. ಇವೆಲ್ಲವನ್ನ ಮನಗಂಡೇ ಮಾಹಿ ಅಂಗಳಕ್ಕಿಳಿಯುತ್ತಿದ್ದಾರೆ..

9 ಕ್ರಮಾಂಕದಲ್ಲಿ ಬ್ಯಾಟಿಂಗ್.. ರನ್​ ಓಡಲು ಹಿಂದೇಟು..!

ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಬ್ಯಾಟರ್ಸ್​ ಪೆವಿಲಿಯನ್ ಪರೇಡ್ ನಡೆಸಿದ್ರು. 12.5 ಓವರ್​​ಗಳಲ್ಲೇ 101 ರನ್​ಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಮಾಹಿ ಬ್ಯಾಟಿಂಗ್​ಗೆ ಬರ್ತಾರೆ ಅಂತಾನೇ ಊಹಿಸಲಾಗಿತ್ತು. ಆದ್ರೆ, ಬದಲಾಗಿ ಸ್ಯಾಟ್ನರ್, ಶಾರ್ದೂಲ್ ಕಣಕ್ಕಿಳಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮಾಹಿ ಅಚ್ಚರಿ ಮೂಡಿಸಿದ್ರು.

ಇದಿಷ್ಟೇ ಅಲ್ಲ, ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಕೊನೆ ಓವರ್​​ನಲ್ಲಿ ರನ್ ಕದಿಯಲಿ ಧೋನಿ ನಿರಾಕರಿಸಿದ್ದರು. ಹೀಗಾಗಿ ಡ್ಯಾರಿಲ್ ಮಿಚೆಲ್, ಸ್ಟ್ರೈಕರ್ ತುದಿಯಿಂದ ಮತ್ತೆ ನಾನ್​ ಸ್ಟ್ರೈಕರ್ ತುದಿಗೆ ವಾಪಸ್ ಬರಬೇಕಾಯ್ತು. ಇದು ಕೂಡ ಪರ, ವಿರೋಧ ಚರ್ಚೆಗೂ ಕಾರಣವಾಯ್ತು.

ಇದನ್ನೂ ಓದಿ: ರಾತ್ರಿ ಸುರಿದ ಭಾರೀ ಮಳೆಗೆ ಚಲಿಸುತ್ತಿದ್ದ ಬೈಕ್​ ಮೇಲೆ ಬಿದ್ದ ಮರ.. ಓರ್ವ ಸಾವು, ಮತ್ತೊಬ್ಬ ಗಂಭೀರ

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಪಂದ್ಯದಲ್ಲಿ ಕಾಲಿಗೆ ಐಸ್​ಪ್ಯಾಕ್​​ ಕಟ್ಟಿಯೇ ಬ್ಯಾಟಿಂಗ್ ನಡೆಸಿದ್ದ ಮಾಹಿ, ಕುಂಟುತ್ತಲೇ ಆಟಗಾರರೊಂದಿಗೆ ಮಾತುಕತೆ ನಡೆಸಿದ್ರು. ಈ ವೇಳೆಯೇ ಧೋನಿಗೆ ಇಂಜುರಿ ನೋವು ಕಾಡ್ತಿದೆ ಅನ್ನೋ ಸುಳಿವು ಸಿಕ್ಕಿತ್ತು. ಆದ್ರೆ, ಆ ಅಸಲಿ ಸತ್ಯ ಈಗ ಹೊರಬಿದ್ದಿದೆ.

ಲೆಜೆಂಡ್​ ಧೋನಿ ಪಾಲಿಗೆ ಇದೇ ಕೊನೇ ಐಪಿಎಲ್ ಆಗುತ್ತಾ​..?

2023ರ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದ ಮಹಿ, ಆ ನೋವಿನಲ್ಲೂ ಆಡಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ 5ನೇ ಬಾರಿಗೆ ಟ್ರೋಫಿ ಗೆದ್ದ ಬಳಿಕವೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಅನ್ನೋದು ಮರೆಯುವಂತಿಲ್ಲ. ಆದ್ರೀಗ ಮತ್ತೆ ಗಂಭೀರ ಇಂಜುರಿ ನೋವಿನಿಂದ ಬಳಲುತ್ತಿರುವ ಧೋನಿ, ಕೊನೆ ಬಾರಿ ತವರಿನ ಫ್ಯಾನ್ಸ್​ಗೆ ಟ್ರೋಫಿ ಗೆಲ್ಲಿಸಿಕೊಡುವ ಮಹಾದಾಸೆ ಹೊಂದಿದ್ದಾರೆ. ಹೀಗಾಗಿ ಈ ಸೀಸನ್​ ಅಂತ್ಯದ ಬಳಿಕ ಮಾಹಿ ಗುಡ್​ಬಾಯ್ ಹೇಳಿದ್ರು ಅಚ್ಚರಿ ಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
newsfirstkannada, newsfirstlive, news1stkannada, news1stlive, news1st, newsfirst,

ಪಂದ್ಯದ ಕೊನೆಯಲ್ಲಿ ಬ್ಯಾಟಿಂಗ್​ಗೆ ಇಳಿಯುತ್ತಿರೋ MS ಧೋನಿ.. ಇದರ ಹಿಂದಿನ ಮಹತ್ವದ ಕಾರಣ?

https://newsfirstlive.com/wp-content/uploads/2024/05/DHONI_08.jpg

Load More