ತವರಿನಲ್ಲಿ ಲಕ್ನೋದ ಬೊಂಬಾಟ್ ಆಟ.. ಡಿ ಕಾಕ್ ಅಬ್ಬರದ ಬ್ಯಾಟಿಂಗ್
ತಂಡದ ರನ್ ಹೆಚ್ಚಿಸಲು ನೆರವಾದ ನಾಯಕ ನಿಕೋಲಾಸ್ ಮತ್ತು ಕೃನಾಲ್
ಸ್ಯಾಮ್ ಕರ್ರಾನ್ ಬೌಲಿಂಗ್ ಮೋಡಿ.. 3 ವಿಕೆಟ್ ಕಿತ್ತ ಪಂಜಾಬ್ ಆಲ್ರೌಂಡರ್
ತವರಿನಲ್ಲೇ ಲಕ್ನೋ ತನ್ನ ಎದುರಾಳಿ ಪಂಜಾಬ್ಗೆ 199 ರನ್ಗಳ ದೊಡ್ಡ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಕೈಚಳ ತೋರಿಸಿದ್ದಾರೆ. ಸದ್ಯ ಈ ಸವಾಲನ್ನು ಪಂಜಾಬ್ ಸ್ವೀಕರಿಸಲು ಮುಂದಾಗಿದೆ.
ಆರಂಭಿಕ ಆಟಗಾರರಾಗಿ ಕ್ವಿಂಟನ್ ಡಿ ಕಾಕ್ ಜೊತೆಗೆ ಮೈದಾನಕ್ಕಿಳಿದ ನಾಯಕ ಕೆ. ಎಲ್ ರಾಹುಲ್ ದೊಡ್ಡ ರನ್ ಕಲೆ ಹಾಕುವ ಗುರಿ ಹೊಂದಿದ್ದರು. ಅದರಲ್ಲೂ ಡಿ ಕಾಕ್ ಅಬ್ಬರ ಬ್ಯಾಟಿಂಗ್ ಪಂಜಾಬ್ ಬೆಚ್ಚಿ ಬಿದ್ದಿತ್ತು. 38 ಎಸೆತಕ್ಕೆ 5 ಬೌಂಡರಿ ಮತ್ತು 2 ಸಿಕ್ಸ್ ಹೊಡೆಯವ ಮೂಲಕ 54 ರನ್ ಬಾರಿಸಿದ್ದರು. ಇವರ ಜೊತೆಯಾಟಗಾರ ರಾಹುಲ್ 9 ಎಸೆತವನ್ನು ಎದರಿಸಿ 1 ಬೌಂಡರಿ ಮತ್ತು 1 ಸಿಕ್ಸ್ ಬಾರಿಸುವ ಮೂಲಕ 15 ರನ್ ಬಾರಿಸಿದರು. ಆದರೆ ಡಿ ಕಾಕ್ ಅರ್ಷದೀಪ್ ಎಸೆತಕ್ಕೆ ಬ್ಯಾಟ್ ಬೀಸಲು ಹೋಗಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು. ಇತ್ತ ರಾಹುಲ್ ಕೂಡ ಜಾನ್ ಬೈರ್ಸ್ಟೋವ್ಗೆ ಕ್ಯಾಚ್ ನೀಡಿ ಪೆವಿಲಿಯನ್ನತ್ತ ಸಾಗಿದರು.
ಹೈ-ಲೈಟ್ಸ್
ಕ್ವಿಂಟನ್ ಡಿ ಕಾಕ್- 54 ರನ್
ನಿಕೋಲಾಸ್ ಪೂರನ್- 42 ರನ್
ಕೃನಾಲ್ ಪಾಂಡ್ಯ – 43 ರನ್
ನಂತರ ಬಂದ ದೇವದತ್ತ ಪಡಿಕಲ್ ಮೇಲೆ ನಂಬಿಕೆ ಇದ್ದರೂ ಸಹ ಸ್ಯಾಮ್ ಕರ್ರಾನ್ ಎಸೆತಕ್ಕೆ ಶಿಖರ್ ಧವನ್ಗೆ ಕ್ಯಾಚ್ ನೀಡಿ ಹೊರನಡೆದರು. 6 ಎಸೆತವನ್ನು ಎದುರಿಸಿದ ಇವರು 2 ಬೌಂಡರಿ ಜೊತೆಗೆ 9 ರನ್ ಬಾರಿಸಿದರು.
ಮಾರ್ಕಸ್ ಸ್ಟೋಯಿನಿಸ್ ಕೂಡ 12 ಎಸೆತದಲ್ಲಿ 2 ಸಿಕ್ಸ್ ಬಾರಿಸಿ 19 ರನ್ ಕಲೆಹಾಕುವ ಮೂಲಕ ರಾಹುಲ್ ಚಾಹರ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಿಕೋಲಾಸ್ ಪೂರನ್ ಮಾತ್ರ ನಾಯಕನಾಗಿ ತಂಡಕ್ಕೆ ಕೊಂಚ ರನ್ ಸಂಪಾದಿಸಲು ಮುಂದಾದರು. 21 ಎಸೆತಕ್ಕೆ 3 ಸಿಕ್ಸ್, 3 ಫೋರ್ ಬಾರಿಸಿ 42 ರನ್ಗಳನ್ನು ಬಾರಿಸಿದರು.
ಕೃನಾಲ್ ಪಾಂಡ್ಯ 18 ಎಸೆತದಲ್ಲಿ 41 ರನ್ ಬಾರಿಸಿದ್ದಾರೆ. ಅದರಲ್ಲಿ 4 ಬೌಂಡರಿ ಮತ್ತು 2 ಸಿಕ್ಸ್ ಬಾರಿಸಿದ್ದಾರೆ. ಇನ್ನು ಆಯುಷ್ ಬದೋನಿ 8 ರನ್ ಬಾರಿಸಿದರೆ. ಅತ್ತ ರವಿ ಬಿಷ್ಮೋಯಿ ಸೊನ್ನೆ ಸುತ್ತಿದ್ದಾರೆ. ಮೋಹಿಶ್ ಕುಮಾರ್ ಕೂಡ 2 ರನ್ ಬಾರಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಕ್ವಿಂಟನ್ ಡಿಕಾಕ್ ಅರ್ಧ ಶತಕ ಬಾರಿಸಿದರೆ, ನಾಯಕ ನಿಕೊಲಾಸ್ ಪೂರನ್ ಮತ್ತು ಕೃಣಾಲ್ ಪಾಂಡ್ಯ ಅದ್ಭುತವಾಗಿ ಆಡಿದ್ದಾರೆ.
ಇದನ್ನೂ ಓದಿ: ರಿಲೇಶನ್ಶಿಪ್ನಲ್ಲಿದ್ದೇನೆ ಎಂದ ವಿಜಯ್ ದೇವರಕೊಂಡ! ಯಾರ ಜೊತೆಗೆ ಗೊತ್ತಾ?
ಅತ್ತ ಪಂಬಾಜ್ ವೇಗಿಗಳ ದಾಳಿ ಬಗ್ಗೆ ಗಮನಿಸುವುದಾದರೆ, ಸ್ಯಾಮ್ ಕರ್ರಾನ್ 3 ವಿಕಟ್ ಕಿತ್ತರೆ, ಅರ್ಷದೀಪ್ 2, ರಬಾಡ ಮತ್ತು ರಾಹುಲ್ ಚಾಹರ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ