newsfirstkannada.com

ವಿರಾಟ್ ಕೊಹ್ಲಿ​ ಔಟಾ? ನಾಟ್​ ಔಟಾ? ಭಾರೀ ಅನುಮಾನ.. ವಿವಾದದಲ್ಲಿ ಐಪಿಎಲ್​..!

Share :

Published May 11, 2024 at 7:24am

Update May 11, 2024 at 7:25am

  ಫ್ಯಾನ್ಸ್​ಗೆ IPL​​​​​ನ ರೋಚಕ ಪಂದ್ಯಗಳ ಹಬ್ಬದೂಟ

  ಐಪಿಎಲ್​​ನಲ್ಲಿ ಫ್ಯಾನ್ಸ್​ಗೆ ಸಿಕ್ತಿದೆ ಭರ್ಜರಿ ಮನರಂಜನೆ

  ಕೊಹ್ಲಿ to ಸಂಜು.. ಸಾಲು ಸಾಲು ವಿವಾದಾತ್ಮಕ ತೀರ್ಪು

ನಿರ್ಣಾಯಕ ಹಂತಕ್ಕೆ ಐಪಿಎಲ್​ ಬಂದು ತಲುಪಿದೆ. ಫ್ಲೇ-ಆಫ್​​ಗೆ ಯಾರು ಹೋಗ್ತಾರೆ ಅನ್ನೋ ಕುತೂಹಲ ದಿನೇ ದಿನೇ ಹೆಚ್ಚಾಗ್ತಿದೆ. ಈ ನಡುವೆ ಕೆಲ ವಿವಾದಾತ್ಮಕ ತೀರ್ಪುಗಳು, ಆಟಗಾರರ ಹಾಗೂ ಅಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಫ್ಯಾನ್ಸ್​ಗೆ ಜಬರ್ದಸ್ತ್​ ಎಂಟರೈಟೈನ್ಮೆಂಟ್ ಸಿಗ್ತಿದೆ. ಬೌಂಡರಿ, ಸಿಕ್ಸರ್​ಗಳ ಸುರಿಮಳೆ, ರೋಚಕ ಪಂದ್ಯಗಳ ಹಬ್ಬದೂಟ. ಕೊನೆ ಕ್ಷಣದ ತನಕ ಉಸಿರಿದಿಡುವ ರಿಸಲ್ಟ್​.. ರೆಕಾರ್ಡ್​ ಬ್ರೇಕರ್​​ ಮ್ಯಾಚ್​ಗಳು ಅಭಿಮಾನಿಗಳನ್ನ ತುದಿಗಾಲಿನಲ್ಲಿ ನಿಲ್ಲಿಸುತ್ತಿವೆ. ಅಷ್ಟೇ ಅಲ್ಲ! ಎಲ್ಲರ ಗಮನ ಸೆಳೆದಿದೆ. ಆದ್ರೆ, ಈ ನಡಿವೆ ಕೆಲ ವಿವಾದಾತ್ಮಕ ತೀರ್ಪುಗಳು ಸಾಕಷ್ಟು ಸದ್ದು ಮಾಡ್ತಿವೆ.

ಇದನ್ನೂ ಓದಿ:ಲೈಂಗಿಕ ಕಿರುಕುಳ ಕೇಸ್​ನ​ಲ್ಲಿ ಬಿಜೆಪಿ ಮುಖಂಡನಿಗೆ ಸಂಕಷ್ಟ.. ದೇವರಾಜೇಗೌಡ ವಿರುದ್ಧದ ಆರೋಪ ಏನು?

ಬೌಂಡರಿ ಲೈನ್​ ಬಳಿ ಸಂಜು ವಿವಾದಾತ್ಮಕ ಔಟ್​..?
ಡೆಲ್ಲಿ ಕ್ಯಾಪಿಟಲ್ಸ್​ ಎದುರು ಸಂಜು ಔಟ್​​, ಭಾರೀ ಚರ್ಚೆಗೆ ಕಾರಣವಾಗಿತ್ತು. ಅದ್ಭುತವಾಗಿ ಬ್ಯಾಟಿಂಗ್ ನಡೆಸ್ತಿದ್ದ ಸಂಜು, 16ನೇ ಓವರ್​ನಲ್ಲಿ ಸಿಕ್ಸರ್​ ಸಿಡಿಸಲು ಯತ್ನಿಸಿ ಲಾಂಗ್​ ಆನ್​ನಲ್ಲಿ ಶಾಯ್​​​​ ಹೋಪ್​ಗೆ ಕ್ಯಾಚ್‌ ನೀಡಿದ್ರು. ಈ ವೇಳೆ ಫೀಲ್ಡರ್​ ಶೂ, ಬೌಂಡರಿ ಲೈನ್‌ ತಾಗಿದಂತ್ತಿತ್ತು. ಆದ್ರೆ, ಒಂದೇ ಆ್ಯಂಗಲ್​ನಲ್ಲಿ ವಿಡಿಯೋ ನೋಡಿದ ಟಿವಿ ಅಂಪೈರ್​​​​, ಔಟ್ ಎಂದು ತೀರ್ಪು ನೀಡಿದ್ರು.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!

ವಿರಾಟ್ ಕೊಹ್ಲಿ​ ಔಟಾ..? ನಾಟ್​ ಔಟಾ..?
ಕಿಂಗ್ ಕೊಹ್ಲಿ ಕೆಕೆಆರ್ ಎದುರು ಔಟಾದ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ 7 ಎಸೆತಗಳಲ್ಲೇ 18 ರನ್ ಚಚ್ಚಿದ್ದ ವಿರಾಟ್​, ಫುಲ್​ ಟಾಸ್​​ ಬಾಲ್​​ಗೆ ಕ್ಯಾಚ್ ನೀಡಿದ್ರು. ಚೆಂಡು ಸೊಂಟಕ್ಕಿಂತ ಮೇಲಿದ್ದ ಕಾರಣ ನೋಬಾಲ್​​ಗೆ ಮೇಲ್ಮನವಿ ಸಲ್ಲಿಸಿದ್ರು. ಕ್ರೀಸ್ ಬಿಟ್ಟಿದ್ದ ಕಾರಣ ಟಿವಿ ಅಂಪೈರ್ ಕೂಡ ಆನ್​ಫೀಲ್ಡ್​ ಅಂಪೈರ್​ನ ತೀರ್ಪುನ್ನ ಎತ್ತಿ ಹಿಡಿದಿದ್ರು. ಈ ನಿರ್ಧಾರದಿಂದ ಕೊಹ್ಲಿ ಮೈದಾನದಲ್ಲಿ ಅಂಪೈರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

ಆಯುಷ್ ಬದೋನಿ ರನೌಟ್ ವಿವಾದ..!
ಲಕ್ನೋ ತಂಡದ ಆಯುಷ್‌ ಬದೋನಿ ರನೌಟ್‌ ಕೂಡ ವಿವಾದ ಸೃಷ್ಟಿಸಿತ್ತು. ಮುಂಬೈ ನೀಡಿದ್ದ 145 ರನ್‌ಗಳ ಗುರಿಯನ್ನ ಲಕ್ನೋ ಬೆನ್ನಟ್ಟಿತ್ತು. ಕೊನೆ 12 ಎಸೆತಗಳಲ್ಲಿ ಲಕ್ನೋ 13 ರನ್‌ ಗಳಿಸಬೇಕಿತ್ತು. 19ನೇ ಓವರ್​​ನ 2ನೇ ಬಾಲ್​ನ ಡೀಪ್ ಕವರ್​​ಗೆ ಬಾರಿಸಿದ ಬದೋನಿ, ಎರಡು ರನ್ ಪೂರ್ಣಗೊಳಿಸಿದ್ರು. ಆದ್ರೆ, ಬದೋನಿ ಬ್ಯಾಟ್‌ ನೆಲಕ್ಕೆ ಸ್ಪರ್ಶಿಸಿದೆಯಾ..? ಇಲ್ಲವಾ ಎಂಬ ಬಗ್ಗೆ ಗೊಂದಲದಲ್ಲಿದ್ದ ಟಿವಿ ಅಂಪೈರ್​, ಔಟ್‌ ತೀರ್ಪು ನೀಡಿದ್ರು. ಈ ಬಗ್ಗೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾದ್ವು.

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

ಗುಜರಾತ್ ಎದುರು ಪೃಥ್ವಿ ಶಾ ಕ್ಯಾಚ್​​​​​ ಔಟ್​..!
ಗುಜರಾತ್ ಟೈಟನ್ಸ್ ಎದುರು ಪೃಥ್ವಿ ಶಾ ಔಟಾಗಿದ್ದು ಕೂಡ ವಿವಾದಕ್ಕೆ ಗುರಿಯಾಗಿದೆ. ಸಂದೀಪ್ ವಾರಿಯರ್ ಓವರ್​ನಲ್ಲಿ ಸ್ಕೇರ್​ ಲೆಗ್​ನತ್ತ ಬಾರಿಸಿದ್ದ ಚೆಂಡನ್ನ, ನೂರ್ ಅಹ್ಮದ್, ಡೈವಿಂಗ್ ಕ್ಯಾಚ್ ಹಿಡಿದಿದ್ರು. ಇದು ಕ್ಲೀನ್ ಕ್ಯಾಚ್ ಆಗಿದೆಯಾ ಎಂದು ಅಂಪೈರ್ ಪರಿಶೀಲನೆ ನಡೆಸುತ್ತಿದ್ರು. ಆದ್ರೆ, ಚೆಂಡು ನೆಲಕ್ಕೆ ತಾಗುವಂತೆ ಕಾಣ್ತಿದ್ರು, ಟಿವಿ ಅಂಪೈರ್ ಔಟ್ ಎಂದು ತೀರ್ಪು ಪ್ರಕಟಿಸಿದ್ರು.

ಇದಿಷ್ಟೇ ಅಲ್ಲ.! ಆನ್​ಫೀಲ್ಡ್​ ಅಂಪೈರ್​ಗಳು ನೀಡಿದ ಕೆಲ ವೈಡ್ ತೀರ್ಪುಗಳು ಪ್ರಶ್ನೆ ಮಾಡುವಂತಿದೆ. ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವಂತೆಯೂ ಮಾಡಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್ ಕೊಹ್ಲಿ​ ಔಟಾ? ನಾಟ್​ ಔಟಾ? ಭಾರೀ ಅನುಮಾನ.. ವಿವಾದದಲ್ಲಿ ಐಪಿಎಲ್​..!

https://newsfirstlive.com/wp-content/uploads/2024/04/Kohli-not-out.jpg

Load More