Advertisment

6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​

author-image
Bheemappa
Updated On
6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​
Advertisment
  • ಬಿಸಿಸಿಐ ನಿರ್ಧಾರದಿಂದ ಸಮಧಾನಗೊಂಡ ಐಪಿಎಲ್ ಫ್ರಾಂಚೈಸಿಗಳು
  • ಅನ್​​ಕ್ಯಾಪ್ಡ್​ ಪ್ಲೇಯರ್​ ರೂಲ್ ರದ್ದು ಎಂಎಸ್​ ಧೋನಿಗೆ ಒಲಿದ ಲಕ್
  • ಪ್ರತಿ ಐಪಿಎಲ್ ಮ್ಯಾಚ್​ಗೆ ಪ್ರತಿ ಆಟಗಾರರಿಗೆ ಲಕ್ಷ ಲಕ್ಷ ರೂಪಾಯಿ

2025ರ ಐಪಿಎಲ್​ನಲ್ಲಿ ಫ್ರಾಂಚೈಸಿಗಳು 6 ಆಟಗಾರರನ್ನು ಉಳಿಸಿಕೊಳ್ಳಬಹುದು (ರಿಟೈನ್) ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಈ ಹಿಂದೆ ಕೆಲ ಫ್ರಾಂಚೈಸಿಗಳು ತಮ್ಮ ಬ್ರ್ಯಾಂಡ್ ಉಳಿಸಿಕೊಳ್ಳಲು 5 ರಿಂದ 6 ಪ್ಲೇಯರ್ಸ್ ರಿಟೈನ್​ಗೆ ಅನುಮತಿ ಕೇಳಿದ್ದವು. ಅದರಂತೆ ಬಿಸಿಸಿಐ ಅನುಮತಿ ನೀಡಿದೆ.

Advertisment

ಐಪಿಎಲ್​​ನಲ್ಲಿನ ಎಲ್ಲ ತಂಡಗಳು ರಿಟೈನ್ ಮೂಲಕ 5 ಹಾಗೂ ರೈಟ್ ಟು ಮ್ಯಾಚ್ (ಆರ್​​ಟಿಎಂ) ಮೂಲಕ ಒಬ್ಬ ಆಟಗಾರ ಸೇರಿ ಒಟ್ಟು 6 ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಬಹುದು. ಬಿಸಿಸಿಐನ ಈ ನಿರ್ಧಾರದಿಂದ ಐಪಿಎಲ್​ ಫ್ರಾಂಚೈಸಿಗಳು ಸಮಾಧಾನಗೊಂಡಿವೆ.  6 ಆಟಗಾರರಲ್ಲಿ ಸ್ವದೇಶಿ, ವಿದೇಶಿ ಪ್ಲೇಯರ್​ಗಳೆಂದು ಉಳಿಸಿಕೊಳ್ಳುವುದು, ಬಿಡುವುದು ಫ್ರಾಂಚೈಸಿಗೆ ಬಿಟ್ಟದ್ದು. 2025-27ರವರೆಗೆ ರಿಟೈನ್ ಇಂಪ್ಯಾಕ್ಟ್​ ರೂಲ್ ಮುಂದುವರೆಯುತ್ತದೆ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ:ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್​​ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?

publive-image

ಅನ್​​ಕ್ಯಾಪ್ಡ್​ ಪ್ಲೇಯರ್​ ರೂಲ್ ಅನ್ನು ಸಡಿಲಿಕೆ ಮಾಡಿದ್ದರಿಂದ ಎಂಎಸ್​ ಧೋನಿ ಕೂಡ ಮತ್ತೆ ಅಖಾಡಕ್ಕೆ ಎಂಟ್ರಿಯಾಗಬಹುದು. ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲು ಇದ್ದಂತಹ ನಿಯಮ ತೆರವು ಮಾಡಲಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿಯಾದ ಪ್ಲೇಯರ್ ಅನ್​​ಕ್ಯಾಪ್ಡ್​ ಪ್ಲೇಯರ್ ಆಗಿ ಐಪಿಎಲ್​​ನಲ್ಲೂ ಆಡಬಹುದು. ಇನ್ನೇನಿದ್ದರೂ ಎಲ್ಲಾ ಫ್ರಾಂಚೈಸಿಗಳು ಮೆಗಾ ಆಕ್ಷನ್​ಗೆ ಹೋಗಲು ತಯಾರಾಗ್ತಿವೆ.

Advertisment

ಇದನ್ನೂ ಓದಿ: SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?

ಭಾರತೀಯ ಮಂಡಳಿಯು ಐಪಿಎಲ್ 2025 ಗಾಗಿ ಫ್ರಾಂಚೈಸಿಗಳಿಗೆ ಹರಾಜು ಪರ್ಸ್ ಅನ್ನು 120 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಿದೆ. ಇದು ಕಳೆದ ಹರಾಜಿಗೆ ಹೋಲಿಸಿದರೆ 20 ಕೋಟಿ ಅಧಿಕಗೊಂಡಿದೆ. ಈಗ 146 ಕೋಟಿ ರೂಪಾಯಿಗಳನ್ನ ಫ್ರಾಂಚೈಸಿ ಹೊಂದಬಹುದು. ಇದರ ಜೊತೆಗೆ T20 IPL ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸದೊಂದು ಶುಲ್ಕ ನಿಯಮ ಜಾರಿ ಮಾಡಿದ್ದು ಪ್ರತಿ ಪಂದ್ಯಕ್ಕೆ ಆಟಗಾರರಿಗೆ 7.5 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಬಿಸಿಸಿಐ ಹೇಳಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment