ಮುಂಬೈನ ವಾಂಖೆಡೆ ಮೈದಾದನಲ್ಲಿ ಹೈವೋಲ್ಟೇಜ್ ಪಂದ್ಯ
ಪಾಯಿಂಟ್ಸ್ ಟೇಬಲ್ನಲ್ಲಿ ಲಾಸ್ಟ್ನಿಂದ 2ನೇ ಸ್ಥಾನದಲ್ಲಿ RCB
ಐದು ಪಂದ್ಯಗಳಾಡಿ ನಾಲ್ಕರಲ್ಲಿ ಸೋಲು ಕಂಡಿರುವ ಆರ್ಸಿಬಿ
ಐಪಿಎಲ್ ಟೂರ್ನಿಯಲ್ಲಿ ಇವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೂ ಇವತ್ತು ಗೆಲುವು ಅನಿವಾರ್ಯವಾಗಿದೆ.
ಐದು ಪಂದ್ಯಗಳನ್ನು ಆಡಿರುವ ಆರ್ಸಿಬಿ ನಾಲ್ಕರಲ್ಲಿ ಸೋತು ಸುಣ್ಣವಾಗಿದೆ. ಫೀಲ್ಡಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸುತ್ತಿರುವ ಬೆಂಗಳೂರು ತಂಡ, ಇವತ್ತು ಮುಂಬೈ ವಿರುದ್ಧ ಪುಟಿದೆದ್ದು ಸ್ಟ್ರಾಂಕ್ ಕಂಬ್ಯಾಕ್ ಮಾಡಬೇಕಿದೆ.
ಇದನ್ನೂ ಓದಿ: ‘ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!
ಈ ಬಾರಿಯ ಐಪಿಎಲ್ನಲ್ಲಿ ಗೆಲುವನ್ನೇ ನೋಡಿರದ ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸ್ಟ್ರಾಂಗ್ ಕಂಬ್ಯಾಕ್ ಮಾಡಿದೆ. ನಾಲ್ಕು ಪಂದ್ಯಗಳನ್ನು ಆಡಿ ಒಂದರಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 8ನೇ ಸ್ಥಾನದಲ್ಲಿದ್ದರೆ, ಆರ್ಸಿಬಿ 9ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ತವರಲ್ಲೂ, ತವರಿನಾಚೆಯೂ ಮುಖಭಂಗ.. RCBಗೆ ಇರೋ ಮುಂದಿನ ಸವಾಲುಗಳು ಏನು?
ಗೆಲುವಿನ ಹುಡುಕಾಟದಲ್ಲಿರುವ ಆರ್ಸಿಬಿ ಪ್ಲೇಯಿಂಗ್-11 ರಲ್ಲಿ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ, ಫಾಫ್ (ಕ್ಯಾಪ್ಟನ್), ರಜತ್ ಪಾಟೀದಾರ್, ಮ್ಯಾಕ್ಸ್ವೆಲ್, ಗ್ರೀನ್, ಕಾರ್ತಿಕ್ (ವಿಕೆಟ್ ಕೀಪರ್), ಸೌರವ್ ಚೌಹಾಣ್, ಟೋಪ್ಲಿ, ಮಯಾಂಕ್, ಸಿರಾಜ್, ದಯಾಳ್ ಕಳೆದ ಪಂದ್ಯದಲ್ಲಿ ಆಡಿದ್ದಾರೆ. ಇವತ್ತಿನ ಪಂದ್ಯದಲ್ಲಿ ವಿಲ್ಲಿ ಹಾಗೂ ಕನ್ನಡಿಗ ವೈಶಾಕ್ ವಿಜಯ್ ಆಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್