ಐಪಿಎಲ್ ಪ್ಲೇ ಆಫ್ ರೇಸ್ ತೀವ್ರ ಕುತೂಹಲ ಮೂಡಿಸಿದೆ
ಆರ್ಸಿಬಿ, ಸಿಎಸ್ಕೆ ಎರಡೂ ತಂಡಕ್ಕೂ ಇದೆ ದೊಡ್ಡ ಚಾನ್ಸ್
ಮೇ 26 ರಂದು ಐಪಿಎಲ್ ಹಬ್ಬಕ್ಕೆ ತೆರೆ ಬೀಳಲಿದೆ
ಐಪಿಎಲ್ ಪ್ಲೇ-ಆಫ್ ಹೋರಾಟ ಸಿಕ್ಕಾಪಟ್ಟೆ ಟಫ್ ಆಗಿದೆ. ಪ್ಲೇ-ಆಫ್ನ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಯಾವ ತಂಡಗಳು ಬರುತ್ತವೇ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಇಷ್ಟೇ ಎಲ್ಲಾ ತಂಡಗಳ ಜಿದ್ದಾಜಿದ್ದಿನ ಹೋರಾಟ.
ಸದ್ಯ ಚರ್ಚೆ ಆಗ್ತಿರೋದು ಪ್ಲೇ-ಆಫ್ನ ನಾಲ್ಕನೇ ಸ್ಥಾನದ ಬಗ್ಗೆ. ಅದು ಆರ್ಸಿಬಿ ವರ್ಸಸ್ ಸಿಎಸ್ಕೆ ನಡುವಿನ ಪಂದ್ಯ. ಆದರೆ ಮೂರನೇ ಸ್ಥಾನಕ್ಕೆ ಹೋಗಲಿದೆ ಎನ್ನಲಾಗುತ್ತಿರುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ಲೇ-ಆಫ್ ಹಾದಿ ಕೂಡ ಸುಗಮವಾಗಿಲ್ಲ. ಅದೃಷ್ಟ ಕೈಕೊಟ್ಟರೆ ಹೈದರಾಬಾದ್ ಪ್ಲೇ-ಆಫ್ ಪ್ರವೇಶ ಮಾಡದೇ ಟೂರ್ನಿಯಿಂದಲೇ ಹೊರ ಬೀಳಬಹುದು.
ಪ್ಲೇ-ಆಫ್ ಹಾದಿ ರೋಚಕ
ಯಾಕೆಂದರೆ.. ಈಗಾಗಲೇ 12 ಪಂದ್ಯಗಳನ್ನು ಆಡಿರುವ ಹೈದರಾಬಾದ್ 7 ರಲ್ಲಿ ಗೆದ್ದು, +0.406 ನೆಟ್ ರನ್ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಮೇ 16 ರಂದು ಗುಜರಾತ್ ಟೈಟನ್ಸ್ ಹಾಗೂ ಮೇ 19 ರಂದು ಪಂಜಾಬ್ ವಿರುದ್ಧ ಸೆಣಸಾಟ ನಡೆಸಲಿದೆ. ಒಂದು ವೇಳೆ ಈ ಎರಡೂ ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ಸೋತರೆ ಪ್ಲೇ-ಆಫ್ ಪ್ರವೇಶ ಮಾಡೋದು ಕಷ್ಟವಾಗಬಹುದು.
ಇದನ್ನೂ ಓದಿ:CSK, RCB ಅಭಿಮಾನಿಗಳಿಗೆ ಇದು ಕೆಟ್ಟ ಸುದ್ದಿ.. ಏನದು..?
ಅದು ಹೇಗೆ ಎಂದರೆ ಶನಿವಾರ ನಡೆಯುವ ಸಿಎಸ್ಕೆ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ, ಹೈದರಾಬಾದ್ ಮನೆಗೆ ಹೋಗಲಿದೆ. ಆರ್ಸಿಬಿ ಸಿಎಸ್ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ, ಸಹಜವಾಗಿಯೇ ನೆಟ್ ರನ್ ರೇಟ್ ಹೆಚ್ಚಾಗಲಿದೆ. ಈಗಾಗಲೇ + 0.387 ನೆಟ್ ರನ್ ರೇಟ್ ಹೊಂದಿದೆ. ಇತ್ತ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸಿಎಸ್ಕೆ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಆದರೂ ಸಿಎಸ್ಕೆ ಪ್ಲೇ-ಆಫ್ರ ಪ್ರವೇಶ ಮಾಡಲಿದೆ. ಭಾರೀ ಅಂತರದಲ್ಲಿ ಗೆಲ್ಲದಿದ್ದರೆ ಆರ್ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶ ಮಾಡಲಿದೆ. ಇನ್ನು ಎಲ್ಎಸ್ಜಿ ಕೂಡ ಪ್ಲೇ-ಆಫ್ ಕನಸು ಕಾಣುತ್ತಿದೆ. ಎಲ್ಎಸ್ಜಿ ಮುಂದೆ ಎರಡು ಪಂದ್ಯಗಳು ಬಾಕಿ ಇವೆ. ಈ ಎರಡೂ ಪಂದ್ಯಗಳಲ್ಲೂ ಲಕ್ನೋ ಸೋತರೆ ಆರ್ಸಿಬಿ ಮತ್ತು ಸಿಎಸ್ಕೆ ಪ್ಲೇ-ಆಫ್ ಪ್ರವೇಶಕ್ಕೆ ಅವಕಾಶ ಇದೆ.
ಇದನ್ನೂ ಓದಿ:ಪ್ಲೇ ಆಫ್ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್ಸಿಬಿ ಎಷ್ಟು ರನ್ಗಳಿಂದ ಗೆಲ್ಲಬೇಕು?
ಇದನ್ನೂ ಓದಿ:ಮೇ 18.. ಆರ್ಸಿಬಿ ಟಾರ್ಗೆಟ್ ಕೂಡ 18..! ಆ 18ರಲ್ಲಿ ಅಡಗಿದೆ ಆರ್ಸಿಬಿ ಭವಿಷ್ಯ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್