/newsfirstlive-kannada/media/post_attachments/wp-content/uploads/2024/10/Marriage.jpg)
ಚಿಂತೆಯಿಲ್ಲದವರಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಕೆಲವರಿಗೆ ಪ್ರಪಂಚವೇ ತಲೆಕೆಳಗಾಗಲಿ ಅದಾವುದರ ಪರಿವೇ ಇಲ್ಲದಂತೆ ಇರುತ್ತಾರೆ. ಆದರೆ ಇಲ್ಲೊಂದು ಘಟನೆಯಲ್ಲಿ ದೇಶವೇ ಅಳಿವು ಉಳಿವಿನ ಪ್ರಶ್ನೆಯಲ್ಲಿರುವಾಗ ಜೋಡಿಗಳಿಬ್ಬರು ವಿವಾಹವಾಗಿದ್ದಾರೆ. ಯುದ್ಧ ಕ್ಷಿಪಣಿಗಳು ಆಕಾಶದಲ್ಲಿ ಹಾರುತ್ತಿರುವಾಗ ಈ ಜೋಡಿ ವಿವಾಹ ಬಂಧಿಯಾಗಿದ್ದಾರೆ.
ಬಹುತೇಕರಿಗೆ ತಿಳಿದಿದೆ. ಇರಾನ್​ ಮತ್ತು ಇಸ್ರೇಲ್​​ ರಣರಂಗದಲ್ಲಿ ಹೋರಾಡುತ್ತಿದೆ. ರಕ್ತಕ್ರಾಂತಿಯತ್ತ ತಿರುಗುತ್ತಿದೆ. 100, 200 ಕ್ಷಿಪಣಿಗಳನ್ನು ಬಿಡುವ ಮೂಲಕ ಜನರನ್ನು ಹೊಡೆದುಳಿಸುತ್ತಿದ್ದಾರೆ. ಅಲ್ಲಿದ್ದವರು ಉಸಿರು ಬಿಡಿ ಹಿಡಿದುಕೊಂಡು ಬಂಕರ್​ಗಳನ್ನು ಸೇರುತ್ತಿದ್ದಾರೆ. ಇಂದು ಬದುಕಿದರೆ ನಾಳೆ ಜೀವನ ಎಂಬಂತಿದ್ದಾರೆ. ಆದರೆ ಇದರ ನಡುವೆ ಜೋಡಿಯೊಂದು ಇದಾವುದರ ಪರಿವೇ ಇಲ್ಲದಂತೆ ವಿವಾಹವಾಗಿದ್ದಾರೆ. ಅಂದಹಾಗೆಯೇ ಕಾರ್ಮೋಡದ ನಡುವೆ ಯುದ್ಧದ ಕ್ಷಿಪಣಿಗಳು ಹಾರಾಡುತ್ತಿರುವಾಗ ಜೋಡಿ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ. ಸದ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನೇಕರ ಅಚ್ಚರಿಗೆ ಕಾರಣವಾಗಿದೆ.
View this post on Instagram
ಇದನ್ನೂ ಓದಿ: ಮದುವೆ ನಿರಾಕರಿಸಿದ ಸೀರಿಯಲ್​ ನಟಿ.. ಮನನೊಂದು ಉಸಿರು ನಿಲ್ಲಿಸಿದ 25 ವರ್ಷದ ಯುವಕ
ಮೇಲ್ನೋಟಕ್ಕೆ ಇಸ್ರೇಲ್​ ಯಹೂದಿ ಜೋಡಿ ಮದುವೆ ಸಂಭ್ರಮದಲ್ಲಿದ್ದರೆ, ಅತ್ತ ಇರಾನಿ ಕ್ಷಿಪಣಿಗಳು ಆಕಾಶದಲ್ಲಿ ಹಾರಿ ಬರುತ್ತಿವೆ. ಹಾವಾಸಿ ಎಂಬ ಇನ್​​ಸ್ಟಾ ಖಾತೆ ಈ ಜೋಡಿಯ ಫೋಟೋವನ್ನು ಹಂಚಿಕೊಂಡಿದೆ.
Hundreds of Iranian missiles couldn’t stop this Jewish couple from getting married.
Their Chuppah ceremony took place in safe room during the Iranian missile attack.
♥️ LOVE wins.
We ARE Dancing Again. ?? pic.twitter.com/OzZGd9NRzH
— Daniel Kraus (@rabbidkraus)
Hundreds of Iranian missiles couldn’t stop this Jewish couple from getting married.
Their Chuppah ceremony took place in safe room during the Iranian missile attack.
♥️ LOVE wins.
We ARE Dancing Again. 🇮🇱 pic.twitter.com/OzZGd9NRzH— Daniel Kraus (@rabbidkraus) October 1, 2024
">October 1, 2024
ಡೇನಿಯಲ್​ ಕ್ರೌಸ್​ ಎಂಬ ಟ್ವಿಟ್ಟರ್​ ಖಾತೆದಾರನು ಕೂಡ ಬೇರೊಂದು ಜೋಡಿಯ ವಿವಾಹದ ಫೋಟೋ ಹಂಚಿಕೊಂಡಿದೆ. ಪೋಸ್ಟ್​ ಸಂಬಂಧಿಸಿದಂತೆ ನೂರಾರು ಇರಾನಿಯನ್​ ಕ್ಷಿಪಣಿಗಳು ಆಕಾಶದಲ್ಲಿ ಹಾರಾಡಿದರು ಜೇವಿಶ್​​ ಜೋಡಿಯ ಮದುವೆ ನಿಲ್ಲಿಸಲಾಗಲಿಲ್ಲ. ಇರಾನ್​ ಕ್ಷಿಪಣಿ ದಾಳಿಯ​ ಸಮಯದಲ್ಲಿ ಚುಪ್ಪಾ ಸಮಾರಂಭವು ಸುರಕ್ಷಿತ ಕೋಣೆಯಲ್ಲಿ ನಡೆಯಿತು. ಪ್ರೀತಿ ಗೆಲ್ಲುತ್ತದೆ. ನಾವು ಮತ್ತೆ ನೃತ್ಯ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ