/newsfirstlive-kannada/media/post_attachments/wp-content/uploads/2024/09/AMIR-KHAN-VIDOE-CALL-TO-PHOGAT-1.jpg)
ಮುಂಬೈ: ಸದಾ ಹೊಸತನಕ್ಕೆ ತುಡಿಯುವ, ಪ್ರಯೋಗಾತ್ಮಕ ಸಿನಿಮಾಗಳಿಗೆ ಹೆಚ್ಚು ಮಹತ್ವ ಕೊಡುವ ನಟ ಅಂದ್ರೆ ಅದು ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ​ಖಾನ್. ಅವರ ಪ್ರತಿಯೊಂದು ಸಿನಿಮಾಗಳಲ್ಲೂ ವೈವಿಧ್ಯತೆಗಳು ನಮಗೆ ಕಾಣ ಸಿಗುತ್ತವೆ. ಹೊಸ ಹೊಸ ಕಾನ್ಸೆಪ್ಟ್​ಗಳೊಂದಿಗೆ ಸದಾ ಪ್ರೇಕ್ಷಕರ ಮುಂದೆ ಬರುವ ಅಮೀರ್ ಖಾನ್​, ಈಗ ಮತ್ತೆ ಸಿನಿಮಾ ವಿಷಯದಲ್ಲಿ ಚರ್ಚೆಗೆ ಬಂದಿದ್ದಾರೆ. ಮತ್ತೆ ಮಿಡಿಯಾಗಳಲ್ಲಿ ಹೆಡ್​ಲೈನ್ ಆಗಿದ್ದಾರೆ. ಅದಕ್ಕೆ ಕಾರಣ ಆ ಒಂದು ವಿಡಿಯೋ ಕಾಲ್.
/newsfirstlive-kannada/media/post_attachments/wp-content/uploads/2024/09/AMIR-KHAN-VIDOE-CALL-TO-PHOGAT.jpg)
ಇದನ್ನೂ ಓದಿ:ಪಾಂಡ್ಯ ಹೊಸ ಪ್ರೇಮ ಪುರಾಣ! I Love you ಎಂದು ಓಪನ್ ಪ್ರಪೋಸ್​..!
ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನ ಇಲ್ಲವೇ ಬೆಳ್ಳಿ ಗೆಲ್ಲಲು ಒಂದೇ ಒಂದು ಮೆಟ್ಟಿಲು ಬಾಕಿಯಿತ್ತು. ತೂಕದಲ್ಲಿ ನೂರೇ ನೂರು ಗ್ರಾಂ ಹೆಚ್ಚಾಗಿದ್ದಕ್ಕೆ ಪಂದ್ಯದಿಂದ ಅನರ್ಹರಾಗಿದ್ದರು ವಿನೇಶ್ ಪೋಗಟ್​, ಅವರ ಆ ಹಿನ್ನಡೆ ಇಡೀ ದೇಶವೇ ಮರುಗಿತ್ತು. ಚಿನ್ನ ಗೆಲ್ಲದಿದ್ದರೆನಂತೆ ಮನಸ್ಸು ಗೆದ್ದಿದ್ದೀರಾ ಎಂದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದು ನಿಮಗೆ ನೆನಪೇ ಇದೆ. ಈಗ ವಿನೇಶ್ ಪೊಗಟ್​ ಒಲಿಂಪಿಕ್ಸ್​ನಲ್ಲಿ ಪರದಾಡಿದ ಹೋರಾಡಿದ ಕಥೆ ಸಿನಿಮಾವಾಗಿ ಬರಲಿದೆಯಾ ಅನ್ನೊ ಮಾತುಗಳು ಸದ್ಯ ಓಡಾಡುತ್ತಿವೆ. ಅದಕ್ಕೆ ಕಾರಣ ಬಾಲಿವುಡ್ ಹೀರೋ ಅಮೀರ್ ಖಾನ್ ವಿನೇಶ್​ ಪೋಗಟ್​ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು.
ಇದನ್ನೂ ಓದಿ:ಗರ್ಭಿಣಿ ಎಂದು ತಿಳಿದ 72 ಗಂಟೆಯಲ್ಲಿ ಮದ್ವೆಯಾದೆ.. ಅರ್ಜೆಂಟಲ್ಲಿ ಎಲ್ಲಾ ಆಗೋಯ್ತು ಎಂದ ನಟಿ!
ಈಗಾಗಲೇ ದಂಗಲ್​ನಂತಹ ಸತ್ಯ ಘಟನೆ ಆಧಾರಿತ ಹಾಗೂ ಕುಸ್ತಿಪಟುಗಳನ್ನೇ ಆಧರಿಸಿ ದಂಗಲ್​ ಅನ್ನೊ ಸಿನಿಮಾ ಮಾಡಿ ಸೈ ಎನಿಸಿಕೊಂಡಿರುವ ಅಮೀರ್ ಖಾನ್, ಈಗ ವಿನೇಶ್ ಪೊಗಟ್ ಜೀವನಾಧಾರಿತ ಸಿನಿಮಾಗೆ ಕೈ ಹಾಕಿದ್ದಾರಾ ಅಂತ ಕುತೂಹಲವೊಂದು ಶುರುವಾಗಿದೆ. ​ಅಮಿರ್ ಖಾನ್ ವಿನೇಶ್ ಪೊಗಟ್​ಗೆ ಮಾಡಿದ ವಿಡಿಯೋ ಕಾಲ್ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಕಾಲ್ ಮಾಡಿದಾಗ ಮಾಜಿ ಕುಸ್ತಿ ಪಟು ಹಾಗೂ ದಂಗಲ್ ಸಿನಿಮಾಗೆ ಹಲವು ಸಲಹೆ ನೀಡಿದ ಕೃಪಾ ಶಂಕರ್​ ವಿನೇಶ್ ಪಕ್ಕ ನಿಂತಿದ್ದ ಫೋಟೋ ಈಗ ಸದ್ಯ ವೈರಲ್ ಆಗಿದ್ದು, ಇದು ದಂಗಲ್ ಪಾರ್ಟ್​-2 ಸಿನಿಮಾಗೆ ಹಾಕಲಾಗುತ್ತಿರುವ ಬುನಾದಿ ಎಂದೇ ನೆಟ್ಟಗರು ಮಾತನಾಡಿಕೊಳ್ಳುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/09/AMIR-KHAN-VIDOE-CALL-TO-PHOGAT-2.jpg)
ವಿನೇಶ್ ಪೋಗಟ್​​​ಗೆ ಕರೆ ಮಾಡಿರುವ ಅಮೀರ್ ಖಾನ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಆಟದ ಬಗ್ಗೆ ವಿನೇಶ್​ಗೆ ಇದ್ದ ಶ್ರದ್ಧೆ ಹಾಗೂ ಅಂತಿಮ ಸುತ್ತಿಗೆ ಅರ್ಹತೆ ಪಡೆಯುವ ಸಲುವಾಗಿ ಅವರು ತೂಕ ಇಳಿಸಲು ಮಾಡಿದ ಪ್ರಯತ್ನಗಳೆಲ್ಲವನ್ನು ಹೊಗಳಿದ್ದಾರೆ ಎಂದು ತಿಳಿದು ಬಂದಿದೆ. ಈ ಒಂದು ಮಾತುಕತೆ ಈಗ ದಂಗಲ್ 2 ಸಿನಿಮಾಗೆ ವೇದಿಕೆಯಾಗಲಿದೆ ಅನ್ನೊ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಒಂದು ವೇಳೆ ಅದು ಆಗಿದ್ದೇ ಆದಲ್ಲಿ ಬೆಳ್ಳಿ ತೆರೆಯ ಮೇಲೆ ಅಮಿರ್ ಖಾನ್ ಮತ್ತೊಮ್ಮೆ ಕುಸ್ತಿ ಆಧಾರಿತ ಸಿನಿಮಾದಿಂದ ಧೂಳೆಬ್ಬಿಸೋದು ಕನ್ಫರ್ಮ್ ಎಂತಿದ್ದಾರೆ ಅಬಿಮಾನಿಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us