newsfirstkannada.com

ಎಲೆ ಅಡಿಕೆನೇ ಕೊಡಲ್ಲ, ಸಿಗರೇಟ್‌ ಕೊಟ್ಟಿದ್ಯಾರು? ಜೈಲಲ್ಲಿ ದರ್ಶನ್‌ ರಾಜಾತಿಥ್ಯದ ಮೇಲೆ 10 ಅನುಮಾನ!

Share :

Published August 26, 2024 at 6:20am

    1974ರ ಕರ್ನಾಟಕ ಪ್ರಿಸನರ್ಸ್​ ರೂಲ್ಸ್​ ಕಾಯ್ದೆಗೆ ಬೆಲೆಯೇ ಇಲ್ಲವೇ?

    ಎಲೆ ಅಡಿಕೆನೇ ಕೊಡಲ್ಲ, ಅಂತಹದ್ರಲ್ಲಿ ದರ್ಶನ್‌ಗೆ ಸಿಗರೇಟು ಕೊಟ್ಟಿದ್ಯಾರು?

    ಲೋಹದ ವಸ್ತುವಾದ ಕಡಗವನ್ನು ದರ್ಶನ್​​​​ ಕೈನಲ್ಲೇ ಇರಿಸಿದ್ದು ಯಾರು?

ಬೆಂಗಳೂರು:  ಒಂದು ಫೋಟೋ. ಒಂದೇ ಒಂದು ಫೋಟೋ ರಾಜ್ಯದಲ್ಲಿ ದೊಡ್ಡ ಸುಂಟರಗಾಳಿಯನ್ನೇ ಎಬ್ಬಿಸಿಬಿಟ್ಟಿದೆ. ನ್ಯಾಯದೇವತೆಯ ತಕ್ಕಡಿ ನಿಜಕ್ಕೂ ದುಡ್ಡಿದ್ದವರ ಉಳ್ಳವರ ಪಾಲಿಗೆನೇ ತೂಗತ್ತಿದೆಯಾ ಅನ್ನೋ ಅನುಮಾನಗಳು ಸದ್ಯ ಮೂಡುತ್ತಿವೆ. ಕೊಲೆ ಕೇಸಲ್ಲಿ ಜೈಲು ಸೇರಿರೋ ದರ್ಶನ್​ ಜೈಲಲ್ಲಿ ದರ್ಬಾರ್ ಮಾಡ್ತಿರೋ ಆ ಫೋಟೋ ರಾಜಾತಿಥ್ಯದ ಗುಟ್ಟನ್ನ ರಟ್ಟು ಮಾಡಿದೆ. 2017ರಲ್ಲಿ ಆದಂತೆ ಶಶಿಕಲಾ ಮಾದರಿಯ ಬಹುದೊಡ್ಡ ವಿವಾದಕ್ಕೆ ಸರ್ಕಾರಕ್ಕೆ ಸಿಕ್ಕಿ ಕೊಳ್ತಿದೆಯಾ? ದುಡ್ಡಿದ್ರೆ ಜೈಲಲ್ಲಿ ಎಲ್ಲವೂ ಸಿಗಲಿದ್ಯಾ? ಕೈದಿಗಳಿಗೆ ಜೈಲಿನ ಕಠಿಣಾತಿಕಠಿಣ ನಿಯಮಗಳು ಏನ್​ ಹೇಳುತ್ತೆ.

ಇದನ್ನೂ ಓದಿ: ದರ್ಶನ್​ ರೆಸಾರ್ಟ್​​ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?

ಬೆಂಗಳೂರಿನ ಸೆಂಟ್ರಲ್​​ ಜೈಲಿನ ಅಧಿಕಾರಿಗಳು ಜೈಲಿನ ಮ್ಯಾನ್ಯುಲ್​​​ ಮೂಲೆಗೆ ಎಸೆದಿದ್ದಾರಾ? 1974ರ ಕರ್ನಾಟಕ ಪ್ರಿಸನರ್ಸ್​ ರೂಲ್ಸ್​​ ಕಾಯ್ದೆಯನ್ನೇ ಕಸದ ಬುಟ್ಟಿಗೆ ಬಿಸಾಕಿದ್ದಾರಾ ಅನ್ನೋ ಅನುಮಾನ ಮೂಡ್ತಿದೆ.. ಅಷ್ಟಕ್ಕೂ ಅದೊಂದು ಫೋಟೋದಲ್ಲಿ ಏನೇನಿದೆ ಗೊತ್ತಾ? ಒಂದೇ ಒಂದು ಫೋಟೋದಲ್ಲಿರೋ ಲೋಪಗಳೇನು ಅನ್ನೋದನ್ನ ಒಂದೊಂದಾಗಿ ತೋರಿಸ್ತೀವಿ.

1. 1974ರ ಕರ್ನಾಟಕ ಪ್ರಿಸನರ್ಸ್​ ರೂಲ್ಸ್​ ಕಾಯ್ದೆಗೆ ಬೆಲೆಯೇ ಇಲ್ಲವೇ?
ಪರಪ್ಪನ ಅಗ್ರಹಾರದ ಪ್ರಾಂಗಣವೇ ದರ್ಶನ್​​ಗೆ ದರ್ಬಾರ್​ ಆದಂತೆ ಕಾಣುತ್ತಿದೆ. ಹೀಗೆ ಎಲ್ಲಂದ್ರಲ್ಲಿ ಖುಲ್ಲಂಖುಲ್ಲಾ ಓಡಾಡ್ಕೊಂಡು ಇರೋದಕ್ಕೆ ಸಾಧ್ಯವೇ ಇಲ್ಲ.. 1894ರ ಬಂಧೀಖಾನೆ ಕಾಯ್ದೆ ಹಾಗೂ 1974ರ ಕರ್ನಾಟಕ ಪ್ರಿಸನರ್ಸ್​ ರೂಲ್ಸ್​ ಕಾಯ್ದೆ ಪ್ರಕಾರ ಇದ್ಯಾವುದಕ್ಕೂ ಅವಕಾಶವೇ ಇಲ್ಲ.. ಆದರೇ, ದರ್ಶನ್​​ ಮತ್ತವನ ಸಹಚರ​​​ ಕುಖ್ಯಾತ ರೌಡಿಗಳ ಜೊತೆಯಲ್ಲಿ ಕುಳಿತು ಆರಾಮಾಗಿ ಮಗ್​​ನಲ್ಲಿರೋ ಕಾಫಿನೋ? ಟೀನೋ ಹೀರುತ್ತಾ ಎಂಜಾಯ್​​ ಮಾಡ್ತಿದ್ದಾರೆ.. ಇಷ್ಟು ದಿನಗಳ ಕಾಲ ನಾವೆಲ್ಲರೂ ಸಹ ದರ್ಶನ್​​ ಜೈಲಿನೊಳಗೆ ವಿಲವಿಲ ಒದ್ದಾಡುತ್ತಿದ್ದಾರೆ ಅಂದ್ಕೊಂಡಿದ್ವಿ.. ಆದ್ರೆ ದರ್ಶನ್​​ ಹೊರಗೆ ಹೇಗಿದ್ರೋ.. ಒಳಗೂ ಅಷ್ಟೇ ಮಜವಾಗಿದ್ದಾರೆ ಅನ್ನೋದಕ್ಕೆ ಈ ಫೋಟೋ ಸಾಕ್ಷಿ ನುಡಿಯುತ್ತಿದೆ.

2. ಜೈಲಿನಲ್ಲಿರೋ ದರ್ಶನ್​​ ಕೈಲಿರೋ ಸಿಗರೇಟು ಹೊತ್ತಿಸಿದ್ದು ಯಾರು?
ಜೈಲಿನ ಮ್ಯಾನ್ಯುಲ್ ಪ್ರಕಾರ ಸುಮಾರು 20ಕ್ಕೂ ಅಧಿಕ ವಸ್ತುಗಳನ್ನು ಯಾವುದೇ ಕೈದಿಗೂ ಕೂಡ ಕೊಡುವಂತೆಯೇ ಇಲ್ಲ.. ಆ ಲೆಕ್ಕಾಚಾರಕ್ಕೆ ಬಂದ್ರೆ ದರ್ಶನ್​​ ಕೈಲಿರೋ ಸಿಗರೇಟಿನ ತುದಿಯಲ್ಲಿ ಉರಿಯುತ್ತಿರೋ ಬೆಂಕಿ ಮೊದಲ ನಿಷೇಧಿತ ವಸ್ತು.. ಬೆಂಕಿಪೊಟ್ಟಣವಾಗ್ಲಿ. ಬೆಂಕಿ ಹೊತ್ತಿಸುವ ಯಾವುದೇ ವಸ್ತುವಾಗಲಿ ಜೈಲಿನ ಕೈದಿಯ ಕೈಗೆ ಸಿಗದಂತೆ ನೋಡಿಕೊಳ್ಳಬೇಕಿರೋದು ಜೈಲಾಧಿಕಾರಿ ಜವಾಬ್ಧಾರಿ.

3. ಎಲೆ ಅಡಿಕೆನೇ ಕೊಡಲ್ಲ. ಅಂಥಾದ್ರಲ್ಲಿ ಸಿಗರೇಟು ಕೊಟ್ಟಿದ್ಯಾರು?
ಜೈಲಿನ ಮ್ಯಾನ್ಯುಲ್ ಪ್ರಕಾರ ಸಿಗರೇಟು ಕೈದಿಗೆ ಕೊಡುವಂತಿಲ್ಲ.. ಇದಿಷ್ಟೇ ಅಲ್ಲ.. ನಿಷೆ ಏರಿಸೋ ಭಾಂಗ್, ಗಾಂಜಾ, ಅಫೀಮು ನಂಥಾ ಮಾದಕ ವಸ್ತಗಳನ್ನೂ ನೀಡುವಂತಿಲ್ಲ.. ವಿಶೇಷ ಅಂದ್ರೆ ವಿಳ್ಯದೆಲೆ ಅಡಿಕೆ ಕೂಡ ಜೈಲಿನೊಳಗೆ ನಿಷಿದ್ಧ ವಸ್ತುಗಳು.. ಇಂಥಾದ್ರಲ್ಲಿ ಪ್ಯಾಸಿವ್ ಸ್ಮೋಕಿಂಗ್​​ನಿಂದ ಇತರೆ ಕೈದಿಗಳಿಗೂ ಸಮಸ್ಯೆ ಆಗುತ್ತೆ.. ಆದಾಗ್ಯೂ ಪರಪ್ಪನ ಅಗ್ರಹಾರದಲ್ಲಿ ದರ್ಶನ್​​​ ಬಾಯಿಗೆ ಸಿಗರೇಟು ಇಟ್ಟು.. ಸಿಗರೇಟು ಹಚ್ಚಿದ್ಯಾರು? ಇಷ್ಟೆಲ್ಲಾ ಸವಲತ್ತುಗಳನ್ನು ನೀಡೋದಾದ್ರೆ ಸಾಮಾನ್ಯರೂ ಜೈಲಿನ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳೋದಿಲ್ಲವೇ?

4. ಲೋಹದ ವಸ್ತುವಾದ ಕಡಗವನ್ನು ದರ್ಶನ್​​​​ ಕೈನಲ್ಲೇ ಇರಿಸಿದ್ದು ಯಾರು?
ನೋಡಿ.. ದರ್ಶನ್​​ ಕೈನಲ್ಲಿ ಇನ್ನೂ ಕಡಗ ಇದೆ.. ಬಹುಪಾಲು ಸಿನಿಮಾಗಳಲ್ಲಿ ಜೈಲಿಗೆ ಸೇರುವ ಹೀರೋ ತನ್ನೆಲ್ಲಾ ವಸ್ತುಗಳನ್ನು ಬಿಚ್ಚಿಟ್ಟು ಹೋಗೋ ದೃಶ್ಯ ನೋಡಿರ್ತೀರಿ.. ಅಂತೆಯೇ ಕೈದಿಗೆ ಸಾಮಾನ್ಯವಾಗಿ ಲೋಹದ ಯಾವುದೇ ವಸ್ತು ನೀಡಲ್ಲ.. ಕಾರಣ, ಲೋಹದ ವಸ್ತುವಿನಿಂದ ಆಯುಧ ಮಾಡಿಕೊಂಡು ಮತ್ತೊಬ್ಬರ ಮೇಲೆ ಹಲ್ಲೆ ನಡೆಸಬಹುದು ಅನ್ನೋ ಆತಂಕ ಜೈಲಾಧಿಕಾರಿಗಳಿಗೆ ಇರುತ್ತೆ.. ಜೈಲಿನ ಮ್ಯಾನ್ಯುಲ್ ಸಹ ಇದನ್ನೇ ಹೇಳುತ್ತದೆ.. ಆದ್ರಿಲ್ಲಿ ದರ್ಶನ್​​ಗೆ ಕಡಗ ತೊಡಿಸಿ ರಾಜನಂತೆ ನೋಡಿಕೊಳ್ತಿರೋದ್ಯಾರು? ಇಂಥದ್ದೊಂದು ಪ್ರಶ್ನೆ ಇದೀಗ ಎದ್ದಿದೆ..

5. ಮರದ ಟೇಬಲ್​​​ ಕೊಟ್ಟು ದರ್ಬಾರ್​​​ಗೆ ಅವಕಾಶ ಕೊಟ್ಟಿದ್ಯಾರು?
ಮರದ ಸಣ್ಣದೊಂದು ತುಂಡನ್ನೂ ಸಹ ಜೈಲಾಧಿಕಾರಿಗಳು ಕೈದಿಯ ಕೈಗೆ ಸಿಗದಂತೆ ನೋಡಿಕೊಳ್ಳಬೇಕಿದೆ.. ಅಂಥಾದ್ರಲ್ಲಿ ಮರದ ಟೇಬಲ್ ಒಂದನ್ನ ಕೊಟ್ಟು.. ಅದರ ಮೇಲಿ ಕಾಲಿಟ್ಟುಕೊಂಡು ಟೀ/ಕಾಫಿ ಕುಡಿಯಲಿಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.. 1894ರ ಬಂಧೀಖಾನೆ ಕಾಯ್ದೆ ಪ್ರಕಾರ ಪ್ರೋಯಿಬಿಟೆಡ್​​ ಅರ್ಟಿಕಲ್ಸ್​​ ಹೇಳೋ ಲೆಕ್ಕಾಚಾರ ನೋಡಿದರೇ ಮರ ಅಥವಾ ಬಿದಿರು ಅಥವಾ ಸಣ್ಣದೊಂದು ಬೆತ್ತವೂ ಸಹ ಕೈದಿಗೆ ಕೈಗೆ ಸಿಗುವಂತಿಲ್ಲ.. ವಿಶೇಷ ಕೈದಿಗೆ ಸೆಲ್​​ನಲ್ಲಿ ಮಾತ್ರ ಮರದ ಟೇಬಲ್ ನೀಡುತ್ತಾರೆಯೇ ವಿನಃ ಹೀಗೆ ಹೊರಗೆ ರಾಜ್ಯಭಾರ ಮಾಡಲು ಅವಕಾಶ ಕೊಡುವುದಿಲ್ಲ.. ಆದಾಗ್ಯೂ ದರ್ಶನ್​​ಗೆ ದರ್ಬಾರ್​ ಮಾಡಲು ಅವಕಾಶ ಕೊಟ್ಟವರ್ಯಾರು?

6. ಸ್ಟೀಲ್ ಲೋಟದ ಬದಲು ಐಷಾರಾಮಿ ಟೀ ಕಪ್ ಕೊಟ್ಟಿದ್ಯಾರು?
ಸಾಮಾನ್ಯವಾಗಿ ಸ್ಟೀಲ್ ಲೋಟ ಒಂದನ್ನು ಪ್ರತೀ ಕೈದಿಗೆ ನೀಡುತ್ತಾರೆ.. ಅದನ್ನು ಬಿಟ್ರೆ ತಟ್ಟೆಯಷ್ಟೇ ಅವರ ಕೈಲಿರೋ ಲೋಹದ ವಸ್ತುವಾಗಿರುತ್ತಂತೆ.. ಅಂಥಾದ್ರಲ್ಲಿ ದರ್ಶನ್​ ಕೈಲಿರೋದು ಐಷಾರಾಮಿ ಟೀ ಕಪ್.. ಇಂಥದ್ದೊಂದು ಕಪ್ ಕೊಟ್ಟಿದ್ದು ಯಾರು? ಚೂಪಾದ ಪಾತ್ರೆ ಕೂಡ ಕೈದಿ ಕೈಯಲ್ಲಿರುವುದು ಅಪಾಯಕಾರಿ ಎಂದೇ ಜೈಲಿನ ಮ್ಯಾನ್ಯುಲ್ ಹೇಳುತ್ತದೆ.. ಇಷ್ಟಾದ್ರೂ ದರ್ಶನ್​​ಗೆ ಇಷ್ಟೆಲ್ಲಾ ರಾಜಾತಿಥ್ಯ ನೀಡ್ತಿರೋದ್ಯಾರು? ಇದೇ ಪ್ರಶ್ನೆಗಳು ಇದೀಗ ಬಹುಪಾಲು ಜನರನ್ನು ಕಾಡುತ್ತಿದೆ.. ಹಾಗಾಗಿಯೇ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ, ಜೈಲಿನಲ್ಲಿ ದುಡ್ಡಿದ್ರೆ ನರಕವೂ ಸ್ವರ್ಗವಾಗುತ್ತೆ ಅನ್ನೋ ಮೂಲಕ ಕೆಲ ಭ್ರಷ್ಟ ಅಧಿಕಾರಿಗಳ ತಪ್ಪನ್ನು ಎತ್ತಿ ಹಿಡಿದಿದ್ದಾರೆ.

ಇದನ್ನೂ ಓದಿ: ಸಿಗರೇಟ್ ಪಾರ್ಟಿಯಲ್ಲಿ ದರ್ಶನ್ ಜೊತೆ ಕುಳಿತ ರೌಡಿಶೀಟರ್.. ವಿಲ್ಸನ್​ ಗಾರ್ಡನ್ ನಾಗನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

7. ಫೋಟೋ ಕೈದಿಯ ಬೀಟ್​ ಉಲ್ಲಂಘನೆ ಎತ್ತಿ ತೋರಿಸುತ್ತಿದ್ಯಾ? 

ಫೋಟೋದಲ್ಲಿ ಕುಖ್ಯಾತ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನನ ಜೊತೆ ದರ್ಶನ್​ ಮ್ಯಾನೇಜರ್​ ನಾಗರಾಜು ಹಾಗೂ ದರ್ಶನ್​ ಕುಳಿತಿರೋ ದೃಶ್ಯದಲ್ಲಿ ಕೈದಿಗ ಬೀಟ್​​ ಉಲ್ಲಂಘನೆಯೂ ಆಗಿದೆ.. ಇಂಥಾ ಪ್ರಕರಣ ಮುಂದುವರೆದರೇ ಜೈಲಿನೊಳಗೆ ಸಹ ಕೈದಿಗಳ ಮೇಲೆ ಮಾರಣಾಂತಿಕ ಹಲ್ಲೆಗಳಾಗಬಹುದು ಅನ್ನೋ ಭಯಕ್ಕೇ ಜೈಲಿನ ಮ್ಯಾನ್ಯುಲ್ ಹಾಗೂ 1974ರ ಕರ್ನಾಟಕ ಪ್ರಿಸನರ್ಸ್​ ರೂಲ್ಸ್​ ಕಾಯ್ದೆ ಒಂದು ನಿಯಮಗಳನ್ನು ರೂಪಿಸಿದೆ. ಅದರ ಸ್ಪಷ್ಟ ಉಲ್ಲಂಘನೆ ಈ ಫೋಟೋದಲ್ಲಿ ಆಗಿದೆ.

8. ಈ ಫೋಟೋ ತನಿಖಾಧಿಕಾರಿಗಳ ತನಿಖೆಯನ್ನ ಗೇಲಿ ಮಾಡುತ್ತಿದ್ಯಾ?
ರೇಣುಕಾಸ್ವಾಮಿ ಕೊಲೆ ಕೇಸ್​​ ಅನ್ನ ಹೈ ಪ್ರೊಫೈಲ್ ಕೇಸ್​​ ಅಂತ ಪರಿಗಣಿಸಿರೋ ತನಿಖಾಧಿಕಾರಿಗಳು ಒಂದು ಕಡೆ ಅಚ್ಚುಕಟ್ಟಾಗಿ ತನಿಖೆ ಮಾಡುತ್ತಿದ್ದಾರೆ.. ಸಣ್ಣದೊಂದು ವಿಚಾರವೂ ಹೊರಗೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಅಂಥಾದ್ರಲ್ಲಿ ದರ್ಶನ್​ ಜೈಲಿನಲ್ಲೂ ಆರಾಮಾಗಿ ಸಿಗರೇಟ್​ ಸೇದ್ಕೊಂಡು ಮಜವಾಗಿ ಇದ್ದಾರೆ ಅನ್ನೋ ಸಂದೇಶ ನೀಡುವ ಈ ಫೋಟೋ ತನಿಖಾಧಿಕಾರಿಗಳನ್ನು ಗೇಲಿ ಮಾಡ್ತಿಲ್ವಾ?

9. ನಿವೃತ್ತ ಪೊಲೀಸ್ ಅಧಿಕಾರಿಯಿಂದ ಘನಘೋರ ಆರೋಪ 
ಹೀಗೆ ಜೈಲಿನೊಳಗೆ ಬೇಕಾಬಿಟ್ಟಿ ಇರಬಹುದು ಅನ್ನೋದಾದ್ರೆ ಜೈಲಾಧಿಕಾರಿಗಳು ಏನ್ ಮಾಡ್ತಿದ್ದಾರೆ? ಅಡ್ಜಸ್ಟ್​​ಮೆಂಟ್​​ ಮಾಡಿಕೊಂಡಿದ್ದಾರಾ? ಮ್ಯಾನೇಜ್ಮೆಂಟ್​​ ಮಾಡ್ತಿದ್ದಾರಾ? ಇಂಥಾ ಹಲವು ಪ್ರಶ್ನೆಗಳನ್ನು ನಿವೃತ್ತ ಪೊಲೀಸ್ ಅಧಿಕಾರಿಗಳೇ ಕೇಳುತ್ತಿದ್ದಾರೆ.. ಅಸಲಿಗೆ ಜೈಲಿನ ಮ್ಯಾನ್ಯುಲ್ ಹಾಗೂ 1894ರ ಬಂಧೀಖಾನೆ ಕಾಯ್ದೆ ಹಾಗೂ 1974ರ ಕರ್ನಾಟಕ ಪ್ರಿಸನರ್ಸ್​ ರೂಲ್ಸ್​ ಕಾಯ್ದೆ ಪ್ರಕಾರ ಸುಮಾರು ವಸ್ತುಗಳು ಜೈಲಿನೊಳಗೆ ನಿಷೇಧಿತ.. ಆದಾಗ್ಯೂ.. ದರ್ಶನ್​​ ಅಂಡ್​ ಗ್ಯಾಂಗ್​​ ರಾಜಾತಿಥ್ಯ ಪಡೀತಿರೋದೇಗೆ? ಜೈಲಾಧಿಕಾರಿಗಳ ಭ್ರಷ್ಟತೆಯ ಕಾರಣಕ್ಕೆ ಇಂಥಾ ಘನಗಂಭೀರ ಲೋಪಗಳು ನಡೀತಿವೆ ಅನ್ನೋದು ಬಹುಪಾಲು ನಿವೃತ್ತ ಪೊಲೀಸ್ ಅಧಿಕಾರಿಗಳ ವಾದ.

10. ಭಾರತದ ಬಹುಪಾಲು ಜೈಲಿನೊಳಗೆ ಯಾವೆಲ್ಲಾ ವಸ್ತುಗಳು ನಿಷೇಧಿತ ಗೊತ್ತಾ?

ನಿಮಗೆ ಅಚ್ಚರಿ ಆಗಬಹುದು. ಹಾರ್ಡ್ ಆಗಿರೋ​​ ಬ್ರಷ್​ ಕೂಡ ಜೈಲಿನೊಳಕ್ಕೆ ತರುವಂತಿಲ್ಲ. ಕೈದಿಗಳ ಕೈಗೆ ಅದು ಸಿಕ್ಕರೇ ಆಯುಧವಾಗಿ ಬಳಸಬಹುದು ಅನ್ನೋ ಭಯ ಜೈಲಾಧಿಕಾರಿಗಳಿಗೆ ಇದ್ದೇ ಇರಬೇಕು. ಜೈಲಿನ ಮ್ಯಾನ್ಯುಲ್ ಪ್ರಕಾರ ಸೀಮಿತ ಪ್ರಮಾಣದ ಪುಸ್ತಕ ಹಾಗೂ ನಿಯತ ಕಾಲಿಕೆಗಳಷ್ಟೇ ಪ್ರವೇಶಾರ್ಹ.. ಜೈಲಿನ ನಿಯಮ ಮೀರಿ ಬೇಕಾದ ಬಟ್ಟೆ ತೊಡುವಂತೆಯೇ ಇಲ್ಲ. ವಿಚಾರಾಣಾಧೀನ ಕೈದಿ ಬಿಟ್ಟು ಇನ್ನುಳಿದ ಕೈದಿಗಳಿಗೆ ಸಮವಸ್ತ್ರ ಕಡ್ಡಾಯ.

ಆದ್ರಿಲ್ಲಿ, ದರ್ಶನ್​ ಹಾಗೂ ದರ್ಶನ್​​ ಮ್ಯಾನೇಜರ್​​ ಬಿಟ್ಟರೇ ಇನ್ನುಳಿದ ಕೈದಿಗಳಾದ ವಿಲ್ಸನ್​ ಗಾರ್ಡನ್​ ನಾಗ ಹಾಗೂ ಕುಳ್ಳ ಸೀನ ಆರಾಮಾಗಿ ಟೀ ಷರ್ಟ್​​ ಹಾಕ್ಕೊಂಡು ಗೋವಾ ಟ್ರಿಪ್ ಮಾಡ್ತಿರೋ ಹುಡುಗರ ರೀತಿ ಕಾಣ್ತಿದ್ದಾರೆ.. ತಿನ್ನುವ ಯಾವುದೇ ವಸ್ತುವನ್ನಾಗಲಿ, ಕುಡಿಯುವ ಯಾವುದೇ ಪಾನೀಯವಾಗಲಿ ಹೊರಗಿನಿಂದ ಬಂದಿದ್ದು ಒಳಗೆ ನಿಷಿದ್ಧ.. ಇದೇ ಕಾರಣಕ್ಕೇ ನೋಡಿ.. ಜೈಲು ಮ್ಯಾನ್ಯುಲ್ ಬಿಟ್ಟು ವ್ಯವಹಾರಕ್ಕೆ ಮುಂದಾದ್ರೆ ಜೈಲಿಗೂ ಹೊರಗಿನ ಸಾಮಾನ್ಯ ಬದುಕಿಗೂ ವ್ಯತ್ಯಾಸವೇ ಇರಲ್ಲ.

ಇದನ್ನೂ ಓದಿ: ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್‌; ವಿಡಿಯೋ ಕಾಲ್ ಮಾಡಿದ್ಯಾರು?

ಒಂದೇ ಒಂದು ಫೋಟೋವನ್ನು ಯಾವುದೇ ಆ್ಯಂಗಲ್​​ನಿಂದ ನೋಡಿದರೂ ಇಲ್ಲಿ ಜೈಲು ಮ್ಯಾನ್ಯುಲ್​​ನ ಸ್ಪಷ್ಟ ಉಲ್ಲಂಘನೆ ಆಗಿರೋದು ಕಾಣುತ್ತದೆ. ಅಲ್ಲದೇ, ಭಾರತೀಯ ಬಂಧೀಖಾನೆ ಕಾಯ್ದೆ ಹಾಗೂ ಕರ್ನಾಟಕ ಪ್ರಿಸನರ್ಸ್​ ರೂಲ್ಸ್​​​ ಕಾಯ್ದೆಗಳನ್ನು ಜೈಲಾಧಿಕಾರಿಗಳು ಕಸಕ್ಕೆ ಎಸೆದಿರುವುದು ಗೊತ್ತಾಗುತ್ತದೆ. ಎಲ್ಲಕ್ಕಿಂತ್ಲೂ ಮಿಗಿಲಾಗಿ ಇಷ್ಟು ಅದ್ಭುತವಾಗಿ ದರ್ಶನ್​​ ದರ್ಬಾರ್​ ದೃಶ್ಯವನ್ನು ಸೆರೆ ಹಿಡಿದ ಕ್ಯಾಮರಾ ಅಥವಾ ಫೋನ್​​ ಕೂಡ ಜೈಲಿನಲ್ಲಿ ಸಿಗ್ತಿದೆ ಅನ್ನೋದಾದ್ರೆ ದರ್ಶನ್​​​​ ಜೈಲಿನಲ್ಲೂ ರಾಜನಂತೆಯೇ ಮೆರೀತಿದ್ದಾನೆ.. ಇದಕ್ಕೆ ಭ್ರಷ್ಟ ಜೈಲಾಧಿಕಾರಿಗಳ ಕುಮ್ಮಕ್ಕು ಇದ್ಯಾ ಎನ್ನುವ ಪ್ರಶ್ನೆ ಮೂಡಿಸುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲೆ ಅಡಿಕೆನೇ ಕೊಡಲ್ಲ, ಸಿಗರೇಟ್‌ ಕೊಟ್ಟಿದ್ಯಾರು? ಜೈಲಲ್ಲಿ ದರ್ಶನ್‌ ರಾಜಾತಿಥ್ಯದ ಮೇಲೆ 10 ಅನುಮಾನ!

https://newsfirstlive.com/wp-content/uploads/2024/08/Darshan-New-Photo-In-Jail.jpg

Load More