Advertisment

ಇಸ್ರೇಲ್- ಇರಾನ್ ಮಧ್ಯೆ ಯುದ್ಧ ಹೆಚ್ಚಾದರೆ ಭಾರತಕ್ಕೆ ಎಫೆಕ್ಟ್​.. ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏನಾಗುತ್ತೆ..?

author-image
Ganesh
Updated On
ಇಸ್ರೇಲ್- ಇರಾನ್ ಮಧ್ಯೆ ಯುದ್ಧ ಹೆಚ್ಚಾದರೆ ಭಾರತಕ್ಕೆ ಎಫೆಕ್ಟ್​.. ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏನಾಗುತ್ತೆ..?
Advertisment
  • ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ತೀವ್ರ ಕಾರ್ಮೋಡ
  • ಈಗಾಗಲೇ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಇರಾನ್
  • ಇರಾನ್ ಮೇಲೆ ಇಸ್ರೇಲ್ ಕಿಡಿ, ಇದು ಪ್ರತೀಕಾರದ ಎಚ್ಚರಿಕೆ

ದೇಶದಲ್ಲಿ ಹಬ್ಬದ ಸೀಸನ್ ಆರಂಭವಾಗುವ ಮುನ್ನವೇ ಆತಂಕಕಾರಿ ಸುದ್ದಿಯೊಂದು ಸಿಕ್ಕಿದೆ. ಸೆಪ್ಟೆಂಬರ್​ನಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಕುಸಿದಿದ್ದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ದೇಶದಲ್ಲಿ ದೀರ್ಘ ಕಾಲದವರೆಗೆ ಸ್ಥಿರವಾಗಿರುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಇದೀಗ ಈ ಭರವಸೆಗಳು ಸುಳ್ಳಾಗಿದ್ದು, ಅದಕ್ಕೆ ಕಾರಣ ಯುದ್ಧದ ಕಾರ್ಮೋಡ!

Advertisment

ಇಸ್ರೇಲ್ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಕಚ್ಚಾ ತೈಲದ ಮೇಲೂ ಪರಿಣಾಮ ಬೀಳಲಿದೆ. ಕಚ್ಚಾ ತೈಲದ ಬೆಲೆ ಮತ್ತೆ ಬ್ಯಾರೆಲ್​ಗೆ 75 ಡಾಲರ್ ತಲುಪಿದೆ. ಇದು ಸಾರ್ವಜನಿಕರಿಗೆ ಹಬ್ಬ ಹರಿದಿನಗಳಲ್ಲಿ ಲಾಭದ ಬದಲು ಆಘಾತ ಎದುರಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

publive-image

ಇಸ್ರೇಲ್ ಮತ್ತು ಇರಾನ್​ನಲ್ಲಿ ಏನಾಗ್ತಿದೆ?
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಸದ್ಯ ನಿಲ್ಲುವಂತೆ ಕಾಣುತ್ತಿಲ್ಲ. ನಿನ್ನೆ ಮಧ್ಯರಾತ್ರಿ ಇರಾನ್, ಇಸ್ರೇಲ್ ಮೇಲೆ 200ಕ್ಕೂ ಅಧಿಕ ಕ್ಷಿಪಣಿಗಳನ್ನು ಉಡಾಯಿಸಿದೆ. ಇದರಿಂದ ಕೆರಳಿರುವ ಇಸ್ರೇಲ್, ಪ್ರತ್ಯುತ್ತರ ನೀಡುತ್ತೇವೆ ಎಂದು ಘೋಷಣೆ ಮಾಡಿದೆ. ಇಂದು ಅಥವಾ ನಾಳೆ ವೇಳೆಗೆ ಇಸ್ರೇಲ್​ನ ನೆತನ್ಯಾಹು ಪಡೆಯು ಇರಾನ್ ಮೇಲೆ ಮಿಲಿಟರಿ ಕಾರ್ಯಚರಣೆ ನಡೆಸುವ ನಿರೀಕ್ಷೆ ಇದೆ. 2 ದೇಶಗಳ ನಡುವಿನ ಯುದ್ಧದ ಬಿಕ್ಕಟ್ಟು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ವರದಿಗಳ ಪ್ರಕಾರ ಅವುಗಳ ಬೆಲೆಯು ಈಗಾಗಲೇ ಶೇಕಡಾ 5 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ:ಕ್ಷಿಪಣಿ ದಾಳಿಯ ನಡುವೆ ವಿವಾಹ.. ಅಚ್ಚರಿ ಮೂಡಿಸಿದ ಇಸ್ರೇಲ್​ ಯಹೂದಿ ಜೋಡಿ ಮದ್ವೆ

Advertisment

ವರದಿ ಪ್ರಕಾರ.. ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ವೆಸ್ಟ್​ ಟೆಕ್ಸಾಸ್​ ಇಂಟರ್ಮೀಡಿಯೇಟ್​ ಕ್ರೂಡ್ (WTI) ಬೆಲೆಯಲ್ಲಿ ಶೇಕಡಾ 5 ರಷ್ಟು ಹೆಚ್ಚಾಗಿದೆ. ಇದು ಇತ್ತೀಚೆಗೆ ಶೇಕಡಾ 2.7 ರಷ್ಟು ಕುಸಿತಗೊಂಡಿತ್ತು. ಮತ್ತೊಂದು ಕಡೆ ಬ್ರೆಂಟ್ ಕಚ್ಚಾ ಬೆಲೆ ಮತ್ತೊಮ್ಮೆ ಬ್ಯಾರಲ್​​ಗೆ 75 ಡಾಲರ್ ತಲುಪಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಂತರ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು.

publive-image

ಭಾರತಕ್ಕೂ ಎಫೆಕ್ಟ್..!
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯಲ್ಲಿನ ಬದಲಾವಣೆಯು ಭಾರತದ ಮೇಲೂ ಪರಿಣಾಮ ಬೀರಲಿದೆ. ಪೆಟ್ರೋಲ್ ಮತ್ತು ಡಿಸೀಲ್ ಬೆಲೆಗಳು ಏರಿಕೆ ಆಗಲಿವೆ. ದೇಶದ ಇಂಧನ ಬೆಲೆಗಳು ಅನೇಕ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಅವುಗಳ ಬೆಲೆ ಪ್ರತಿದಿನ ಹೆಚ್ಚಾಗುತ್ತವೆ ಮತ್ತು ಕಡಿಮೆ ಆಗುತ್ತವೆ. ಅಲ್ಲದೇ ಪ್ರತಿ ನಗರಗಳಲ್ಲೂ ಅವುಗಳ ಬೆಲೆ ವಿಭಿನ್ನವಾಗಿರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತ, ದೇಶದಲ್ಲಿ ಅದರ ಮೇಲೆ ವಿಧಿಸುವ ಅಬಕಾರಿ ಸುಂಕ ಮತ್ತು ರಾಜ್ಯಗಳು ವಿಧಿಸುವ ವ್ಯಾಟ್ ಈ ಬದಲಾವಣೆಗೆ ಕಾರಣವಾಗಿದೆ.

ಇದನ್ನೂ ಓದಿ:ಯುದ್ಧರಂಗವನ್ನು ಮೀರಿದ ಇಸ್ರೇಲ್- ಇರಾನ್ ಸಮರ: ಭಾರತದ ವ್ಯಾಪಾರ, ಪೂರೈಕೆ ಸರಪಳಿಯ ಮೇಲೆ ಯುದ್ಧದ ಪರಿಣಾಮ

Advertisment

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆಗುವ ಏರಿಳಿತ ದೇಶದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಕಚ್ಚಾ ತೈಲದ ಬೆಲೆ ಇಳಿಕೆಯಾದರೆ ಡಿಸೇಲ್ ಬೆಲೆಯಲ್ಲೂ ಇಳಿಕೆಯಾಗುತ್ತದೆ. ತಜ್ಞ ಅನುಜ್ ಗುಪ್ತ ಪ್ರಕಾರ.. ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾಲರ್​​ಗೆ 1 ಡಾಲರ್ ಹೆಚ್ಚಾದರೆ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಶೇಕಡಾ 50 ರಿಂದ 60 ರಷ್ಟು ಪೈಸೆ ವ್ಯತ್ಯಾಸ ಆಗಲಿದೆ. ಒಂದು ಡಾಲರ್ ಇಳಿಕೆಯಾದರೆ ಅದೇ ಪ್ರಮಾಣದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್, ಇರಾನ್​ನಿಂದ ಕಚ್ಚಾತೈಲದ ಬೆಲೆ ದಿಢೀರ್ ಏರಿಕೆಯಾಗಿದ್ದರಿಂದ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

publive-image

ಭಾರತಕ್ಕೆ ಪ್ರತಿದಿನ ಸುಮಾರು 37 ಲಕ್ಷ ಬ್ಯಾರೆಲ್ ಕಚ್ಚಾತೈಲದ ಅಗತ್ಯ ಇದೆ. ಅದನ್ನು ಪೂರೈಸಲು ಶೇಕಡಾ 80 ರಷ್ಟು ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ಬೆಲೆ, ಸರುಕು ಸಾಗಾಣೆಯ ಶುಲ್ಕ ರಿಫೈನರಿ ವೆಚ್ಚ ಎಲ್ಲವನ್ನೂ ನೋಡಿಕೊಂಡು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ತೈಲ ಕಂಪನಿಗಳು ನಿರ್ಧರಿಸುತ್ತವೆ. ಅಬಕಾರಿ ಸುಂಕ, ವ್ಯಾಟ್, ಡೀಲರ್ ಕಮೀಷನ್ ಸಹ ಗ್ರಾಹಕರಿಗೆ ತಲುಪುವ ಹೊತ್ತಿಗೆ ಅವುಗಳ ಬೆಲೆಯಲ್ಲಿ ಸೇರಿಸಲಾಗುತ್ತದೆ. ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಎಷ್ಟು ಮತ್ತು ಯಾವಾಗ ಬದಲಾಯಿಸಬೇಕು ಎಂಬ ಅಂತಿಮ ನಿರ್ಧಾರವನ್ನು ಸ್ಥಳೀಯ ತೈಲ ಕಂಪನಿಗಳು ತೆಗೆದುಕೊಳ್ಳುತ್ತವೆ.

ಇರಾನ್ ಪ್ರಾಬಲ್ಯ
ಒಪೆಕ್ ಸದಸ್ಯ ರಾಷ್ಟ್ರವಾಗಿರುವ ಇರಾನ್ ಕಚ್ಚಾ ತೈಲ ಒಲಯದಲ್ಲಿ ಪ್ರಾಬಲ್ಯ ಸಾಧಿಸಿದೆ. ವಿಶ್ವದ ತೈಲ ಪೂರೈಕೆಯು ಮೂರನೇ ಒಂದು ಭಾಗವನ್ನು ಇರಾನ್ ಪೂರೈಸುತ್ತದೆ. ಇರಾನ್​ನ ಕ್ಷಿಪಣಿ ದಾಳಿಯಿಂದಾಗಿ ಬಿಕ್ಕಟ್ಟು ಹೆಚ್ಚಾಗುತ್ತದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ವರದಿಯಾಗಿದೆ.

Advertisment

ಇದನ್ನೂ ಓದಿ:Iran Israel war: ಘೋರ ಯುದ್ಧ ನಡೆದರೆ ಯಾರಿಗೆ ಮೇಲುಗೈ ಆಗಬಹುದು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment