Advertisment

SSLC, PUC, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಕಾನ್​​ಸ್ಟೆಬಲ್, ಹೆಡ್​ ಕಾನ್​​ಸ್ಟೆಬಲ್​ ಹುದ್ದೆಗೆ ಕಾಲ್ ಫಾರ್ಮ್

author-image
Bheemappa
Updated On
SSLC, PUC, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಕಾನ್​​ಸ್ಟೆಬಲ್, ಹೆಡ್​ ಕಾನ್​​ಸ್ಟೆಬಲ್​ ಹುದ್ದೆಗೆ ಕಾಲ್ ಫಾರ್ಮ್
Advertisment
  • ಹೆಡ್​ ಕಾನ್​​ಸ್ಟೆಬಲ್ ಹುದ್ದೆಗೆ ಸರ್ಕಾರ ಎಷ್ಟು ಸ್ಯಾಲರಿ ಕೊಡುತ್ತೆ?
  • ಸರ್ಕಾರದ ಅಡಿ ಕೆಲಸ ಮಾಡುಲು ಇಚ್ಚಿಸುವವರು ಅಪ್ಲೇ ಮಾಡಿ
  • ವಯಸ್ಸು, ವಿದ್ಯಾರ್ಹತೆ, ಶುಲ್ಕ, ವಯೋಮಿತಿ ಮಾಹಿತಿ ಇಲ್ಲಿ ಇದೆ

ಇಂಡೋ-ಟಿಬೆಟಿಯನ್ ಬಾರ್ಡರ್​ ಪೊಲೀಸ್ ಫೋರ್ಸ್​ (ಐಟಿಬಿಪಿ) ಇಲಾಖೆಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿದ ಮೇಲೆ ಅರ್ಹರು ಎನಿಸಿದ್ದರೇ ಅಪ್ಲೇ ಮಾಡಬಹುದು.

Advertisment

ಭಾರತ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತಿ ಹೊಂದಿದ ಅರ್ಹ ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅಪ್ಲೇ ಮಾಡಬಹುದು. ಇನ್ನು ಈ ಹುದ್ದೆಗಳಿಗೆ ವಯಸ್ಸು, ವಿದ್ಯಾರ್ಹತೆ, ಶುಲ್ಕ, ವಯೋಮಿತಿ ಇತ್ಯಾದಿಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ವಿದ್ಯಾರ್ಹತೆ-
ಹೆಡ್​ ಕಾನ್​ಸ್ಟೆಬಲ್- ಪಿಯುಸಿ, ಡಿಪ್ಲೋಮಾ
ಕಾನ್​ಸ್ಟೆಬಲ್- 10ನೇ ತರಗತಿ ಪಾಸ್

ವಯಸ್ಸಿನ ಮಿತಿ-
ಹೆಡ್​ ಕಾನ್​ಸ್ಟೆಬಲ್ (dresser veterinary)- 18 ರಿಂದ 27
ಕಾನ್​ಸ್ಟೆಬಲ್ (Animal Transport)​- 18 ರಿಂದ 25
ಕಾನ್​ಸ್ಟೆಬಲ್ (kennelman)- 18 ರಿಂದ 27

Advertisment

ಇಲಾಖೆ ಹೆಸರು- ಇಂಡೋ-ಟಿಬೆಟಿಯನ್ ಬಾರ್ಡರ್​ ಪೊಲೀಸ್ ಫೋರ್ಸ್​ (ಐಟಿಬಿಪಿ)
ಹುದ್ದೆ ಮಾಡುವ ಸ್ಥಳ- ಭಾರತದೆಲ್ಲೆಡೆ
ಹುದ್ದೆಗಳ ಹೆಸರುಗಳು- ಹೆಡ್​ ಕಾನ್​ಸ್ಟೆಬಲ್ (dresser veterinary)
ಕಾನ್​ಸ್ಟೆಬಲ್ (Animal Transport)​
ಕಾನ್​ಸ್ಟೆಬಲ್ (kennelman)

ಇದನ್ನೂ ಓದಿ: SEBI ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟ ಇದ್ಯಾ? ಕೂಡಲೇ ಅಪ್ಲೇ ಮಾಡಿ; ಸಂಬಳ ₹70 ಸಾವಿರ!

publive-image

ಅಪ್ಲಿಕೇಶನ್ ಫೀ ಎಷ್ಟು ಇರುತ್ತದೆ..?
ಎಲ್ಲ ಜನರಲ್ ಅಭ್ಯರ್ಥಿಗಳು- 100 ರೂಪಾಯಿಗಳು
ಎಸ್​​ಸಿ, ಎಸ್​​ಟಿ, ಮಾಜಿ ಸೈನಿಕ, ಮಹಿಳೆರಿಗೆ ಶುಲ್ಕವಿಲ್ಲ
ಆನ್​​ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು

Advertisment

ತಿಂಗಳ ಸಂಬಳ-
ಹೆಡ್​ ಕಾನ್​ಸ್ಟೆಬಲ್- 25,500 ರಿಂದ 81,000 ರೂ.ಗಳು
ಕಾನ್​ಸ್ಟೆಬಲ್- 21,700 ರಿಂದ 69,100 ರೂ.ಗಳು

ವಯೋಮಿತಿ ಸಡಿಲಿಕೆ-
ಎಸ್​​ಸಿ, ಎಸ್​​ಟಿಗೆ 5 ವರ್ಷಗಳ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ

ಹೆಡ್​ ಕಾನ್​ಸ್ಟೆಬಲ್, ಕಾನ್​ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಪುರುಷ ಅಭ್ಯರ್ಥಿ 170 ಸೆಂಟಿಮೀಟರ್, ಮಹಿಳಾ ಅಭ್ಯರ್ಥಿ 157 ಸೆಂ.ಮೀ ಎತ್ತರ ಇರಬೇಕು. ಎದೆಯ ಸುತ್ತಳತೆ ಸಾಮಾನ್ಯವಾಗಿ 80 ಇರಬೇಕು, ಉಸಿರು ಎಳೆದುಕೊಂಡಾಗ 85 ರಷ್ಟು ಸುತ್ತಳತೆ ಇರಬೇಕು. ಎದೆ ಸುತ್ತಳತೆ ಮಹಿಳಾ ಅಭ್ಯರ್ಥಿಗಳಿಗೆ ಇರಲ್ಲ.

Advertisment

ಇದನ್ನೂ ಓದಿ:ನಮ್ಮ ಮೆಟ್ರೋದಿಂದ ಭರ್ಜರಿ ಗುಡ್​​ನ್ಯೂಸ್​.. ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಒಟ್ಟು 128 ಹುದ್ದೆಗಳು ಇವೆ. ಅಭ್ಯರ್ಥಿಗಳು ಐಟಿಬಿಪಿ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿಗಳನ್ನು ಹಾಕಬೇಕು. ಅಪ್ಲೇ ಮಾಡಿದ ಮೇಲೆ ಅಭ್ಯರ್ಥಿಗಳು ಶುಲ್ಕವನ್ನು ಆನ್​​ಲೈನ್ ಮೂಲಕ ಪಾವತಿ ಮಾಡಬೇಕು. ಪಾವತಿಸಿದ ಹಣವನ್ನು ಯಾವುದೇ ಕಾರಣಕ್ಕೂ ವಾಪಸ್ ಮಾಡುವುದಿಲ್ಲ. ಆಯ್ಕೆ ಪ್ರಕ್ರಿಯೆಯು ದೈಹಿಕ ಸಹಿಷ್ಣುತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಇರುತ್ತದೆ. 100 ಅಂಕಗಳಿಗೆ ಲಿಖಿತ ಪರೀಕ್ಷೆ, ಮೆಡಿಕಲ್ ಪರೀಕ್ಷೆ ಕೂಡ ಇರುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಸೆಪ್ಟೆಂಬರ್ 29

ಮಾಹಿತಿಗಾಗಿ ಲಿಂಕ್ ಇದೆ- https://static-cdn.publive.online/newsfirstlive-kannada/media/pdf_files/wp-content/uploads/2024/07128-Head-Constable-Constable-Posts-Extended-Notification-Details-ITBP.pdf

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment