ನಟ ಜಾವೇದ್ ಜಾಫ್ರಿ ಮಗನಿಗೆ ಮುಖೇಶ್ ಅಂಬಾನಿ ಗಿಫ್ಟ್ ಕೊಟ್ಟಿದ್ದು ಏಕೆ?
ಜುಲೈ 12ರಂದು ಅದ್ಧೂರಿಯಾಗಿ ಮದುವೆಯಾದ ಅನಂತ್ ಹಾಗೂ ರಾಧಿಕಾ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಕಮಾಲ್ ಆರ್ ಖಾನ್ ಟ್ವೀಟ್
ಮುಂಬೈ: ಜುಲೈ 12ರಂದು ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಹಾಗೂ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆದ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ ದೇಶ ವಿದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸಿದ್ದರು.
ಇದನ್ನೂ ಓದಿ: ಸಿಂಹ, ಆನೆ, ಕರಿ ಚಿರತೆ.. ಅನಂತ್ ಅಂಬಾನಿ ಪ್ರೀತಿಯ 3 ಬ್ರೂಚ್ಗಳಿವು; ಈ ಆಯ್ಕೆಯ ಹಿಂದಿದೆ ದೊಡ್ಡ ಹಿಸ್ಟರಿ!
ಇದೀಗ ಅನಂತ್ ಅಂಬಾನಿಗೆ ರಾಧಿಕಾ ಮರ್ಚೆಂಟ್ ಅನ್ನು ಪರಿಚಯಿಸಿದ ಬಾಲಿವುಡ್ ನಟ ಜಾವೇದ್ ಜಾಫ್ರಿ ಮಗನಿಗೆ ಬರೋಬ್ಬರಿ 30 ಕೋಟಿ ಮೌಲ್ಯದ ಅಪಾರ್ಟ್ಮೆಂಟ್ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೌದು, ಬಾಲಿವುಡ್ ನಟ ಜಾವೇದ್ ಜಾಫ್ರಿ ಮಗ ಮೀಜಾನ್ ಜಾಫ್ರಿಗೆ ಮುಖೇಶ್ ಅಂಬಾನಿ ಅವರು ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ ಅಂತ ಬಾಲಿವುಡ್ ನಟ, ನಿರ್ಮಾಪಕ ಕಮಾಲ್ ಆರ್ ಖಾನ್ ಅವರು ಹೇಳಿದ್ದಾರೆ.
Actor Javed Jaffrey son Meezan Javed Jaffrey is staying at Sandhu Palace Bandra, Mumbai. Because Mukesh Ambani has gifted him that apartment worth of ₹30cr. Actually Meezan did introduce Radhika Merchant to Anant Ambani. Kuch Bhi Ho Sakta Hai.😁
— KRK (@kamaalrkhan) July 14, 2024
ಇನ್ನು, ಈ ಬಗ್ಗೆ ಬಾಲಿವುಡ್ ನಟ, ನಿರ್ಮಾಪಕ ಕಮಾಲ್ ಆರ್ ಖಾನ್ ಅವರು ಸಾಮಾಜಿಕ ಜಾಲತಾಣದವಾದ X ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ನಟ ಜಾವೇದ್ ಜಾಫ್ರಿ ಮಗ ಮೀಜಾನ್ ಜಾವೇದ್ ಜಾಫ್ರಿ ಮುಂಬೈನ ಸಂಧು ಪ್ಯಾಲೇಸ್ ಬಾಂದ್ರಾದಲ್ಲಿ ಇದ್ದಾರೆ. ಏಕೆಂದರೆ ಮುಖೇಶ್ ಅಂಬಾನಿ ಅವರು ಸುಮಾರು ₹30 ಕೋಟಿ ಮೌಲ್ಯದ ಅಪಾರ್ಟ್ಮೆಂಟ್ವೊಂದನ್ನು ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರಣ ಮೀಜಾನ್ ಅವರು ರಾಧಿಕಾ ಮರ್ಚೆಂಟ್ ಅವರನ್ನು ಅನಂತ್ ಅಂಬಾನಿಗೆ ಪರಿಚಯಿಸಿದಕ್ಕಾಗಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಧಿಕಾ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ.. ಭಾವಿ ಪತ್ನಿಯನ್ನು ಹಾಡಿ ಹೊಗಳಿದ ಅನಂತ್ ಅಂಬಾನಿ; ಏನಂದ್ರು?
ನಟ ಮೀಜಾನ್ ಜಾವೇದ್ ಅವರು ಅನಂತ್ ಅಂಬಾನಿಯವರ ಆತ್ಮೀಯ ಸ್ನೇಹಿತರಾಗಿದ್ದಾರೆ. ಅನಂತ್ ಅಂಬಾನಿ ಅವರ ಮದುವೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. 2019ರಲ್ಲಿ ನಿರ್ಮಾಣವಾದ ಮಲಾಲ್ ಎಂಬ ಸಿನಿಮಾದಲ್ಲಿ ಶರ್ಮಿನ್ ಸೆಗಲ್ ಜೊತೆಗೆ ನಾಯಕ ನಟನಾಗಿ ತಮ್ಮ ಮೊದಲ ಅಭಿನಯಿಸಿದ್ದರು. ಜೊತೆಗೆ ಮಿರಾಂಡಾ ಬಾಯ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಜಾವೇದ್ ಕೊನೆಯದಾಗಿ 2022ರ ನೆಟ್ಫ್ಲಿಕ್ಸ್ ಇಂಡಿಯಾ ಸಿನಿಮಾದಲ್ಲಿ ಜಾದುಗರ್ನಲ್ಲಿ ಅಭಿನಯಿಸಿದ್ದರು. ಸದ್ಯ ನಟ ಕಮಾಲ್ ಆರ್ ಖಾನ್ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಟ್ವೀಟ್ ನೋಡಿದ ಸಾಕಷ್ಟು ಜನ ಶಾಕ್ ಆಗಿದ್ದಾರೆ. ಇನ್ನೂ ಕೆಲವರು ಕಮಾಲ್ ಆರ್ ಖಾನ್ ಅವರ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನು ಎಲ್ಲರಿಗೂ ತಿಳಿದಿರುವ ಹಾಗೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಬಾಲ್ಯದ ಸ್ನೇಹಿತರು. ಆದರೆ ಈ ಮದುವೆಯ ಬಳಿಕ ಹಿಂಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ