Advertisment

ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್​​ನಲ್ಲಿ ಮೂವರು..!

author-image
Ganesh
Updated On
ಇಂದಿನಿಂದ ಕ್ರಿಕೆಟ್​​ ಜಗತ್ತಿಗೆ ಜಯ್​ ಶಾ ಬಾಸ್; ​​ICC ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ!
Advertisment
  • ಬಿಸಿಸಿಐ ಕಾರ್ಯಾಧ್ಯಕ್ಷ ಸ್ಥಾನ ಅಲಂಕರಿಸಲು ಭಾರೀ ಫೈಟ್
  • ಆ ಮೂವರಲ್ಲಿ ಯಾರಿಗೆ ಒಲಿಯುತ್ತೆ ಮಹತ್ವದ ಹುದ್ದೆ
  • ICC ಅಧ್ಯಕ್ಷ ಸ್ಥಾನ ಅಲಂಕರಿಸಿರುವ 3ನೇ ಭಾರತೀಯ ಜಯ್ ಶಾ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಜಯ್ ಶಾ ಅಧ್ಯಕ್ಷರಾಗಿದ್ದಾರೆ. ಜಯ್ ಶಾ ಅವಿರೋಧವಾಗಿ ಆಯ್ಕೆ ಆಗಿದ್ದು, ಡಿಸೆಂಬರ್ 1ಕ್ಕೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

Advertisment

ಜಯ್ ಶಾ ಐಸಿಸಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೂರನೇ ಭಾರತೀಯ. ಈ ಹಿಂದೆ ಜಗಮೋಹನ್ ದಾಲ್ಮಿಯಾ ಹಾಗೂ ಶರದ್ ಪವಾರ್ ಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಈಗ ಮತ್ತೊಮ್ಮೆ ಐಸಿಸಿ ಅಧ್ಯಕ್ಷ ಸ್ಥಾನ ಭಾರತೀಯರಿಗೆ ಒಲಿದಿದೆ. ಬೆನ್ನಲ್ಲೇ ಜಯ್ ಶಾ ಅವರಿಂದ ತೆರವಾಗಿರುವ ಬಿಸಿಸಿಐ ಕಾರ್ಯಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಪ್ರಶ್ನೆ ಮೂಡಿದೆ. ಕೆಲವು ವರದಿಗಳ ಪ್ರಕಾರ, ರಾಜೀವ್ ಶುಕ್ಲಾ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಬಹುದು ಎಂದು ನಂಬಲಾಗಿದೆ. ರಾಜೀವ್ ಶುಕ್ಲಾ ಬಿಸಿಸಿಐ ಉಪಾಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ:ಈ ಆಟಗಾರರಿಗೆ ರೋಹಿತ್ ಶರ್ಮಾ ಕೊಟ್ರು ಎಚ್ಚರಿಕೆ; ಯಂಗ್​​ಸ್ಟರ್​ ಕಲಿಯೋದು ತುಂಬಾನೇ ಇದೆ

ರಾಜೀವ್ ಶುಕ್ಲಾ ಅವರ ಹಕ್ಕು ಪ್ರಬಲವಾಗಿದೆ. ಇದಲ್ಲದೇ ಆಶಿಶ್ ಶೇಲಾರ್ ಹೆಸರು ಕೂಡ ಚರ್ಚೆಗೆ ಬಂದಿದೆ. ಆಶಿಶ್ ಶೇಲಾರ್ ಬಿಸಿಸಿಐನ ನೂತನ ಕಾರ್ಯದರ್ಶಿಯಾಗಬಹುದು. ಆಶಿಶ್ ಶೇಲಾರ್ ಎಂಸಿಎ ಆಡಳಿತದಲ್ಲಿ ದೊಡ್ಡ ಹೆಸರು ಇದೆ.

Advertisment

ಅರುಣ್ ಧುಮಾಲ್​​ಗೆ ಬಿಸಿಸಿಐ ಕಾರ್ಯದರ್ಶಿ?
ರಾಜೀವ್ ಶುಕ್ಲಾ ಮತ್ತು ಆಶಿಶ್ ಶೆಲಾರ್ ಹೊರತುಪಡಿಸಿ ಅರುಣ್ ಧುಮಾಲ್ ಹೆಸರು ಕೂಡ ರೇಸ್‌ನಲ್ಲಿದೆ. ಪ್ರಸ್ತುತ ಅರುಣ್ ಧುಮಾಲ್ ಐಪಿಎಲ್ ಅಧ್ಯಕ್ಷರಾಗಿದ್ದಾರೆ. ಅರುಣ್ ಧುಮಾಲ್ ಅವರಿಗೆ ಸಾಕಷ್ಟು ಅನುಭವ ಇದೆ.

ಇದನ್ನೂ ಓದಿ:ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್​ಮ್ಯಾನ್ ದಶಕದ ಕನಸು ನನಸು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment