newsfirstkannada.com

ಟೀಂ ಇಂಡಿಯಾ ಕೋಚ್​​ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!

Share :

Published May 28, 2024 at 9:32am

Update May 28, 2024 at 9:35am

    ಅಖಾಡಕ್ಕೆ ಇಳಿದ ಬಿಸಿಸಿಐ ಸೆಕ್ರೆಟರಿ ಜಯ್​​ ಶಾ

    ಫೈನಲ್ ಪಂದ್ಯದ​ ಬಳಿಕ ಚೆಪಾಕ್​ನಲ್ಲಿ ನಡೆದಿದ್ದೇನು..?

    ಹೈವೋಲ್ಟೆಜ್​ ಮಾತುಕತೆ, ಸುದೀರ್ಘ ಚರ್ಚೆ.. ಯಾಕೆ.?

ಟೀಮ್​ ಇಂಡಿಯಾದ ನೂತನ ಹೆಡ್​ಕೋಚ್ ನೇಮಕದ ಹಗ್ಗಜಗ್ಗಾಟ ಮುಂದುವರೆದಿದೆ. ಖುದ್ದು ಬಿಸಿಸಿಐ ಸೆಕ್ರೆಟರಿ ಜಯ್​​ ಶಾ ಇದೀಗ ಫೀಲ್ಡ್​ಗಿಳಿದಿದ್ದಾರೆ. ಪರಿಣಾಮ ಶಾರೂಖ್​ ಖಾನ್​ ವರ್ಸಸ್ ಜಯ್​ ಶಾ ಬ್ಯಾಟಲ್​ ಶುರುವಾಗಿದೆ. ಟೀಮ್​ ಇಂಡಿಯಾ ಕೋಚ್​ ಹುದ್ದೆಗೂ ಶಾರೂಖ್​ ಖಾನ್​ಗೂ ಏನ್​ ಸಂಬಂಧ ಅಂತೀರಾ?

ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​ 17ಕ್ಕೆ ಅದ್ದೂರಿ ತೆರೆಬಿದ್ದಿದೆ. 65 ದಿನಗಳ ಕಾಲ ನಡೆದ ಕ್ರಿಕೆಟ್​ ಜಾತ್ರೆ ಫ್ಯಾನ್ಸ್​ಗೆ ಫುಲ್​ ಮೀಲ್ಸ್​ ಮನರಂಜನೆ ನೀಡ್ತು. ರಣರೋಚಕ ಕಾದಾಟಗಳು, ಟ್ವಿಸ್ಟ್​ ಅಂಡ್ ಟರ್ನ್​​, ಬೌಂಡರಿ – ಸಿಕ್ಸರ್​​ಗಳ ಸುರಿಮಳೆ, ಬೌಲರ್​​ಗಳ ವಿಕೆಟ್​ ಬೇಟೆ.. ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಫೈನಲ್​ ಫೈಟ್​ನಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್​​ಗೆ ಡಿಚ್ಚಿ ಕೊಟ್ಟ ಕೊಲ್ಕತ್ತಾ ನೈಟ್​ ರೈಡರ್ಸ್​​ ಚಾಂಪಿಯನ್​ ಆಗಿ ಹೊರ ಹೊಮ್ಮಿದೆ.

ಇದನ್ನೂ ಓದಿ:ರೀಮಲ್ ಚಂಡಮಾರುತ ಆರ್ಭಟ.. ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಯಾವಾಗ..?

IPL​ ಕಿರೀಟ ಗೆದ್ದ ಗಂಭೀರ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ಈ ಬಾರಿ ಕೆಕೆಆರ್​​ ಟ್ರೋಫಿ ಗೆದ್ದಿರೋದ್ರ ಹಿಂದೆರೋ ಮಾಸ್ಟರ್​ ಮೈಂಡ್​​ ಗೌತಮ್​ ಗಂಭೀರ್​. ಮೆಂಟರ್​​ ರೋಲ್​ನಲ್ಲಿ ತಂಡಕ್ಕೆ ಗೌತಿ ಮರು ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಕೆಕೆಆರ್​ನ ಆಟದ ಶೈಲಿ ಬದಲಾಯ್ತು. ತಂಡದ ಆಟಗಾರರಿಗೆ ಗುರು ಗೌತಿ ಮಾಡಿದ ಪಾಠದಿಂದ ತಂಡದ ಹಣೆ ಬರಹವೇ ಬದಲಾಯ್ತು. ಕಳೆದ 2 ಸೀಸನ್​ಗಳಲ್ಲಿ 7ನೇ ಸ್ಥಾನಿಯಾಗಿ ಟೂರ್ನಿಗೆ ಗುಡ್​ ಬೈ ಹೇಳಿದ್ದ ಕೆಕೆಆರ್​ ಈ ಬಾರಿ ಚಾಂಪಿಯನ್​ ಪಟ್ಟಕ್ಕೇರಿತು. ಇದ್ರ ಬೆನ್ನಲ್ಲೇ, ಗಂಭೀರ್​ ಡಿಮ್ಯಾಂಡ್​​ ಗಗನಕ್ಕೇರಿದೆ.

ಗೌತಮ್​ ಗಂಭೀರ್​ ಬೆನ್ನು ಬಿದ್ದ BCCI..!
ಟೀಮ್​ ಇಂಡಿಯಾ ಹೆಡ್​ ಕೋಚ್​​ ಹುದ್ದೆಗೆ ಅರ್ಜಿ ಅಹ್ವಾನಿಸಿರೋ ವಿಚಾರ ನಿಮಗೆ ಈಗಾಗಲೇ ಗೊತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್​ ಬೋರ್ಡ್​ನ ಕೋಚ್​ ರೇಸ್​ನಿಂದ ಬಹುತೇಕ ಬಿಗ್​ನೇಮ್​ಗಳು ಹಿಂದೆ ಸರಿದ್ದಾರೆ. ಗೌತಮ್​ ಗಂಭೀರ್​ ಹೆಸರು ಮುಂಚೂಣಿಯಲ್ಲಿದೆ. ಅಧಿಕೃತವಾಗಿ ಅರ್ಜಿ ಸಲ್ಲಿಸಿಲ್ಲ ಅನ್ನೋದು ಮೂಲದ ಮಾಹಿತಿಯಾಗಿದೆ. ಗಂಭೀರ್​ನ ಕೋಚ್​ ಪಟ್ಟಕ್ಕೆ ಕರೆತರಲು ಬಿಸಿಸಿಐ ಬಾಸ್​ ಜಯ್​ ಶಾ ಶತಾಯಗತಾಯ ಪ್ರಯತ್ನ ಪಡ್ತಿದ್ದಾರೆ. ಮೊನ್ನೆ ಫೈನಲ್​ ಪಂದ್ಯದ ಬಳಿಕ ಹೋದಲ್ಲಿ, ಬಂದಲ್ಲಿ ಗೌತಿ ಸುತ್ತ ಸುತ್ತಿದ್ದಾರೆ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್​​ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?

ಫೈನಲ್​ ಬಳಿಕ ಚೆಪಾಕ್​ನಲ್ಲಿ ನಡೀತು ಸುದೀರ್ಘ ಚರ್ಚೆ
ಮೊನ್ನೆ ನಡೆದ ಫೈನಲ್​ ಪಂದ್ಯದ ಬಳಿಕ ಚೆಪಾಕ್​ ಮೈದಾನದಲ್ಲೇ ಹೈವೋಲ್ಟೆಜ್​ ಸಭೆ ನಡೆದಿದೆ. ಬಿಸಿಸಿಐ ಸೆಕ್ರೆಟರಿ ಜಯ್​ ಶಾ, ಗೌತಮ್​ ಗಂಭೀರ್​ ಓನ್​ ಟು ಓನ್​​ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಸುದೀರ್ಘ ಚರ್ಚೆ ನಡೆಸಿರೋದು, ಗೌತಮ್​​ ಗಂಭೀರ್​​ ಟೀಮ್​ ಇಂಡಿಯಾದ ಮುಂದಿನ ಕೋಚ್​​ ಎಂಬ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ.

ಅಡಕತ್ತರಿಗೆ ಸಿಲುಕಿದ ಗೌತಮ್​ ಗಂಭೀರ್​
ಅಸಲಿಗೆ ಅರ್ಜಿ ಸಲ್ಲಿಕೆಗೆ ನಿನ್ನೆಯೇ ಕೊನೆಯ ದಿನವಾಗಿತ್ತು. ಆದ್ರೂ ಗಂಭೀರ್​ ಅರ್ಜಿ ಸಲ್ಲಿರೋದ್ರ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ರೇಸ್​ಗೆ ಗಂಭೀರ್​ ಧುಮುಕಿದ್ದೇ ಆದರೆ ಕೋಚ್​ ಪಟ್ಟ ಸಿಗೋದು ಕನ್ಫರ್ಮ್. ಬಿಸಿಸಿಐ ಸೆಕ್ರೆಟರಿ ಜಯ್​ ಶಾ ನಡೆಯೇ ಇದನ್ನ ಸಾರಿ ಸಾರಿ ಹೇಳ್ತಿದೆ. ಆದರೆ ಈ ವಿಚಾರದಲ್ಲಿ ಗಂಭೀರ್​ ಅಡಕತ್ತರಿಗೆ ಸಿಲುಕಿದ್ದಾರೆ. ಕೆಕೆಆರ್​​ ತೊರೆಯಲು ಆಗದೇ, ಟೀಮ್​ ಇಂಡಿಯಾ ಕೋಚ್​ ಆಫರ್​ನ ರಿಜೆಕ್ಟ್​ ಮಾಡಲೂ ಆಗದ ಪರಿಸ್ಥಿತಿ ಗಂಭೀರ್​ದ್ದಾಗಿದೆ.

ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?

ಗೌತಮ್​ ಗಂಭೀರ್​ ಎಂದಿಗೂ ದೇಶವೇ ಫಸ್ಟ್​ ಅನ್ನೋ ಪ್ರತಿಪಾದನೆ ಮಾಡಿದ ವ್ಯಕ್ತಿ. ಇದೇ ಸಮಯದಲ್ಲಿ ಕೆಕೆಆರ್​​ ಜೊತೆಗೂ ಗಂಭೀರ್​ ಸ್ಪೆಷಲ್​ ಬಾಂಡ್​ ಹೊಂದಿದ್ದಾರೆ. ಆಟಗಾರನಾಗಿ, ನಾಯಕನಾಗಿ ಇದೀಗ ಮೆಂಟರ್​ ಆಗಿ ಸ್ಪೆಷಲ್​ ಮೆಮೊರಿಸ್​ ಹೊಂದಿದ್ದಾರೆ. ತಂಡದ ಸಕ್ಸಸ್​​ಗೆ ಕಾರಣರಾಗಿದ್ದಾರೆ. ಇದಕ್ಕಾಗಿಯೇ ಗಂಭೀರ್​ನ, ಕೆಕೆಆರ್​​​ ಒಡೆಯ ಶಾರೂಖ್ ಖಾನ್​ ಶತಪ್ರಯತ್ನ ಮಾಡಿ ವಾಪಾಸ್​​​​ ಕರೆ ತಂದಿರೋದು. ಈಗ ಒಂದು ವೇಳೆ ಗಂಭೀರ್​, ಟೀಮ್​ ಇಂಡಿಯಾ ಕೋಚ್​ ಆಗಲು ಒಪ್ಪಿದ್ದೇ ಆದ್ರೆ, ಕೆಕೆಆರ್​ ತಂಡವನ್ನು ತೊರೆಯಬೇಕಾಗುತ್ತದೆ.

ಶಾರೂಖ್​​ VS ಜಯ್​ ಶಾ ಫೈಟ್.. ಗೆಲ್ಲೋದ್ಯಾರು.?
ಕೆಕೆಆರ್​ನಲ್ಲೇ ಗಂಭೀರ್​ ಇರಬೇಕು ಅನ್ನೋದು ಶಾರೂಖ್​ ಖಾನ್​ ಮನಸ್ಸಿನ ಮಾತಾಗಿದೆ. ಅದಕ್ಕಾಗಿ ಬ್ಲ್ಯಾಂಕ್​ ಚೆಕ್​ನ ಆಫರ್​ ಕೂಡ ಮಾಡಿದ್ದಾರೆ. ಇನ್ನೊಂದೆಡೆ, ಬಿಸಿಸಿಐ ಸೆಕ್ರೆಟರಿ ಜಯ್​ ಶಾ, ಗಂಭೀರ್​ನ ಟೀಮ್​ ಇಂಡಿಯಾ ಕೋಚ್​ ಮಾಡೋ ಸರ್ಕಸ್​ಗೆ ಬಿದ್ದಿದ್ದಾರೆ. ಇಬ್ಬರಲ್ಲಿ ಯಾರು ಗಂಭೀರ್​​ ಮನವೊಲಿಸ್ತಾರೆ? ಗೌತಿ ದೇಶಕ್ಕೆ ಜೈ​ ಅಂತಾರಾ? ಫ್ರಾಂಚೈಸಿಗೆ ಪರವೇ ಓಲವು ತೋರ್ತಾರಾ? ಅನ್ನೋ ಕುತೂಹಲ ಸದ್ಯ ಎಲ್ಲರನ್ನೂ ಕಾಡ್ತಿದೆ.

ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾ ಕೋಚ್​​ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!

https://newsfirstlive.com/wp-content/uploads/2024/05/TEM-INDIA.jpg

Load More