ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ
ಡೆಡ್ಲೈನ್ ಅಕ್ಟೋಬರ್ 1, 2024 ರವರೆಗೆ ವಿಸ್ತರಿಸಿ ವಾರ್ನಿಂಗ್
ಇನ್ಮುಂದೆ ನಕಲಿ ಕಂಪನಿಗಳ ಕಿರಿಕಿರಿ ಇರೋದೇ ಇಲ್ಲ
ಟ್ರಾಯ್ (TRAI:Telecom Regulatory Authority of India) ಟೆಲಿಕಾಂ ಕಂಪನಿಗಳಿಗೆ ಪ್ರಚಾರದ SMS ನಿಲ್ಲಿಸಲು ಸೆಪ್ಟೆಂಬರ್ 1, 2024 ರ ಗಡುವು ನೀಡಿತ್ತು. ಆದರೆ ಮಧ್ಯಸ್ಥಗಾರರ ಬೇಡಿಕೆಯ ಮೇರೆಗೆ ಅದನ್ನು ಅಕ್ಟೋಬರ್ 1, 2024 ರವರೆಗೆ ವಿಸ್ತರಿಸಲಾಗಿದೆ.
ವಾಸ್ತವವಾಗಿ TRAI ಸ್ಪ್ಯಾಮ್ ಮತ್ತು ನಕಲಿ ಕರೆಗಳನ್ನು ನಿಲ್ಲಿಸಲು ಒತ್ತು ನೀಡುತ್ತಿದೆ. ಯಾರಾದರೂ ಅದನ್ನು ಉಲ್ಲಂಘಿಸಿದರೆ, ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಯುಆರ್‌ಎಲ್/ಎಪಿಕೆ ಲಿಂಕ್‌ಗಳನ್ನು ನಿಷೇಧಿಸುವಂತೆ ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಸೂಚನೆ ನೀಡಿತ್ತು. TRAI ಆದೇಶದ ಮೇರೆಗೆ ಟೆಲಿಕಾಂ ಕಂಪನಿಗಳು ಗಡುವಿನವರೆಗೆ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿವೆ.
ಟ್ರೈ ಹೇಳಿದ್ದೇನು..?
ನಕಲಿ, ಸ್ಪ್ಯಾಮ್ ಕರೆಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಈ ಸಂಬಂಧ ಪದೆ ಪದೇ ಗ್ರಾಹಕರು ದೂರು ನೀಡುತ್ತಿದ್ದಾರೆ. ಇಂಥ ಕರೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ, ಕಿರಿಕಿರಿ ತಪ್ಪಿಸಲು ಮುಂದಾಗಿರುವ ಟ್ರೈ, ಟೆಲಿಕಾಂ ಕಂಪನಿಗಳಿಗೆ ಗುಡುವು ನೀಡಿ ಎಚ್ಚರಿಕೆ ನೀಡಿದೆ. ಕಂಪನಿಗಳಿಂದ ಬರುವ ಪ್ರಚಾರ, ಫೇಕ್ ಹಾಗೂ ಸ್ಪ್ಯಾಂ ಮೆಸೇಜ್ಗಳನ್ನು ನಿಲ್ಲಿಸಬೇಕು. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ, ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸೂಚಿಸಿದೆ.
ಇದನ್ನೂ ಓದಿ:BSNL Rs107 vs Rs153 Plan: ಕೈಗೆಟಕುವ ದರ, ಹಲವು ಬೆನಿಫಿಟ್ಸ್.. ಇವೆರಡು ಪ್ಲಾನ್ಗಳಲ್ಲಿ ಯಾವುದು ಬೆಸ್ಟ್?
ಟೆಲಿಕಾಂ ಆಪರೇಟರ್‌ಗಳು ಈಗಾಗಲೇ ಈ ಆದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೆಲಿಕಾಂ ಆಪರೇಟರ್‌ಗಳು TRAI ನಿಂದ ಸ್ವಲ್ಪ ಸಮಯ ಕೇಳಿದ್ದರು. ಹೀಗಾಗಿ ಅಕ್ಟೋಬರ್ 1, 2024 ರವರೆಗೆ ಗುಡುವು ವಿಸ್ತರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸ್ಪ್ಯಾಮ್ ಸಂದೇಶಗಳು ಮತ್ತು ಕರೆಗಳ ಪ್ರಕರಣಗಳು ಹೆಚ್ಚುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ TRAI ಸ್ಪ್ಯಾಮ್ SMS ತಲುಪುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. URL/APK ಲಿಂಕ್‌ಗಳನ್ನು ನಿಯಂತ್ರಿಸಲು ಸಹ ಸೂಚನೆ ನೀಡಿದೆ. ಸ್ಕ್ಯಾಮರ್‌ಗಳು URL/APK ಲಿಂಕ್ ಮೂಲಕ ಬಳಕೆದಾರರ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತಾರೆ.
ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ