/newsfirstlive-kannada/media/post_attachments/wp-content/uploads/2024/08/Jio-1.jpg)
ಮುಖೇಶ್​ ಅಂಬಾನಿ ಒಡೆತನದ ಟೆಲಿಕಾಂ ಕಂಪನಿ ರಿಲಯನ್ಸ್​ ಜಿಯೋ ತನ್ನ ಪ್ರಿಪೇಯ್ಡ್​ ಗ್ರಾಹಕರಿಗಾಗಿ 2 ಹೊಸ ಯೋಜನೆಯನ್ನು ಪರಿಚಯಿಸಿದೆ. ನೂತನ ಯೋಜನೆಗಳ ಮೂಲಕ ಗ್ರಾಹಕರು ಉಚಿತ ನೆಟ್​​ಫ್ಲಿಕ್ಸ್​​ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗಿದ್ರೆ ನೂತನ ಪ್ಲಾನ್​ಗಳ ಬೆಲೆ ಎಷ್ಟು? ನೋಡೋಣ.
ರಿಲಯನ್ಸ್​ ಜಿಯೋ 1,299 ರೂಪಾಯಿ ಮತ್ತು 1799 ರೂಪಾಯಿಯ ಪ್ರಿಪೇಯ್ಡ್​​ ಪ್ಲಾನ್​ ಪರಿಚಯಿಸಿದೆ. ಎರಡು ಪ್ಲಾನ್​ಗಳು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
1299 ರೂಪಾಯಿ ಪ್ಲಾನ್​​:
ನೂತನ ಪ್ಲಾನ್​​ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್​ಎಮ್​ಎಸ್​ ನೀಡುತ್ತಿದೆ. ಈ ಪ್ಲಾನ್​ ಮೂಲಕ ಗ್ರಾಹಕ ಅನಿಮಿತ 5G ಡೇಟಾ ಮತ್ತು 4G ನೆಟ್​ವರ್ಕ್​​ನಲ್ಲಿ 2GB ಡೇಟಾ ನೀಡುತ್ತಿದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಇದನ್ನೂ ಓದಿ: ಭಾರತದಲ್ಲಿ ಟೆಲಿಗ್ರಾಂ ಆ್ಯಪ್​ ಬ್ಯಾನ್​​? ತನಿಖೆಗೆ ಇಳಿದ ಕೇಂದ್ರ
1799 ರೂಪಾಯಿ ಪ್ಲಾನ್​:
ಈ ಯೋಜನೆಯ ಮೂಲಕ ದಿನಕ್ಕೆ 3GB ಡೇಟಾ ಮತ್ತು ಅನಿಯಮಿತ ಕರೆ ನೀಡುತ್ತಿದೆ. ಜೊತೆಗೆ 100 ಎಸ್​ಎಮ್​ಎಸ್​​ ಒಳಗೊಂಡಿದೆ. ಗ್ರಾಹಕರಿಗಾಗಿ 1799 ರೂಪಾಯಿ ಪ್ಲಾನ್​ ಮೂಲಕ 5G ಡೇಟಾ ಮತ್ತು 3GBಯ 4G ಡೇಟಾ ಒದಗಿಸುತ್ತದೆ. ಇದು 84 ದಿನಗಳ ಸಿಂಧುತ್ವ ಹೊಂದಿದೆ.
ಇದನ್ನೂ ಓದಿ: BSNL: ಗ್ರಾಹಕರ ಕಣ್ಣಿಗೆ ಬಿದ್ದ 397 ರೂಪಾಯಿಯ ಪ್ಲಾನ್! 2GB ಡೇಟಾ, 5 ತಿಂಗಳ ವ್ಯಾಲಿಡಿಟಿ ಜೊತೆಗೆ ಹಲವು ಲಾಭಗಳು!
ಮೇಲಿನ ಎರಡು ಯೋಜನೆಗಳ ಬಳಕೆದಾರರಿಗೆ ಉಚಿತ ನೆಟ್​ಫ್ಲಿಕ್ಸ್ ಪ್ರಯೋಜನವನ್ನು ನೀಡುತ್ತಿದೆ. 1299 ರೂಪಾಯಿ ಪ್ಲಾನ್​ ಮೂಲಕ ನೆಟ್​ಫ್ಲಿಕ್ಸ್​ ಉಚಿತ ಪ್ರವೇಶ ದೊರೆತರೆ, 1799 ರೂಪಾಯಿ ಪ್ಲಾನ್​ ಮೂಲಕ ಬೇಸಿಕ್​ ಪ್ರಯೋಜನ ಒದಗಸುತ್ತದೆ. ​​​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us