newsfirstkannada.com

ಭಾರತದಲ್ಲಿ ಟೆಲಿಗ್ರಾಂ ಆ್ಯಪ್​ ಬ್ಯಾನ್​​? ತನಿಖೆಗೆ ಇಳಿದ ಕೇಂದ್ರ

Share :

Published August 28, 2024 at 6:54am

    ಜನಪ್ರಿಯ ಮೆಸೇಜಿಂಗ್​ ​ಆ್ಯಪ್ ಟೆಲಿಗ್ರಾಂಗೆ ಸಂಕಷ್ಟ​

    ಭಾರತದಲ್ಲಿ 5 ಮಿಲಿಯನ್​​ ಬಳಕೆದಾರರನ್ನು ಹೊಂದಿದೆ

    11 ವರ್ಷದ ಸುದೀರ್ಘ ಬೆಳವಣಿಗೆ ಅಂತ್ಯವಾಗುತ್ತಾ?

ಜನಪ್ರಿಯ ಮೆಸೇಜಿಂಗ್​ ​ಟೆಲಿಗ್ರಾಂ ಆ್ಯಪ್​ಗೆ ಸಂಕಷ್ಟ ಎದುರಾಗಿದೆ. ಭಾರತದಲ್ಲಿ ಸುಮಾರು 5 ಮಿಲಿಯನ್​​ ಬಳಕೆದಾರರನ್ನು ಹೊಂದಿರುವ ಈ ಆ್ಯಪ್​ ಬ್ಯಾನ್​ ಆಗುವ ನಿರೀಕ್ಷೆಯಿದೆ. ಸದ್ಯ ಕಂಪನಿ ವಿರುದ್ಧ ಕೇಂದ್ರವು ಸುಲಿಗೆ, ಜೂಜು, ಷೇರು ಮಾರುಕಟ್ಟೆ ವಂಚನೆಯಂತಹ ಅಪರಾಧ ಚಟುವಟಿಕೆಗಳ ಮೂಲಕ ದುರ್ಬಳಕೆ ಮಾಡುತ್ತಿರುವ ವಿಚಾರವಾಗಿ ತನಿಖೆ ನಡೆಸಲು ಮುಂದಾಗಿದೆ. ಒಂದು ವೇಳೆ ಈ ಆ್ಯಪ್​ನಲ್ಲಿ ಅಕ್ರಮಗಳು ನಡೆಯುತ್ತಿರುವುದು ಬೆಳಕಿಗೆ ಬಂದರೆ ಬ್ಯಾನ್​ ಆಗೋದು ನಿಶ್ಚಿತ.

ಗೃಹ ವ್ಯವಹಾರ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಕುರಿತಾಗಿ ತನಿಖೆಗೆ ಇಳಿದಿವೆ. ಆ್ಯಪ್​ ಕುರಿತು ಅದರಲ್ಲಿ ನಡೆಯುವ ಅವ್ಯವಹಾರಗಳ ಕುಳಿತು ಪರಿಶೀಲಿಸಲು ಮುಂದಾಗಿವೆ.

ಇದನ್ನೂ ಓದಿ: BSNL: ಗ್ರಾಹಕರ ಕಣ್ಣಿಗೆ ಬಿದ್ದ 397 ರೂಪಾಯಿಯ ಪ್ಲಾನ್! 2GB ಡೇಟಾ, 5 ತಿಂಗಳ ವ್ಯಾಲಿಡಿಟಿ ಜೊತೆಗೆ ಹಲವು ಲಾಭಗಳು!

ಮತ್ತೊಂದು ವಿವಾದದಲ್ಲಿ ಟೆಲಿಗ್ರಾಂ!

ಭಾರತ ಈಗಾಗಲೇ ಟೆಲಿಗ್ರಾಂ ಕುಳಿತು ತನಿಖೆ ನಡೆಸುತ್ತಿದೆ. ಆದರೆ ಇದರ ನಡುವೆ ಟೆಲಿಗ್ರಾಂ ಮುಖ್ಯಸ್ಥ ಪಾವೆಲ್​​ ಡುರೋವ್​​ ಅವರನ್ನು ಪ್ಯಾರಿಸ್​ನಲ್ಲಿ ಅರೆಸ್ಟ್​ ಮಾಡಲಾಗಿದೆ. ಮಾಡರೇಶನ್​​ ನೀತಿಗಳ ಮೇಲೆ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಏನಿದು ಸೆಲ್ಯುಲರ್​ ಜ್ಯಾಮಿಂಗ್? ಜೈಲಿನಲ್ಲಿ ಜಾಮರ್​ ಇದೆಯಾ? ದರ್ಶನ್​​ ಕರೆ ಬರಲು ಹೇಗೆ ಸಾಧ್ಯ!

11 ವರ್ಷದ ಸುಧೀರ್ಘ ಬೆಳವಣಿಗೆ

ವಾಟ್ಸ್​ಆ್ಯಪ್​ ಎಂಬ ಜನಪ್ರಿಯ ಅಪ್ಲಿಕೇಶನ್​​ ನಡುವೆ ಪೈಪೋಟಿ ನೀಡಲೆಂದು ಟೆಲಿಗ್ರಾಂ ಆ್ಯಪ್​ ಪರಿಚಯಿಸಲಾಯಿತು. 2013ರಲ್ಲಿ ಪಾವೆಲ್​​ ಮತ್ತು ನಿಕೊಲಾಯ್​​​ ಡ್ಯುರೋವ್​​ ಈ ಆ್ಯಪ್​ ಅನ್ನು ಪ್ರಾರಂಭಿಸಿದರು. 11 ವರ್ಷದಲ್ಲಿ ಟೆಲಿಗ್ರಾಂ ಆ್ಯಪ್​ ಸುದೀರ್ಘವಾಗಿ ಬೆಳೆದಿದೆ. 2024ರಲ್ಲಿ 950 ಮಿಲಿಯನ್​ ಬಳಕೆದಾರರನ್ನು ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದಲ್ಲಿ ಟೆಲಿಗ್ರಾಂ ಆ್ಯಪ್​ ಬ್ಯಾನ್​​? ತನಿಖೆಗೆ ಇಳಿದ ಕೇಂದ್ರ

https://newsfirstlive.com/wp-content/uploads/2024/08/Telegram.jpg

Load More