newsfirstkannada.com

Jio ಪ್ರಿಪೇಯ್ಡ್ & ಪೋಸ್ಟ್‌ಪೇಯ್ಡ್ ದರದಲ್ಲಿ ಭಾರೀ ಏರಿಕೆ; ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ?

Share :

Published June 27, 2024 at 7:36pm

Update June 27, 2024 at 7:49pm

    ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ದರದಲ್ಲಿ ಏರಿಕೆ

    ಜನಪ್ರಿಯ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಗ್ರಾಹಕರಿಗೆ ಫುಲ್ ಶಾಕ್

    ರಿಲಯನ್ಸ್ ಜಿಯೋ ಲಿಮಿಟೆಡ್ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಹೇಳಿದ್ದೇನು?

ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಇದೇ ಮೊದಲ ಬಾರಿಗೆ ತನ್ನ ರೀಚಾರ್ಜ್ ಯೋಜನೆ ಬೆಲೆಯನ್ನು ಏರಿಸುವ ಮೂಲಕ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ನೀಡಿದೆ. ಹೌದು, ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಗಳ ಮೇಲೆ 20% ದರ ಹೆಚ್ಚಿಸಿದೆ.

ಇದನ್ನೂ ಓದಿ: Breaking news: ಜಿಯೋ ಗ್ರಾಹಕರಿಗೆ ಬಿಗ್ ಶಾಕ್‌.. ಪ್ರಿಪೇಯ್ಡ್ ದರ ಭಾರೀ ಏರಿಕೆ; ಎಷ್ಟು?

ರಿಲಯನ್ಸ್ ಒಡೆತನದ ಜಿಯೋ ಗುರುವಾರ ಹೊಸ ಯೋಜನೆಗಳ ಪ್ರಾರಂಭದೊಂದಿಗೆ ದರದಲ್ಲಿ 12.5 ರಿಂದ 25 ಪ್ರತಿಶತದಷ್ಟು ಹೆಚ್ಚಿಸಲಾಗಿದೆ ಎಂದು ಘೋಷಿಸಿದೆ. ಇನ್ನು, ಈ ಪರಿಷ್ಕೃತ ಯೋಜನೆಗಳು ಜುಲೈ 3, 2024 ರಿಂದ ಜಾರಿಗೆ ಬರುತ್ತವೆ. ಗ್ರಾಹಕರಿಗೆ ಎರಡೂವರೆ ವರ್ಷಗಳ ಬಳಿಕ ಜಿಯೋ ಪ್ರಿಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ರೀಚಾರ್ಜ್​ ಯೋಜನೆಯಲ್ಲಿ ಮೊದಲ ಹೆಚ್ಚಳ ಕಂಡಿದೆ.

ಜೊತೆಗೆ ವಾರ್ಷಿಕ ಯೋಜನೆ ಈಗ ರೂ. 3599, ಇದು 20% ಹೆಚ್ಚಳವಾಗಿದೆ. ಪ್ರಿಪೇಯ್ಡ್ ಪ್ಲಾನ್‌ಗಳಿಗೆ ಹೊಂದಿಸಲು ಕಂಪನಿಯು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಹೆಚ್ಚಿಸಿದೆ. ಜಾಗತಿಕವಾಗಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಬದ್ಧತೆಗೆ ಅನುಗುಣವಾಗಿ ಈ ಹೆಚ್ಚಳವಾಗಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ. ಈ ಮೂಲಕ ಹೊಸ ಜಿಯೋ ಗ್ರಾಹಕರಿಗೆ ಫುಲ್ ಶಾಕ್ ನೀಡಿದೆ.​

ಇದನ್ನೂ ಓದಿ: ಇಂಗ್ಲೆಂಡ್​​, ಟೀಮ್​ ಇಂಡಿಯಾ ನಡುವಿನ ಪಂದ್ಯ ದಿಢೀರ್​ ರದ್ದು? ಕಾರಣವೇನು?

ಈ ಬಗ್ಗೆ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಪ್ರತಿಕ್ರಿಯಿಸಿದ್ದಾರೆ. ಹೊಸ ಯೋಜನೆಗಳ ಪರಿಚಯವು ಉದ್ಯಮದ ನಾವೀನ್ಯತೆಯನ್ನು ಹೆಚ್ಚಿಸುವ ಮತ್ತು 5G ಮತ್ತು AI ತಂತ್ರಜ್ಞಾನದಲ್ಲಿನ ಹೂಡಿಕೆಗಳ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಸರ್ವತ್ರ, ಉತ್ತಮ ಗುಣಮಟ್ಟದ, ಕೈಗೆಟುಕುವ ಇಂಟರ್ನೆಟ್ ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ ಮತ್ತು ಇದಕ್ಕೆ ಕೊಡುಗೆ ನೀಡಲು ಜಿಯೋ ಹೆಮ್ಮೆಪಡುತ್ತದೆ. ಜಿಯೋ ಯಾವಾಗಲೂ ನಮ್ಮ ದೇಶ ಮತ್ತು ಗ್ರಾಹಕರನ್ನು ಮೊದಲ ಸ್ಥಾನದಲ್ಲಿರಿಸುತ್ತದೆ ಮತ್ತು ಭಾರತಕ್ಕಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತದೆ.

ಇನ್ನು, ಇದರಲ್ಲಿ ಟ್ವಿಸ್ಟ್​ ಎಂದರೆ ರೀಚಾರ್ಜ್​ ಯೋಜನೆಯಲ್ಲಿ ಏರಿಕೆ ಕಂಡಿದ್ದು ಹೊಸ ಬಳಕೆದಾರರಿಗೆ ಮಾತ್ರ. ಈ ದರ ಹೆಚ್ಚಳವು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಅನ್ವಯಿಸುವುದಿಲ್ಲ. JioBharat/JioPhone ಬಳಕೆದಾರರು ಅಸ್ತಿತ್ವದಲ್ಲಿರುವ ದರವನ್ನೇ ಮುಂದುವರಿಸುತ್ತಾರೆ ಎಂದು ಟೆಲಿಕಾಂ ಕಂಪನಿ ಘೋಷಿಸಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಮೂಲ ಯೋಜನೆ ಈಗ ರೂ. 189, ಇದು 21.9% ಹೆಚ್ಚಳವಾಗಿದೆ ಮತ್ತು ಇತರ ಯೋಜನೆಗಳು 12 ರಿಂದ 25% ರ ನಡುವೆ ಹೆಚ್ಚಳವನ್ನು ಕಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jio ಪ್ರಿಪೇಯ್ಡ್ & ಪೋಸ್ಟ್‌ಪೇಯ್ಡ್ ದರದಲ್ಲಿ ಭಾರೀ ಏರಿಕೆ; ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ?

https://newsfirstlive.com/wp-content/uploads/2024/06/jio3.jpg

Load More