65 ಮಂದಿಗೆ ಮಹೀಂದ್ರಾ XUV 700 ಮತ್ತು ಸ್ಕಾರ್ಪಿಯೋ ಕಾರು ಗಿಫ್ಟ್
ಸಿಮೆಂಟ್ ಉತ್ಪಾದನೆ ಹಾಗೂ ಸರಬರಾಜು ಮಾಡುವ JK ಕಂಪನಿ
ಬರೋಬ್ಬರಿ 600 ಕಾರುಗಳನ್ನು ಗಿಫ್ಟ್ ಕೊಟ್ಟಿದ ಸೂರತ್ ವಜ್ರದ ವ್ಯಾಪಾರಿ
ಒಂದು ಕಂಪನಿಯಲ್ಲಿ ಚೆನ್ನಾಗಿ ಕೆಲಸ ಮಾಡೋ ಉದ್ಯೋಗಿಗಳಿಗೆ ಬೋನಸ್, ಇನ್ಸೆಂಟಿವ್, ಫಾರೀನ್ ಟ್ರಿಪ್ ಸೇರಿದಂತೆ ಗಿಫ್ಟ್‌ಗಳನ್ನ ಕೊಡಲಾಗುತ್ತೆ. ತನ್ನ ಕಂಪನಿಯ ಲಾಭಕ್ಕೆ ನೆರವಾಗುವ ಅತ್ಯುತ್ತಮ ಕೆಲಸಗಾರರನ್ನ ಗುರುತಿಸಿ ಅವರನ್ನ ಪ್ರೋತ್ಸಾಹ ನೀಡುವ ಕೆಲಸ ಮಾಡಿದೆ. ಆದರೆ JK ಸಿಮೆಂಟ್ ಕಂಪನಿ ಅತ್ಯುತ್ತಮ ಕೆಲಸ ಮಾಡಿದ 65 ಜನರಿಗೆ ಮಹೀಂದ್ರಾ XUV 700 ಮತ್ತು ಸ್ಕಾರ್ಪಿಯೋ ಕಾರು ಗಿಫ್ಟ್ ಕೊಟ್ಟು ನೋಡುಗರು ಹುಬ್ಬೇರುವಂತೆ ಮಾಡಿದೆ.
ದೇಶಾದ್ಯಂತ ಸಿಮೆಂಟ್ ಉತ್ಪಾದನೆ ಹಾಗೂ ಸರಬರಾಜು ಮಾಡುವ JK ಕಂಪನಿಗಾಗಿ ತನ್ನ ಡೀಲರ್‌ಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ 65 ಅತ್ಯುತ್ತಮ ಡೀಲರ್‌ಗಳನ್ನು ಆಯ್ಕೆ ಮಾಡಿದ್ದು, ಅವರಿಗೆ ಮಹೀಂದ್ರಾ XUV 700 ಮತ್ತು ಸ್ಕಾರ್ಪಿಯೋ ಕಾರು ಗಿಫ್ಟ್ ನೀಡಿದೆ. ಇದರಿಂದ JK ಸಿಮೆಂಟ್ ಕಂಪನಿ ಹಾಗೂ ಡೀಲರ್ ನೆಟ್‌ವರ್ಕ್ ಉತ್ತಮಗೊಳ್ಳುತ್ತದೆ ಅನ್ನೋದು ಕಂಪನಿಯ ನಂಬಿಕೆ. ಮಹೀಂದ್ರಾ XUV 700 ಕಾರಿನ ಬೆಲೆ ಸದ್ಯ ಭಾರತದ ಮಾರುಕಟ್ಟೆಯಲ್ಲಿ 26 ಲಕ್ಷದಿಂದ 33 ಲಕ್ಷದವರೆಗೂ ಇದೆ.
ಇದನ್ನೂ ಓದಿ: ಅಜ್ಜ ಖರೀದಿಸಿದ್ದ 1 ಷೇರ್ನಿಂದ ಮೊಮ್ಮಗನಿಗೆ ಜಾಕ್‌ಪಾಟ್.. ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
JK ಸಿಮೆಂಟ್ ಕಂಪನಿ 65 ಕಾರು ಗಿಫ್ಟ್ ಕೊಡುವುದರ ಜೊತೆಗೆ JK ರೀತಿಯಲ್ಲಿ ಕಾರು ನಿಲ್ಲಿಸಿ ಅದರ ಮುಂದೆ ಪ್ರಶಸ್ತಿ ವಿಜೇತರನ್ನು ನಿಲ್ಲಿಸಿ ಫೋಟೋ ತೆಗೆದುಕೊಂಡಿದೆ. ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದೆ.
ಇದನ್ನೂ ಓದಿ: ಈ ಉದ್ಯೋಗಿಗಳಿಗೆ ದೀಪಾವಳಿಯ ಭರ್ಜರಿ ಗಿಫ್ಟ್; ಟಾಟಾ ಪಂಚ್ ಕಾರುಗಳನ್ನು ನೀಡಿದ ಕಂಪನಿ ಮಾಲೀಕ..!
2018ರಲ್ಲಿ ಗುಜರಾತ್ ಸುರತ್‌ನ ವಜ್ರದ ವ್ಯಾಪಾರಿ 600 ಕಾರುಗಳನ್ನು ತನ್ನ ಕಂಪನಿಯ ಉದ್ಯೋಗಿಗಳಿಗೆ ಗಿಫ್ಟ್ ಕೊಟ್ಟು ಇಡೀ ದೇಶದ ಗಮನ ಸೆಳೆದಿದ್ದರು. ಇದೀಗ JK ಸಿಮೆಂಟ್ ಕಂಪನಿಯು ತನ್ನ ಪಾಲುದಾರಿಕೆ ಹಾಗೂ ನೆಟ್‌ವರ್ಕ್ ಅತ್ಯುತ್ತಮವಾಗಿರಲಿ ಎಂದು ಈ ದುಬಾರಿ ಉಡುಗೊರೆಗಳನ್ನು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ