ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಜೂನಿಯರ್ NTR ಸಹೋದರ.. ಬಾಲಯ್ಯನ ಫ್ಯಾನ್ಸ್​ ಫುಲ್ ಖುಷ್!

author-image
Bheemappa
Updated On
ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಜೂನಿಯರ್ NTR ಸಹೋದರ.. ಬಾಲಯ್ಯನ ಫ್ಯಾನ್ಸ್​ ಫುಲ್ ಖುಷ್!
Advertisment
  • ‘ತಾತಾ ಎನ್​ಟಿಆರ್ ಆಶೀರ್ವಾದ ನಿಮ್ಮ ಮೇಲೆ ಇರಲಿ’
  • ಸಿನಿ ರಂಗಕ್ಕೆ ಎಂಟ್ರಿಕೊಟ್ಟ ಎನ್​ಟಿಆರ್ ಕುಟುಂಬದ ಕುಡಿ
  • ಮೊದಲ ಬಾರಿಗೆ ಲೀಡ್​ ರೋಲ್​ನಲ್ಲಿ ​NTR ಸಹೋದರ

ಟಾಲಿವುಡ್​ ನಟ ನಂದಮೂರಿ ಬಾಲಕೃಷ್ಣ ಆಂಧ್ರ ಪ್ರದೇಶದ ದಿವಂಗತ ಮಾಜಿ ಸಿಎಂ ಹಾಗೂ ದಿಗ್ಗಜ ನಟ ಎನ್‌ಟಿ ರಾಮರಾವ್ ಅವರ ಮಗ. ತೆಲುಗು ಇಂಡಸ್ಟ್ರಿಯಲ್ಲಿ ತಮ್ಮ ಅಭಿನಯದ ಮೂಲಕ ಎನ್​ಟಿಆರ್​ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿ, ಈಗಲೂ ಜನಮನದಲ್ಲಿದ್ದಾರೆ. ನಟನೆ ಎಂದರೆ ಎನ್​ಟಿಆರ್​ನಂತೆ ಇರಬೇಕು ಎನ್ನುವಂತೆ ಅವರ ಪಾತ್ರದ ಅಭಿಯನ ಹೇಳುತ್ತದೆ. ಸದ್ಯ ಇದೆಲ್ಲ ಏಕೆ ಎಂದರೆ ಎನ್​ಟಿಆರ್​ ಫ್ಯಾಮಿಲಿಯಿಂದ ಮತ್ತೊಬ್ಬರು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ನಟ ನಾಗಶೇಖರ್ ಕಾರ್​ ಅಪಘಾತ; ಮರಕ್ಕೆ ಡಿಕ್ಕಿ ಹೊಡೆದು ಆ್ಯಕ್ಸಿಡೆಂಟ್​; ಆಮೇಲೇನಾಯ್ತು?

publive-image

ಪ್ರಸಿದ್ಧ ನಟರಾಗಿರುವ ನಟ ನಂದಮೂರಿ ಬಾಲಕೃಷ್ಣ ಅವರ ಮಗ ಮೋಕ್ಷಜ್ಞಾ ತೇಜ್ (Nandamuri Mokshagna Teja) ಅವರು ತೆಲುಗು ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ನಟನಾಗಿ ಬಾಲಕೃಷ್ಣ ಮಗ ಮೋಕ್ಷಜ್ಞಾ ತೇಜ್ ಅಭಿನಯ ಮಾಡುತ್ತಿದ್ದಾರೆ. ಸದ್ಯ ಈ ಮಾಹಿತಿ ತಿಳಿದು ಜೂನಿಯರ್ ಎನ್​ಟಿಆರ್ ಅವರು ಸಹೋದರ ಮೋಕ್ಷಜ್ಞಾ ತೇಜ್​ಗೆ ಎಕ್ಸ್​ನಲ್ಲಿ ಅಭಿನಂದನೆ ತಿಳಿಸಿದ್ದಾರೆ. ತಾತಾ ಎನ್​​ಟಿಆರ್ ಆಶೀರ್ವಾದ ಸೇರಿದಂತೆ ಎಲ್ಲ ದೈವಿಕ ಶಕ್ತಿಗಳ ಆಶೀರ್ವಾದ ನಿಮ್ಮ ಮೇಲೆ ಇರಲೆಂದು ಬರೆದು ಪೋಸ್ಟ್​ ಅನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ:ಮಕ್ಕಳಿಗೆ ಐಸ್​ ಕ್ರೀಂ ಕೊಡಿಸುವ ಮುನ್ನ ಹುಷಾರ್​.. ಪೋಷಕರು ಓದಲೇಬೇಕಾದ ಸ್ಟೋರಿ


">September 6, 2024

ತಮ್ಮ ಹುಟ್ಟುಹಬ್ಬದ ದಿನವೇ ಮೋಕ್ಷಜ್ಞಾ ತೇಜ್ ಹೊಸ ಸಿನಿಮಾದಲ್ಲಿ ಅಭಿನಯ ಮಾಡಲು ಶುರು ಮಾಡಿದ್ದಾರೆ. ಈ ಸಂಬಂಧ ಅವರ ಕುಟುಂಬ ಸದಸ್ಯರು ಸೇರಿದಂತೆ ಬಾಲಯ್ಯ ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ. ಮೋಕ್ಷಜ್ಞಾ ತೇಜ್ ಅಭಿನಯ ಮಾಡುತ್ತಿರುವ ಸಿನಿಮಾದ ಟೈಟಲ್ ಏನು ಎಂಬುದು ತಿಳಿದು ಬಂದಿಲ್ಲ. ಅಲ್ಲದೇ ಕಲಾವಿದರ ಪಾತ್ರಗಳನ್ನು ರಿವೀಲ್ ಮಾಡಿಲ್ಲ. ಇನ್ನು ಬಾಲಯ್ಯನ ಮಗನ ಮೊದಲ ಸಿನಿಮಾವಾಗಿದ್ದರಿಂದ ಲವ್​ ಸ್ಟೋರಿ ಸಿನಿಮಾ ಆಗಿರಬಹುದೆಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment