ಕಾಂಗ್ರೆಸ್​ ಮುಖಂಡನ ಕಪಾಳಕ್ಕೆ ಬಾರಿಸಿದ DK ಶಿವಕುಮಾರ್​​.. ಅಸಲಿಗೆ ಆಗಿದ್ದೇನು..? Video

author-image
Ganesh
Updated On
ಕಾಂಗ್ರೆಸ್​ ಮುಖಂಡನ ಕಪಾಳಕ್ಕೆ ಬಾರಿಸಿದ DK ಶಿವಕುಮಾರ್​​.. ಅಸಲಿಗೆ ಆಗಿದ್ದೇನು..? Video
Advertisment
  • ಪ್ರಚಾರದ ವೇಳೆ ಮುಖಂಡನ ಮೇಲೆ ಸಿಟ್ಟಿಗೆದ್ದ ಶಿವಕುಮಾರ್
  • ವಿನೋದ್‌ ಅಸೂಟಿ ಪರ ಪ್ರಚಾರ ಮಾಡ್ತಿದ್ದಾಗ ಘಟನೆ
  • ಶಿವಕುಮಾರ್​ ಕೋಪಕ್ಕೆ ಕಾರಣವಾಗಿದ್ದು ಯಾವ ವಿಚಾರ?

ಹಾವೇರಿ: ಪ್ರಚಾರದ ವೇಳೆ ಕಾಂಗ್ರೆಸ್​ ಮುಖಂಡನಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

ಆಗಿದ್ದೇನು..?
ನಿನ್ನೆಯ ದಿನ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಪರ ಪ್ರಚಾರಕ್ಕೆ ಬಂದಿದ್ದರು. ರಾತ್ರಿ ಸವಣೂರು ಪಟ್ಟಣದಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ಶಿವಕುಮಾರ್ ಅವರ ಕಾರಿನ ಮುಂದೆ ಜಮಾಯಿಸಿದ್ದರು.

ಇದನ್ನೂ ಓದಿ:ಕೊಹ್ಲಿಯನ್ನೇ ಮೀರಿಸಿದ ಗ್ರೀನ್.. ಈ ಬಾರಿ ಹೃದಯ ಗೆದ್ದಿದ್ದು ವಿರಾಟ್ ಅಲ್ಲ..! Video

ಡಿ.ಕೆ.ಶಿವಕುಮಾರ್ ಪರ ಜೋರಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಆಗ ಶಿವಕುಮಾರ್ ಕಾರಿನಿಂದ ಇಳಿದು ಮುಂದೆ ಸಾಗಲು ಪ್ರಯತ್ನಿಸಿದ್ದಾರೆ. ಕಾರಿನಿಂದ ಶಿವಕುಮಾರ್ ಕೆಳಗಿಳಿಯುತ್ತಿದ್ದಂತೆ ಮುಖಂಡರೊಬ್ಬರು ಹೆಗಲ ಮೇಲೆ ಕೈಹಾಕಿ ಪೋಸ್ ನೀಡಲು ಮುಂದಾಗಿದ್ದಾರೆ.

ಇದರಿಂದ ಕೋಪಿಸಿಕೊಂಡ ಶಿವಕುಮಾರ್, ಕಪಾಳಕ್ಕೆ ಬಾರಿಸಿದ್ದಾರೆ. ಪುರಸಬೆ ಸದಸ್ಯ ಅಲ್ಲಾವುದ್ದೀನ್ ಮನಿಯಾರ್​​ ಕಪಾಳಕ್ಕೆ ಶಿವಕುಮಾರ್ ಹೊಡೆದಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:3 ಓವರ್​​ಗೆ 46, 6 ಓವರ್​​ನಷ್ಟಕ್ಕೆ 93 ರನ್..! ಆದರೂ ಆರ್​ಸಿಬಿಗೆ ಬಿಗ್ ಶಾಕ್​ ಕೊಟ್ಟ ಜೋಸುವಾ ಲಿಟ್ಲೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment