/newsfirstlive-kannada/media/post_attachments/wp-content/uploads/2023/07/Kabini-Dam.jpg)
ಮೈಸೂರು: ರಾಜ್ಯದ ಕೆಲವೆಡೆ ಮಳೆ ಸುರಿಯುತ್ತಿದೆ. ಕೆರೆ, ನದಿಗಳು ತುಂಬಿ ಹರಿಯುತ್ತಿವೆ. ಅದರಂತೆಯೇ ಕಬಿನಿ ಜಲಾಶಯ ಒಳಹರಿವು ಕೂಡ ಹೆಚ್ಚಳವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲೂ ಭಾರೀ ಹೆಚ್ಚಳವಾಗಿದೆ.
ಇದನ್ನೂ ಓದಿ: ನಮ್ಮ ಮನೆಯೇ ನಾಶವಾಯಿತು.. ಟಿಟಿ ವಾಹನ ಅಪಘಾತದಲ್ಲಿ ಅಣ್ಣನ ಮೃತದೇಹ ಕಂಡು ತಮ್ಮನ ಆಕ್ರಂದನ
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯವು ಸಮುದ್ರ ಮಟ್ಟದಿಂದ 2284 ಅಡಿ ಗರಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 2272.51 ಅಡಿಗಳಷ್ಟಿವೆ.
/newsfirstlive-kannada/media/post_attachments/wp-content/uploads/2023/07/Kabini-River.jpg)
ಕಬಿನಿ ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ. ಜಲಾಶಯದಲ್ಲಿಂದು 12.94 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಇಂದಿನ ಒಳಹರಿವು 20113 ಕ್ಯೂಸೆಕ್ ಇದೆ. ಜಲಾಶಯದ ಹೊರಹರಿವು 1000 ಕ್ಯೂಸೆಕ್ ಇದೆ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಗೆ 12 ಅಡಿಗಳು ಬಾಕಿ ಉಳಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us