/newsfirstlive-kannada/media/post_attachments/wp-content/uploads/2024/08/Sunitha-williams.jpg)
ನವದೆಹಲಿ: ಕಲ್ಪನಾ ಚಾವ್ಲಾ, ಯಾರಿಗೆ ನೆನಪಿಲ್ಲ, ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತು ಎಂದೂ ಮರೆಯದ ಸಾಹಸಕ್ಕೆ ಕೈ ಹಾಕಿ ಸಾವನ್ನು ತಂದುಕೊಂಡ ಹೆಮ್ಮೆಯ ಭಾರತೀಯ ಕುವರಿ. ಸದ್ಯ ಸುನೀತಾ ವಿಲಿಯಮ್ಸ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಅವರಂತೆಯೇ ಸ್ಪೇಸ್ ಜೆಟ್ ಏರಿ ಗಗನಯಾನಕ್ಕೆ ಹೋಗಿದ್ದಾರೆ. ಸದ್ಯ ಅವರನ್ನು ಮತ್ತೆ ಭೂಮಿಗೆ ಕರೆಸಿಕೊಳ್ಳುವ ವಿಚಾರದಲ್ಲಿ ನಾಸಾಗೆ ನೂರೆಂಟು ಸಮಸ್ಯೆಗಳು ಕಾಡುತ್ತಿವೆ. ಕಲ್ಪನಾ ಚಾವ್ಲಾ ಸಮಯದಲ್ಲಿಯೇ ಆದಂತ ದುರಂತ ಮತ್ತೆ ಮರಕಳಿಸುವ ಆತಂಕ ಸದ್ಯ ನಾಸಾದಲ್ಲಿ ಮನೆ ಮಾಡಿದೆ
ಇದನ್ನೂ ಓದಿ: ಅಮೆರಿಕಾದಲ್ಲಿ ಸಂಭ್ರಮದ ಅಕ್ಕ ವಿಶ್ವ ಸಮ್ಮೇಳನ; ವರ್ಜಿನಿಯಾದಲ್ಲಿ ಹೇಗಿದೆ ಕನ್ನಡ ಕಲರವ?
2003 ಫೆಬ್ರವರಿ 1 ರಂದು ಗಗನಯಾನ ಮುಗಿಸಿ ವಾಪಸ್ ಬರುವ ವೇಳೆ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಇರುವ ಸ್ಪೇಸ್ ಜೆಟ್ ಕೊಲೊಂಬಿಯಾದಲ್ಲಿ ಭೂಸ್ಪರ್ಶ ಮಾಡುವ ಮೊದಲೇ ಉರಿದುರಿದು ಹೋಗಿತ್ತು. ಇದಕ್ಕೂ ಮೊದಲು ಅಂದ್ರೆ 1986ರ ಜನವರಿ 28 ರಂದು ನಡೆದ ಭೀಕರ ದುರಂತದಲ್ಲಿ ಸುಮಾರು 14 ಜನ ಗಗನಯಾನಿಗಳು ಸಾವನ್ನಪ್ಪಿದ್ದರು. ಹಿಂದೆ ಇಂತಹ ದುರಂತ ಇತಿಹಾಸವನ್ನಿಟ್ಟಕೊಂಡ ಮೇಲೂ ನಾಸಾ ಮತ್ತೆ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಹಸಗಳನ್ನು ಮಾಡುತ್ತಲೇ ಇದೆ. ಆದ್ರೆ ಇದೇ ನಾಸಾದ ಮುಖ್ಯಸ್ಥ ಅಂದು ನಡೆದ ಗಗನಯಾನದ ಟೀಂನ ಸದಸ್ಯರಾಗಿದ್ದರು. ಅವರೇ ಹೇಳುವಂತೆ ಅದು ನಾಸಾ ಮಾಡಿದ ಅತಿದೊಡ್ಡ ತಪ್ಪು ನಿರ್ಧಾರ ಹಾಗೂ ದೊಡ್ಡ ಪ್ರಮಾದ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮನುಷ್ಯನಂತೆ ಮಂಗನಿಗೂ ಇದೆ ಒಂದು ಕಲೆ; ಹೊಸ ಅಧ್ಯಯನ ಬಿಚ್ಚಿಟ್ಟ ಅಚ್ಚರಿಯೇನು?
ಈಗ ಗಗನದಲ್ಲಿ ಸಂಚರಿಸುತ್ತಿರುವ ಬೋಯಿಂಗ್ ಸ್ಟಾರ್ಲೈನರ್ ಗಗನನೌಕೆಯನ್ನ ವಾಪಸ್ ಕರೆತರುವಲ್ಲಿಯೂ ಕೂಡ ಅನೇಕ ಸವಾಲುಗಳು ಬಾಹ್ಯಾಕಾಶ ವಿಜ್ಞಾನಿಗಳ ಮುಂದಿದೆ. ಈಗಾಗಲೇ ಸ್ಪೇಸ್ ಜೆಟ್ನಲ್ಲಿ ಈಗಾಗಲೇ ಸ್ಪೇಸ್ ಕ್ರಾಫ್ಟ್ನಲ್ಲಿ ಹಿಲೀಯಂ ಸೋರಿಕೆಯಾಗಿ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿತ್ತು. ಸುನಿತಾ ವಿಲಿಯಮ್ಸ್ರನ್ನ ವಾಪಸ್ ಭೂಮಿಗೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಆದ್ರೆ ಈ ಹಿಂದೆ ನಡೆದ ಎರಡು ದುರಂತಗಳು ನಾಸಾದ ವಿಜ್ಞಾನಿಗಳನ್ನು ವಿಚಲಿತಗೊಳಿಸಿವೆ. ಐತಿಹಾಸಿಕ ಪ್ರಮಾದ ಮತ್ತೆ ಜರುಗದಂತೆ, ಮರುಕಳಿಸದಂತೆ ಸುನೀತಾಳರನ್ನ ವಾಪಸ್ ಕರೆಸಿಕೊಳ್ಳುವ ದೊಡ್ಡ ಸವಾಲು ನಾಸಾದ ಮುಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ